– ಬ್ಯಾಂಕಾಕ್‌ನಿಂದ ಭಾರತಕ್ಕೆ ಗಾಂಜಾ ಸಾಗಿಸುತ್ತಿದ್ದ ಹರ್ಷ ಸನ್ನಿ
ಮುಂಬೈ: ಸುಮಾರು 11 ಕೋಟಿ ಮೌಲ್ಯದ ಹೈಡ್ರೋಪೋನಿಕ್ಸ್ ಗಾಂಜಾವನ್ನು ಬ್ಯಾಂಕಾಕ್‌ನಿಂದ ಭಾರತಕ್ಕೆ ಸಾಗಿಸುತ್ತಿದ್ದ ಆರೋಪದ ಮೇಲೆ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯ ಮಾಜಿ ಸ್ಪರ್ಧಿಯನ್ನು (Mrs Kerala Beauty Pageant) ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ಮಾಡೆಲ್ ಹರ್ಷ ಸನ್ನಿ (28) (Harsha Sunny), ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Chhatrapati Shivaji Maharaj International Airport) ಗಾಂಜಾ ಸಮೇತ ಅಧಿಕಾರಿಗಳಿಗೆ ಸಿಕ್ಕಿಬಿದ್ದಿದ್ದಾರೆ. ಇದನ್ನೂ ಓದಿ: ಐದೇ ಸೆಕೆಂಡ್‌ನಲ್ಲಿ ಹಾರಿದ 10 ಗುಂಡು – ಬಿಷ್ಣೋಯ್ ಗ್ಯಾಂಗ್‌ನಿಂದ ಜಿಮ್ ಮಾಲೀಕನ ಬರ್ಬರ ಹತ್ಯೆ

ಏರ್ ಇಂಟೆಲಿಜೆನ್ಸ್ ಯೂನಿಟ್ (AIU) ಪ್ರಕಾರ, ಮಾಡೆಲ್ ಹರ್ಷ ಸನ್ನಿ ಜೂನ್ 10-11ರ ರಾತ್ರಿ ಬ್ಯಾಂಕಾಕ್‌ನಿಂದ ಏರ್ ಇಂಡಿಯಾ ವಿಮಾನ TG-351 ಮೂಲಕ ಮುಂಬೈನ ಶಿವಾಜಿ ಏರ್‌ಪೋರ್ಟ್‌ಗೆ ಬಂದಿಳಿದಿದ್ದರು. ಅನುಮಾನದ ಮೇಲೆ ಆಕೆಯನ್ನ ತಡೆಹಿಡಿದು ವಿಚಾರಣೆಗೆ ಒಳಪಡಿಸಲಾಯಿತು. ಆಕೆಯ ಲಗೇಜ್ ಬ್ಯಾಗ್‌ಗಳನ್ನ ಶೋಧಿಸುವ ವೇಳೆ ಸುಮಾರು 12 ಪ್ಯಾಕೆಟ್ ಕವರ್‌ಗಳನ್ನ ವಶಪಡಿಸಿಕೊಂಡಿದ್ದಾರೆ. ಇದನ್ನೂ ಓದಿ: ಕಾಡುಗೋಡಿ ಮಗು ಕೊಲೆ ಕೇಸ್: ಮೂವರು ಪೊಲೀಸರ ತಲೆದಂಡ
ಆ ಪ್ಯಾಕೆಟ್‌ಗಳನ್ನ ತೆರೆದಾಗ ಹಸಿರು ಬಣ್ಣದ ವಸ್ತುಗಳು ಪತ್ತೆಯಾಗಿವೆ. ಪರಿಶೀಲಿಸಿದ ನಂತರ ಅದು ಹೈಡ್ರೋಪೋನಿಕ್ಸ್ ಗಾಂಜಾ ಎಂಬುದನ್ನು ಅಧಿಕಾರಿಗಳು ಪತ್ತೆಮಾಡಿದ್ದಾರೆ. ವಶಪಡಿಸಿಕೊಂಡ ಅಕ್ರಮ ವಸ್ತುಗಳ ಅಂದಾಜು ಮೌಲ್ಯ 11.82 ಕೋಟಿ ರೂ.ಗಳಿಗೂ ಹೆಚ್ಚು ಎಂದು ಅಂದಾಜಿಸಿದ್ದಾರೆ.

ಹೈಡ್ರೋಪೋನಿಕ್ಸ್ ಗಾಂಜಾ ವಶಪಡಿಸಿಕೊಂಡ ಬಳಿಕ, NDPS ಆಕ್ಟ್ ಅಡಿಯಲ್ಲಿ ಹರ್ಷ ಸನ್ನಿ ಅವರನ್ನ ಬಂಧಿಸಲಾಯಿತು. ನಂತರ ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಅವರನ್ನ ಎಸ್ಪ್ಲನೇಡ್ (ಕಿಲ್ಲಾ) ನ್ಯಾಯಾಲಯವು ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತು. ಈ ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ.
ಹರ್ಷ ಸನ್ನಿ 2025 ರಲ್ಲಿ ಮಿಸೆಸ್ ಕೇರಳ ಸೌಂದರ್ಯ ಸ್ಪರ್ಧೆಯಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು.
