ಕೋಲಾರ: ಬೈಕ್‌ಗೆ (Bike) ಲಾರಿ (Lorry) ಡಿಕ್ಕಿಯಾಗಿ ಕೆಜಿಎಫ್ (KGF) ಮೂಲದ ಅಣ್ಣ-ತಂಗಿ ದಾರುಣ ಸಾವನ್ನಪ್ಪಿರುವ ಘಟನೆ ತಮಿಳುನಾಡು (Tamil Nadu) ಗಡಿಯಲ್ಲಿ ನಡೆದಿದೆ.
ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ವಿ.ಕೋಟ – ಪ್ಯಾರ್ನಂಬಟ್ ಗಡಿಯಲ್ಲಿ ಈ ಘಟನೆ ನಡೆದಿದೆ. ಬೈಕ್‌ಗೆ ಡಿಕ್ಕಿಯಾಗಿ ಲಾರಿ ಕೆಳಗೆ ಸಿಲುಕಿದ ಬೈಕ್ ಅನ್ನು ಲಾರಿ ಸುಮಾರು ಅರ್ಧ ಕಿ.ಮೀ ದೂರ ಎಳೆದೊಯ್ದಿದೆ. ಈ ಪರಿಣಾಮ ಅಣ್ಣ ತಂಗಿ (Brother – Sister) ಇಬ್ಬರು ಲಾರಿಯಡಿ ಸಿಲುಕಿ ಅಪ್ಪಚ್ಚಿಯಾಗಿದ್ದಾರೆ. ಇದನ್ನೂ ಓದಿ: 150 ಅಡಿ ಆಳದ ಬಾವಿಗೆ ಉರುಳಿದ ಟ್ಯಾಂಕರ್ – ಚಾಲಕ ಸ್ಥಳದಲ್ಲೇ ದಾರುಣ ಸಾವು
ಕೆಜಿಎಫ್ ನಗರದ ಪಾರಂಡಹಳ್ಳಿ ನಿವಾಸಿಗಳಾದ ಬಾಲಾಜಿ ಹಾಗೂ ಆತನ ತಂಗಿ ಮಹಾಶ್ರೀ ಮೃತರು. ಇನ್ನೂ ಮೃತರ ದೇಹಗಳು ಲಾರಿಯಡಿ ಸಿಲುಕಿದ ಪರಿಣಾಮ ಮೃತ ದೇಹಗಳನ್ನ ಹೊರ ತೆಗೆಯಲು ಸ್ಥಳೀಯರು ಪರದಾಡಿದ್ದಾರೆ. ತಂಗಿಯ ಶವವನ್ನ ಹೊರ ತೆಗದಿದ್ದು, ಅಣ್ಣ ಬಾಲಾಜಿ ದೇಹ ಚಕ್ರಕ್ಕೆ ಸಿಲುಕಿದೆ. ಇನ್ನೂ ಸ್ಥಳಕ್ಕೆ ತಮಿಳುನಾಡು ಪೊಲೀಸರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಂಡಿದ್ದಾರೆ. ಇದನ್ನೂ ಓದಿ: ಈ ವರ್ಷವೇ ನಾನು ಬಾಂಗ್ಲಾದೇಶಕ್ಕೆ ಮರಳಲಿದ್ದೇನೆ : ಶೇಖ್ ಹಸೀನಾ
