ಜೈಪುರ: ಭಾನುವಾರ ಜೈಪುರದ ಜೀ ಸ್ಟುಡಿಯೋದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆಯಲ್ಲಿ ಕೇರಳದ 19 ವರ್ಷದ ಕಾಜಿಯಾ ಲಿಜ್ ಮೆಜೊ (Kaziah Liz Mejo) ಪ್ರತಿಷ್ಠಿತ ಮಿಸ್ ಯೂನಿವರ್ಸ್ ಇಂಡಿಯಾ 2026 (Miss Universe India 2026) ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.
ದೇಶಾದ್ಯಂತದ 52 ಫೈನಲಿಸ್ಟ್‌ಗಳನ್ನು ಸೋಲಿಸಿ ಮೆಜೊ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಗ್ರ್ಯಾಂಡ್ ಫಿನಾಲೆಯ ಸಮಯದಲ್ಲಿ, ಮಿಸ್ ಯೂನಿವರ್ಸ್ ಇಂಡಿಯಾ 2025 ರ ವಿನ್ನರ್ ಮಣಿಕಾ ವಿಶ್ವಕರ್ಮ ತಮ್ಮ ಉತ್ತರಾಧಿಕಾರಿಗೆ ಕಿರೀಟವನ್ನು ತೊಡಿಸಿದ್ದಾರೆ.
ನವೆಂಬರ್‌ನಲ್ಲಿ ಪೋರ್ಟೊ ರಿಕೊದಲ್ಲಿ ನಡೆಯಲಿರುವ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಕಾಜಿಯಾ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಇದನ್ನೂ ಓದಿ: ಕೇಂದ್ರ ಸಚಿವರ ಬಂಗಲೆಗಳ ದುರಸ್ತಿಗೆ 11 ವರ್ಷಕ್ಕೆ 547.68 ಕೋಟಿ ಹಣ ವ್ಯಯ
#WATCH | Jaipur, Rajasthan | Grand Finale of Miss Universe India 2026 | Miss Universe India 2026 Winner Kaziah Liz Mejo says, “I feel so on top of the world. This is such an iconic moment, and the moment that I have worked for over three years now. I am so incredibly happy that I… pic.twitter.com/6IdSF1bpM3
— ANI MP/CG/Rajasthan (@ANI_MP_CG_RJ) August 24, 2026
ನಾನು ಜಗತ್ತಿನಲ್ಲಿ ತುಂಬಾ ಎತ್ತರದಲ್ಲಿ ಇದ್ದೇನೆ ಎಂದು ಅನಿಸುತ್ತಿದೆ. ಇದು ಒಂದು ಅಪ್ರತಿಮ ಕ್ಷಣ. ನಾನು ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಕ್ಷಣಕ್ಕಾಗಿ ಶ್ರಮಿಸಿದ್ದೆ. ನನ್ನ ಊರನ್ನು ಜಗತ್ತಿಗೆ ಪರಿಚಯಿಸಲು ಸಾಧ್ಯವಾಗುವಂತೆ ಈ ಕಿರೀಟವನ್ನು ನನ್ನ ಕೇರಳಕ್ಕೆ ತರಲು ತುಂಬಾ ಸಂತೋಷವಾಗಿದೆ ಎಂದು ಕಾಜಿಯಾ ತಿಳಿಸಿದ್ದಾರೆ.
ತಮ್ಮ ಭವಿಷ್ಯದ ಯೋಜನೆಗಳ ಬಗ್ಗೆ ಬೆಳಕು ಚೆಲ್ಲುತ್ತಾ, ನನ್ನ ಮೊದಲ ಕನಸು ಭಾರತಕ್ಕೆ ಮಿಸ್ ಯೂನಿವರ್ಸ್ ಕಿರೀಟವನ್ನು ತರುವುದು. ಅದು ಯಾವಾಗಲೂ ನನ್ನ ಜೀವನದ ದೊಡ್ಡ ಕನಸಾಗಿದೆ. ನಾನು ಮಾಡುವ ಎಲ್ಲದರಲ್ಲೂ ಭಾರತ ಮತ್ತು ಕೇರಳ ಪ್ರತಿನಿಧಿಸಲು ಬಯಸುತ್ತೇನೆ ಎಂದು ಮಾತನಾಡಿದ್ದಾರೆ. ಇದನ್ನೂ ಓದಿ: ಯಶ್ ಭೇಟಿಯಾಗಿ ʻಟಾಕ್ಸಿಕ್ʼಗೆ ಶುಭ ಹಾರೈಸಿದ ಬಾಲಿವುಡ್ ದಿಗ್ಗಜ ಅನುಪಮ್ ಖೇರ್
