BollywoodCinemaLatestMain PostNational

ತನಗಿಂತಲೂ ಕಿರಿಯ ವ್ಯಕ್ತಿಯನ್ನು ಮದುವೆಯಾಗ್ತಿದ್ದಾರೆ ನಟಿಯರು: ಕತ್ರಿನಾಗೆ ಕಂಗನಾ ಶ್ಲಾಘನೆ

ನವದೆಹಲಿ: ಬಾಲಿವುಡ್‌ ಸ್ಟಾರ್‌ ನಟಿಯರು ತಮಗಿಂತಲೂ ಕಿರಿಯ ವಯಸ್ಸಿನ ವ್ಯಕ್ತಿಗಳನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ ಎಂದು ಬಾಲಿವುಡ್‌ ನಟಿ ಕಂಗನಾ ರಣಾವತ್‌ ಹೇಳಿದ್ದಾರೆ.

ಹೌದು, ಬಾಲಿವುಡ್‌ನ ಕೆಲವು ನಟಿಯರು ತಮಗಿಂತ ಕಿರಿಯ ವಯಸ್ಸಿನವರನ್ನು ವರಿಸಿದ್ದಾರೆ. ಅಂತೆಯೇ ಕತ್ರಿನಾ ಕೈಫ್‌ ಕೂಡ ತನಗಿಂತ ಐದು ವರ್ಷ ಕಿರಿಯ ವಯಸ್ಸಿನ ವಿಕ್ಕಿ ಕೌಶಲ್‌ರನ್ನು ವಿವಾಹವಾಗುತ್ತಿರುವುದಕ್ಕೆ ಬಾಲಿವುಡ್‌ ಮತ್ತೊಬ್ಬ ನಟಿ ಕಂಗನಾ ರಣಾವತ್‌ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ವೆಡ್ಡಿಂಗ್ ಕೇಕ್ ಬೀಳಿಸಿ ದಂಪತಿಗೆ ಶಾಕ್ ಕೊಟ್ಟ ಸಪ್ಲೈಯರ್

ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿರುವ ಕಂಗನಾ ರಣಾವತ್‌, ಸಿನಿಮಾರಂಗದ ಮಹಿಳೆಯರು ಯಶಸ್ವಿ ಬದಲಾವಣೆಯೊಂದಕ್ಕೆ ಸಾಕ್ಷಿಯಾಗಿದ್ದಾರೆ. ತಮಗಿಂತಲೂ ಕಿರಿಯ ವಯಸ್ಸಿನವರನ್ನು ವಿವಾಹವಾಗುವ ಮೂಲಕ ಈವರೆಗೂ ಇದ್ದ ಕೆಲವು ನಿಯಮಗಳನ್ನು ಬ್ರೇಕ್‌ ಮಾಡಿದ್ದಾರೆ ಎಂದು ಕತ್ರಿನಾ ಮತ್ತು ವಿಕ್ಕಿ ಕೌಶಲ್‌ ಹೆಸರನ್ನು ಪ್ರಸ್ತಾಪಿಸದೆಯೇ ಅವರ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.

ಯಶಸ್ವಿ ಪುರುಷನೊಬ್ಬ ತನಗಿಂತಲೂ ಕಿರಿಯ ವಯಸ್ಸಿನ ಮಹಿಳೆಯರನ್ನು ವಿವಾಹವಾಗುವು ಸಾಮಾನ್ಯ. ಮಹಿಳೆಯರು ತಮ್ಮ ಪತಿಗಿಂತ ಹೆಚ್ಚು ಯಶಸ್ವಿಯಾಗುವುದು ಸಮಸ್ಯೆ ಎಂದೇ ಭಾವಿಸಲಾಗಿದೆ. ತನಗಿಂತ ಕಿರಿಯ ವಯಸ್ಸಿನ ವ್ಯಕ್ತಿಯನ್ನು ಮದುವೆಯಾಗುವುದು ಮಹಿಳೆಯರಿಗೆ ಅಸಾಧ್ಯದ ಮಾತು. ಇಂತಹ ಸನ್ನಿವೇಶದಲ್ಲಿ ಯಶಸ್ವಿ ಮಹಿಳೆಯರೊಬ್ಬರು ತನಗಿಂತ ಚಿಕ್ಕ ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗುತ್ತಿರುವುದು ಶ್ಲಾಘನೀಯ. ಸಿನಿಮಾ ಕ್ಷೇತ್ರದಲ್ಲಿ ಆ ಒಂದು ಬದಲಾವಣೆಯಾಗಿದೆ ಎಂದು ಕಂಗನಾ ಅಭಿಪ್ರಾಯಪಟ್ಟಿದ್ದಾರೆ. ಇದನ್ನೂ ಓದಿ: ಓಟಿಟಿಯಿಂದ ವಿಕ್ಕಿ-ಕತ್ರಿನಾ ವೆಡ್ಡಿಂಗ್ ಕ್ಲಿಪ್ಸ್ 100 ಕೋಟಿ ರೂ. ಆಫರ್

ಕತ್ರಿನಾ ಕೈಫ್‌ಗೆ 38 ವರ್ಷ, ವಿಕ್ಕಿ ಕೌಶಲ್‌ಗೆ 33 ವರ್ಷ ವಯಸ್ಸು. ಇವರಿಬ್ಬರಿಗೂ 5 ವರ್ಷ ವಯಸ್ಸಿನ ಅಂತರವಿದೆ. ಈ ವಿಚಾರವನ್ನು ಮುಖ್ಯವಾಗಿಸಿಕೊಂಡು ಕತ್ರಿನಾ ನಡೆಯನ್ನು ಕಂಗನಾ ರಣಾವತ್‌ ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಕತ್ರಿನಾ, ವಿಕ್ಕಿ ಮದುವೆ ಸಮಾರಂಭಕ್ಕೆ ಸಲ್ಮಾನ್‌ ಖಾನ್‌ ಬಾಡಿಗಾರ್ಡ್‌ ಸೆಕ್ಯುರಿಟಿ!

ಬಾಲಿವುಡ್‌ ನಟಿ ಪ್ರಿಯಾಂಕಾ ಚೋಪ್ರಾ ಕೂಡ ತನಗಿಂತ 10 ವರ್ಷ ಕಿರಿಯ ವಯಸ್ಸಿನ ವ್ಯಕ್ತಿಯನ್ನು ವರಿಸಿದ್ದಾರೆ. ಅಂತೆಯೇ ಐಶ್ವರ್ಯ ರೈ ಮತ್ತು ಅಭಿಷೇಕ್‌ ಬಚ್ಚನ್‌ ಅವರಿಗೆ 3 ವರ್ಷ ವಯಸ್ಸಿನ ಅಂತರವಿದೆ. ಕಂಗನಾ ಕೂಡ ತಮ್ಮ ಮದುವೆ ಬಗ್ಗೆ ಇತ್ತೀಚೆಗಷ್ಟೇ ಸುಳಿವು ನೀಡಿದ್ದಾರೆ.

Leave a Reply

Your email address will not be published.

Back to top button