ನವದೆಹಲಿ: 189 ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮೂಲಕ ಬಿಜೆಪಿ (BJP) ವಲಯದಲ್ಲಿ ಹೈಕಮಾಂಡ್ ನಾಯಕರು ಸಂಚಲನ ಸೃಷ್ಟಿಸಿದ್ದಾರೆ. ಪಟ್ಟಿ ಬಿಡುಗಡೆ ಬೆನ್ನಲ್ಲೆ ಭಿನ್ನಮತವೂ ಭುಗಿಲೆದಿದ್ದು, ಲಕ್ಷ್ಮಣ ಸವದಿ (Laxman Savadi) ರಾಜೀನಾಮೆಗೆ ಮುಂದಾದ್ರೆ, ಇತ್ತ ಬಂಡಾಯಯ ಬಾವುಟ ಹಾರಿಸಿ ಜಗದೀಶ್ ಶೆಟ್ಟರ್ (Jagadeesh Shettar) ದೆಹಲಿ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ಈ ನಡುವೆ ನಾಳೆ ಮತ್ತೊಂದು ಪಟ್ಟಿ ಬಿಡುಗಡೆಗೆ ವರಿಷ್ಠರು ಚಿಂತಿಸಿದ್ದಾರೆ.
Advertisement
ರಾಜ್ಯ ವಿಧಾನಸಭೆ ಚುನಾವಣೆ (Aseembly Election) ಗೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಬೆನ್ನಲ್ಲೆ ದೊಡ್ಡ ಪ್ರಮಾಣದಲ್ಲಿ ಭಿನ್ನಮತ ಭುಗಿಲೆದ್ದಿದೆ. ಟಿಕೆಟ್ ನಿರೀಕ್ಷೆಯಲ್ಲಿದ್ದ ಅನೇಕ ನಾಯಕರಿಗೆ ನಿರಾಸೆಯಾಗಿದ್ದು, ಬಂಡಾಯದ ಬಾವುಟ ಹಾರಿಸಿದ್ದಾರೆ. ಮುಖ್ಯವಾಗಿ ಟಿಕೆಟ್ ಸಿಗದ ಹಿನ್ನಲೆ ಮಾಜಿ ಡಿಸಿಎಂ ಲಕ್ಷ್ಮಣ್ ಸವದಿ ರಾಜೀನಾಮೆ ನೀಡಲು ಮುಂದಾಗಿದ್ದು, ಇತ್ತ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಬಾಬುರಾವ್ ಚಿಂಚನಸೂರ್ ಎಡವಟ್ಟು
Advertisement
Advertisement
ಅಸಮಾಧಾನ ಹೊರಹಾಕಿದ ಬೆನ್ನಲೆ ಜಗದೀಶ್ ಶೆಟ್ಟರ್‌ಗೆ ಬುಲಾವ್ ನೀಡಿದ್ದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ತಮ್ಮ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದರು. ಮಾತುಕತೆ ವೇಳೆ ಟಿಕೆಟ್ ನಿರಾಕರಿಸಿರುವ ಶೆಟ್ಟರ್ ಟಿಕೆಟ್ ಬೇಕೇ ಬೇಕು ಎಂದು ಪಟ್ಟು ಹಿಡಿದು ಕೂತಿದ್ದಾರೆ. ಆದರೆ ನಡ್ಡಾ ಮಾತ್ರ ಮನವೊಲಿಸುವ ಪ್ರಯತ್ನ ಮಾಡಿದ್ದು, ಇದಕ್ಕೆ ಒಪ್ಪದ ಶೆಟ್ಟರ್ ಟಿಕೆಟ್ ನೀಡದಿದ್ದರೆ ತಮ್ಮ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದಾರೆ.
Advertisement
ಈ ಎಲ್ಲ ಗೊಂದಲಗಳ ನಡುವೆ ಎರಡನೇ ಪಟ್ಟಿ ಬಿಡುಗಡೆ ಮಾಡಲು ಬಿಜೆಪಿ ಹೈಕಮಾಂಡ್ ತಯಾರಿ ಮಾಡುತ್ತಿದೆ. ಅಂದುಕೊಂಡಂತೆ ಎಲ್ಲ ಭಿನ್ನಮತಿಯ ಚಟುವಟಿಕೆಗಳು ತಣ್ಣಗಾದ್ದಲ್ಲಿ ನಾಳೆ ಸಂಜೆ ವೇಳೆಗೆ ಮತ್ತೊಂದು ಪಟ್ಟಿ ಬಿಡುಗಡೆ ಮಾಡುವ ನಿಟ್ಟಿನಲ್ಲಿ ಚಿಂತಿಸಿದೆ. ಒಂದು ವೇಳೆ ಬಂಡಾಯ ಬಿಸಿ ಹೆಚ್ಚಾದಲ್ಲಿ ಒಂದೆರಡು ದಿನ ಪಟ್ಟಿ ಬಿಡುಗಡೆ ಮುಂದೂಡುವ ಸಾಧ್ಯತೆಗಳು ತಳ್ಳಿ ಹಾಕುವಂತಿಲ್ಲ.