Connect with us

ಸ್ಪೆಶಲ್ ಅಭಿಮಾನಿಗಾಗಿ ಅವರ ಮನೆಗೇ ಹೋಗ್ತಾರಂತೆ ಕಿಚ್ಚ!

ಸ್ಪೆಶಲ್ ಅಭಿಮಾನಿಗಾಗಿ ಅವರ ಮನೆಗೇ ಹೋಗ್ತಾರಂತೆ ಕಿಚ್ಚ!

ಬೆಂಗಳೂರು: ಸಾಮಾನ್ಯವಾಗಿ ಸುದೀಪ್ ಗೆ ಅವರಿಗೆ ಆಸುಪಾಸಿನ ವಯಸ್ಸಿನವರು ಇಲ್ಲವೇ ಯಂಗ್‍ಸ್ಟರ್ಸ್ ಫ್ಯಾನ್ಸ್ ಇರೋದು ನೋಡಿದ್ದೇವೆ. ಇನ್ನೂ ಹೇಳೋದಾದರೆ ಕಿಚ್ಚನ ಸ್ಟೈಲ್‍ಗೆ ಪುಟ್ಟ ಪುಟ್ಟ ಮಕ್ಕಳೂ ಫಿದಾ ಆಗಿದ್ದನ್ನು ನೋಡಿದ್ದೀವಿ. ಆದರೆ ಇಲ್ಲೊಬ್ಬರು ಅಭಿಮಾನಿ ತುಂಬಾನೇ ಸ್ಪೆಷಲ್. ಅವರು 82 ವರ್ಷದ ಹಿರಿಯ ಅಭಿಮಾನಿ.

ಅಭಿನಯ ಚಕ್ರವರ್ತಿ ಸುದೀಪ್‍ಗೆ ರಾಜ್ಯಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ. ಆದರೆ ಇಲ್ಲೊಬ್ಬರು ಸ್ಪೆಶಲ್ ಅಭಿಮಾನಿಯಿದ್ದಾರೆ. ಇವರು ಕಿಚ್ಚನ ಯಾವುದೇ ಸಿನಿಮಾ ರಿಲೀಸ್ ಆದರೂ ಬಿಡದೇ ನೋಡುತ್ತಾರೆ. ಟಿವಿಯಲ್ಲಿ ಕಿಚ್ಚನ ಸಿನಿಮಾ ಬಂದರೆ ಸಾಕು ಕಣ್ಣು ಮಿಟುಕಿಸದಂತೆ ಕುರ್ಚಿ ಮೇಲೆ ಅಲ್ಲಾಡದೇ ಕೂತೇ ಬಿಡುತ್ತಾರೆ. ಕಿಚ್ಚನ ಸಲುವಾಗೇ ಬಿಗ್‍ಬಾಸ್ ನ ಐದೂ ಸರಣಿಯನ್ನು ನೋಡಿದ್ದಾರೆ.

ಈ ಸ್ಪೆಶಲ್ ಅಭಿಮಾನಿಗೆ ಈಗ 82 ವರ್ಷ. ಕನ್ನಡದ ಮೊಟ್ಟ ಮೊದಲ ಚಿತ್ರ ಬಂದಾಗಲೇ ಹುಟ್ಟಿದವರು. ಇವರಿಗೆ 60 ವರ್ಷ ಆದಾಗ ಸುದೀಪ್ ಬಣ್ಣ ಹಚ್ಚೋಕೆ ಶುರುಮಾಡಿದ್ದು. ಅಂಥದರಲ್ಲಿ ಈ ಅಜ್ಜಿಗೆ ಸುದೀಪ್ ಬಿಟ್ಟು ಬೇರೆ ಪ್ರಪಂಚವೇ ಇಲ್ಲ. ಅಂದಹಾಗೆ ಈ ಹಿರಿಯ ಅಭಿಮಾನಿ ಹೆಸರು ಪದ್ಮ.

ಸುದೀಪ್ ಎಲ್ಲಾ ಸಿನಿಮಾಗಳನ್ನೂ ನೋಡಿ, ಎಲ್ಲಾ ಕಾರ್ಯಕ್ರಮಗಳನ್ನೂ ನೋಡುವ ಈ ಅಜ್ಜಿಗೆ ಸುದೀಪ್ ಎಂದರೆ ಭಾರೀ ಇಷ್ಟ. ಮುಸುಕು ಮುಸುಕಾಗಿ ಕಾಣುವ ಕಣ್ಣಿನಲ್ಲೇ ಸುದೀಪ್ ಅಭಿನಯ ನೋಡಿ ಖುಷಿಪಡುತ್ತಾರೆ. ಈಗ ಸಾಮಾಜಿಕ ಜಾಲತಾಣದ ಅಭಿಮಾನಿ ಮತ್ತು ನಟರ ಮೀಡಿಯೇಟರ್. ಇದೀಗ ಈ ಅಜ್ಜಿ ಮನೆಯಲ್ಲಿಯೇ ಕುಳಿತು ತಮ್ಮ ನೆಚ್ಚಿನ ನಟನಿಗೊಂದು ಸಂದೇಶ ಕಳುಹಿಸಿದ್ದಾರೆ. ಈ ಸಂದೇಶ ಸುದೀಪ್ ಅವರಿಗೂ ತಲುಪಿದೆ.

ಅಭಿಮಾನಿಗಳ ಪ್ರೀತಿಗೆ ಸದಾ ಪ್ರತಿಕ್ರಿಯಿಸುವ ಕಿಚ್ಚ ಈ ಅಜ್ಜಿಯ ಪ್ರೀತಿಗೆ ಇನ್ನಿಲ್ಲದ ಖುಷಿಪಟ್ಟಿದ್ದಾರೆ. ಈ ಇಳಿ ವಯಸ್ಸಿನಲ್ಲಿ ಅಭಿಮಾನದ ಧಾರೆ ಎರೆಯುತ್ತಿರುವ ಪದ್ಮಜ್ಜಿಯನ್ನು ಮೀಟ್ ಮಾಡೋಕೆ ಅವರ ಮನೆಗೇ ಬರೋದಾಗಿ ಸುದೀಪ್ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ.

ಖಂಡಿತವಾಗಲೂ ನಿಮ್ಮ ಮನೆಗೆ ಬರುತ್ತೇನೆ ಅಮ್ಮ. ನಿಮ್ಮಂಥವರ ಈ ಮಾತು ಹಾಗೂ ಆಶೀರ್ವಾದವೇ ನನ್ನ ಸಂಪಾದನೆ. ಧನ್ಯವಾದಗಳು ಎಂದು ಸುದೀಪ್ ಟ್ವೀಟ್ ಮಾಡಿದ್ದಾರೆ.

Advertisement
Advertisement