ಭಾನುವಾರ ತಡರಾತ್ರಿ ಬೆಂಗಳೂರು ನಗರದಲ್ಲಿ ಮಳೆಯಾಗಿದ್ದು, 2 ಸೆಂ.ಮೀ ಮಳೆ ದಾಖಲಾಗಿದೆ. ಅರಬ್ಬಿ ಸಮುದ್ರದಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿದ್ದು, ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಇನ್ನೂ ಮೂರು ದಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ಉತ್ತರ ಒಳನಾಡು, ದಕ್ಷಿಣ ಒಳನಾಡು, ಕರಾವಳಿ ಹಾಗೂ ಬೆಂಗಳೂರಿನಲ್ಲಿ ಮಳೆಯ ಅಲರ್ಟ್ ನೀಡಲಾಗಿದೆ. ದಕ್ಷಿಣ ಒಳನಾಡಿನಲ್ಲಿ ಇನ್ನು ಮೂರು ದಿನಗಳ ಕಾಲ ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
Advertisement
ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ಇರಲಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಗರಿಷ್ಠ ತಾಪಮಾನ 36 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 23 ಡಿಗ್ರಿ ಸೆಲ್ಸಿಯಸ್ ಇರಲಿದೆ.
Advertisement
Advertisement
ನಗರಗಳ ಹವಾಮಾನ ವರದಿ:
ಬೆಂಗಳೂರು: 28-21
ಮಂಗಳೂರು: 33-27
ಶಿವಮೊಗ್ಗ: 35-22
ಬೆಳಗಾವಿ: 34-19
ಮೈಸೂರು: 31-22
ಮಂಡ್ಯ: 31-22
Advertisement
ಮಡಿಕೇರಿ: 27-17
ರಾಮನಗರ: 31-22
ಹಾಸನ: 31-20
ಚಾಮರಾಜನಗರ: 30-22
ಚಿಕ್ಕಬಳ್ಳಾಪುರ: 28-20
ಕೋಲಾರ: 28-22
ತುಮಕೂರು: 31-21
ಉಡುಪಿ: 34-26
ಕಾರವಾರ: 34-26
ಚಿಕ್ಕಮಗಳೂರು: 30-19
ದಾವಣಗೆರೆ: 35-22
ಹುಬ್ಬಳ್ಳಿ: 36-21
ಚಿತ್ರದುರ್ಗ: 33-21
ಹಾವೇರಿ: 36-22
ಬಳ್ಳಾರಿ: 34-24
ಗದಗ: 36-22
ಕೊಪ್ಪಳ: 35-23
ರಾಯಚೂರು: 33-24
ಯಾದಗಿರಿ: 33-23
ವಿಜಯಪುರ: 35-23
ಬೀದರ್: 31-22
ಕಲಬುರಗಿ: 34-23
ಬಾಗಲಕೋಟೆ: 36-23