Connect with us

Bengaluru City

ಕಿಚ್ಚನಿಗೆ ಹುಟ್ಟುಹಬ್ಬದ ಸಂಭ್ರಮ- ಫೇಸ್‍ಬುಕ್ ಲೈವ್‍ನಲ್ಲಿ ಅಭಿಮಾನಿಗಳೊಂದಿಗೆ ಮಾತು

Published

on

ಬೆಂಗಳೂರು: ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್‍ಗೆ ಇಂದು ಹುಟ್ಟುಹಬ್ಬದ ಸಂಭ್ರಮ. 44 ನೇ ವಸಂತಕ್ಕೆ ಕಾಲಿಟ್ಟಿರೋ ಅಭಿನಯ ಚಕ್ರವರ್ತಿ ಹುಟ್ಟು ಹಬ್ಬ ಆಚರಣೆ ಮಾಡಿಕೊಳ್ಳಲ್ಲ ಅಂತ ನಿರ್ಧಾರ ಮಾಡಿದ್ದಾರೆ.

ಶುಕ್ರವಾರ ರಾತ್ರಿ 12 ಗಂಟೆಗೆ ಬೆಂಗಳೂರಿನ ಜೆ.ಪಿ ನಗರದ ಸುದೀಪ್ ಮನೆ ಮುಂದೆ ಜಮಾಯಿಸಿದ ನೂರಾರು ಅಭಿಮಾನಿಗಳು ಹುಟ್ಟುಹಬ್ಬ ಆಚರಿಸಿಕೊಳ್ಳಲೇಬೇಕು ಅಂತಾ ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿದ್ರು. ವರ್ಷಕ್ಕೆ ಒಂದು ಬಾರಿಯಾದ್ರು ಸಿಗ್ತಾರೆ ಅಂತ ದೂರದ ಊರುಗಳಿಂದ ಬಂದಿದ್ದೀವಿ. ಸಂಜೆವರೆಗೂ ಕಾದು ನೋಡ್ತಿವಿ ಅಂತ ಅಭಿಮಾನಿಗಳು ಹೇಳ್ತಿದ್ದಾರೆ. ಮಳೆಯನ್ನ ಲೆಕ್ಕಿಸದೇ ಜೆಪಿ ನಗರದ ಮನೆಮುಂದೆ ಸುದೀಪ್ ಅಭಿಮಾನಿಗಳು ನೆರೆದಿದ್ದಾರೆ.

ಈ ನಡುವೆ ಕಿಚ್ಚ ಸುದೀಪ್ ಫೇಸ್‍ಬುಕ್ ಲೈವ್‍ನಲ್ಲಿ ಬಂದು ಅಭಿಮಾನಿಗಳ ಜೊತೆ ಮಾತಾಡಿದ್ದಾರೆ. ರಾಜು ಕನ್ನಡ ಮೀಡಿಯಂ  ಟೀಸರ್ ಹಾಗೂ  ದಿ ವಿಲನ್ ಚಿತ್ರದ ಮೋಷನ್ ಪೋಸ್ಟರ್  ರಿಲೀಸ್ ಮಾಡಿದ್ದಾರೆ.

https://www.facebook.com/TheVillainMovie/videos/1683422121690403/

Posted by Prem's TheVillain on Friday, September 1, 2017

Click to comment

Leave a Reply

Your email address will not be published. Required fields are marked *

www.publictv.in