Advertisements

`ಕೆಜಿಎಫ್ 2′ ವೈಲೆನ್ಸ್ ಸ್ಟೈಲ್‌ನಲ್ಲಿ  ಉದಯ್‌ಪುರ ರೇಂಜ್ ಪೊಲೀಸರ ಪೋಸ್ಟ್ ವೈರಲ್!

ಸಿನಿಮಾರಂಗದಲ್ಲಿ ಸದ್ಯ ಧೂಳೆಬ್ಬಿಸುತ್ತಿರುವ ಸಿನಿಮಾ ಅಂದ್ರೆ ಯಶ್ ನಟನೆಯ `ಕೆಜಿಎಫ್ 2′ ಚಿತ್ರ. ಸ್ಯಾಂಡಲ್‌ವುಡ್, ಕಾಲಿವುಡ್, ಬಾಲಿವುಡ್ ಹೀಗೆ ಎಲ್ಲಾ ವುಡ್‌ನಲ್ಲೂ ಯಶ್ ಚಿತ್ರ ಕೋಟಿ ಕೋಟಿ ಕಲೆಕ್ಷನ್ ಮಾಡುತ್ತಿದೆ. ಅದರಲ್ಲೂ ಚಿತ್ರದ ವೈಲೆನ್ಸ್ ಡೈಲಾಗ್ ಸಖತ್ ಹೈಪ್ ಕ್ರಿಯೇಟ್ ಮಾಡಿದೆ. ಈಗ ಉದಯ್‌ಪುರ ರೇಂಜ್ ಪೊಲೀಸರು `ವೈಲೆನ್ಸ್’ ಡೈಲಾಗ್‌ನ ನಾಮಫಲಕ ನೋಡುಗರನ್ನ ಅಟ್ರಾಕ್ಟ್ ಮಾಡುತ್ತಿದೆ.

Advertisements

ಒಂದ್ ಕಡೆ `ಕೆಜಿಎಫ್ 2′ ಸಿನಿಮಾ ಸೌಂಡ್ ಮಾಡ್ತಿದ್ರೆ ಇನ್ನೊಂದ್ ಕಡೆ ಚಿತ್ರ ಡೈಲಾಗ್ ಫ್ಯಾನ್ಸ್ಗೆ ಕಿಕ್ ಕೊಡ್ತಿದೆ. ಇಷ್ಟು ದಿನ ಫ್ಯಾನ್ಸ್, ಸೆಲೆಬ್ರೆಟಿಸ್ ವೈಲೆನ್ಸ್ ಡೈಲಾಗನ್ನ ಅವರದ್ದೇ ಆದ ಸ್ಟೈಲಿನಲ್ಲಿ ಹೇಳ್ತಿದ್ದರು. ಈಗ ಪೊಲೀಸರು ಕೂಡ ಅಪರಾಧ ಮಾಡುವವರಿಗೆ ಡೈಲಾಗ್ ಎಚ್ಚರಿಕೆಯನ್ನ ಕೊಟ್ಟಿದ್ದಾರೆ.

Advertisements

ಉದಯ್‌ಪುರ ರೇಂಜ್ ಪೊಲೀಸರು ಟ್ವಿಟರ್‌ನಲ್ಲಿ ರಾಕಿ, ಗರುಡ ಮತ್ತು ಅಧೀರ ಯಾರೇ ಅಪರಾಧಿ ಕಾನೂನನ್ನ ಯಾರು ಉಲ್ಲಂಘಿಸಿದರು ಖಾಕಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. 100 ಅಥವಾ 112 ನಂಬರ್‌ಗೆ ಡಯಲ್ ಮಾಡಿ, ಮಾಹಿತಿ ನೀಡಿ ಅಫರಾಧಿಗಳನ್ನು ಹಿಡಿಯಿರಿ ಎಂದು ಟ್ವಿಟ್ ಮಾಡಿರುವುದಲ್ಲದೇ ಸ್ಟಾಪ್ ಕ್ರೈಂ ಕಂಪ್ಲೇಂಟ್, ಕಂಪ್ಲೇಂಟ್, ಕಂಪ್ಲೇಂಟ್ ವಿ ಡೋಂಟ್ ಅವಾರ್ಡ್ ವಿ ಟೇಕ್ ರಿಯಾಕ್ಷನ್ ಪೋಸ್ಟ್ ಹಾಕಿ ʻಕೆಜಿಎಫ್ 2ʼ ಸ್ಟೈಲ್‌ನಲ್ಲಿ ತಿಳಿಸಿದ್ದಾರೆ. ಸದ್ಯ ಈ ಪೋಸ್ಟ್ ಟ್ವಿಟರ್‌ನಲ್ಲಿ ವೈರಲ್ ಆಗುತ್ತಿದೆ. ಇದನ್ನೂ ಓದಿ: ಕರ್ನಾಟಕದಲ್ಲೇ ನಡೆಯಿತು ತಮಿಳು ಸಿನಿಮಾಗೆ ಮುಹೂರ್ತ: ಬೆಂಗಳೂರಿಗೆ ಬಂದಿಳಿದ ತಮಿಳು ನಟ

Advertisements

ವಿಶ್ವದ ಮೂಲೆ ಮೂಲೆಯಲ್ಲೂ `ಕೆಜಿಎಫ್ 2′ ಚಿತ್ರ ನೋಡಿ ಫಿದಾ ಆಗಿರೋ ಅಭಿಮಾನಿಗಳಿಗೆ. ಪೊಲೀಸರು ಕೂಡ ಅಪರಾಧ ಮಾಡುವವರಿಗೆ ವೈಲೆನ್ಸ್ ಡೈಲಾಗ್ ಮೂಲಕ ಎಚ್ಚರಿಕೆಯನ್ನ ಕೊಟ್ಟಿದ್ದಾರೆ. ಉದಯ್‌ಪುರ ರೇಂಜ್ ಪೊಲೀಸರ ಈ ಟ್ವೀಟ್ ಗಮನ ಸೆಳೆಯುತ್ತಿದೆ.

Advertisements
Exit mobile version