ಅಪ್ಪುಗೆ ‘ಕರ್ನಾಟಕ ರತ್ನ’ ಪ್ರದಾನ : ಬೆಂಗಳೂರಿಗೆ ಬಂದಿಳಿದ ಸೂಪರ್ ಸ್ಟಾರ್ ರಜನಿ

Advertisements

ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಇಂದು ಕರ್ನಾಟಕ ರತ್ನ  (Karnataka Ratna) ಪ್ರಶಸ್ತಿಯನ್ನು ಪ್ರದಾನ ಮಾಡಲಾಗುತ್ತಿದ್ದು, ಅತಿಥಿಗಳಾಗಿ ಸೂಪರ್ ಸ್ಟಾರ್ ರಜನಿಕಾಂತ್ ಮತ್ತು ತೆಲುಗಿನ ಸ್ಟಾರ್ ನಟ ಜ್ಯೂನಿಯರ್ ಎನ್.ಟಿ.ಆರ್ ಹಾಗೂ ಸುಧಾಮೂರ್ತಿ ಆಗಮಿಸುತ್ತಿದ್ದಾರೆ. ಸಂಜೆ 4 ಗಂಟೆಗೆ ವಿಧಾನ ಸೌಧ ಮುಂಭಾಗದಲ್ಲಿ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ್ದು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು  ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

Advertisements

ಈ ಕಾರ್ಯಕ್ರಮದಲ್ಲಿ ಭಾಗಿಯಾಗಲು ಇಂದು ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ (Rajinikanth) ಬೆಂಗಳೂರಿಗೆ (Bangalore) ಬಂದಿಳಿದಿದ್ದು, ಎಚ್.ಎ.ಎಲ್ ಏರ್ಪೋಟಿಗೆ ಬಂದಿಳಿದ ರಜನಿಯನ್ನು ವೈದ್ಯಕೀಯ ಶಿಕ್ಷಣ ಸಚಿವ ಕೆ. ಸುಧಾಕರ್ ಬರಮಾಡಿಕೊಂಡರು. ಕೆ.ಸುಧಾಕರ್ (K. Sudhakar) ಮತ್ತು ಸರಕಾರದ ಪ್ರತಿನಿಧಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಹೂಗುಚ್ಛ ನೀಡುವ ಮೂಲಕ ತಲೈವಾರನ್ನು ಸ್ವಾಗತ ಕೋರಿದರು. ಸಚಿವ ಮುನಿರತ್ನ ಕೂಡ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು, ರಜನಿಕಾಂತ್ ಅವರನ್ನು ಬರಮಾಡಿಕೊಂಡರು. ಇದನ್ನೂ ಓದಿ:ಹಿಂದಿಯಲ್ಲಿ 50 ಕೋಟಿ ಗಳಿಸಿದ ‘ಕಾಂತಾರ’ ಸಿನಿಮಾ

Advertisements

ಇಂದು ಸಂಜೆ 4 ಗಂಟೆಗೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರಿಂದ ಗೀತ ಗಾಯನ ಕಾರ್ಯಕ್ರಮ ನಡೆಯಲಿದ್ದು, ಸಂಜೆ 5 ಗಂಟೆಗೆ ಪುನೀತ್ ರಾಜ್ ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗುತ್ತಿದೆ. ನಿನ್ನೆಯಷ್ಟೇ ಪುನೀತ್ ಮನೆಗೆ ಆಗಮಿಸಿದ್ದ ಸಚಿವ ಆರ್. ಅಶೋಕ್ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸುನೀಲ್ ಕುಮಾರ್ ಕಾರ್ಯಕ್ರಮದ ಆಹ್ವಾನ ಪತ್ರಿಕೆ ನೀಡಿದ್ದಾರೆ.

Advertisements

ಬೆಂಗಳೂರಿನ ಶಿವಾಜಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ರಿಜ್ವಾನ್ ಅರ್ಷದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡರೆ, ಸಭಾಪತಿ ರಘುನಾಥ್ ರಾವ್ ಮಲ್ಕಾಪುರೆ ಹಾಗೂ ವಿಧಾನ ಸಭೆ ಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಗೌರವ ಉಪಸ್ಥಿತಿ ಇರಲಿದೆ. ಸಚಿವರಾದ ಆರ್. ಅಶೋಕ್ ಹಾಗೂ ವಿ ಸುನೀಲ್ ಕುಮಾರ್ ಅವರ ಘನ ಉಪಸ್ಥಿತಿ ಮತ್ತು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಸೇರಿದಂತೆ ಹಲವರು ಅತಿಥಿಗಳಾಗಿ ಆಗಮಿಸಲಿದ್ದಾರೆ.

Live Tv

Advertisements
Exit mobile version