Connect with us

Bollywood

ಮೇಕಪ್ ಇಲ್ಲದೆ ಸೆಲ್ಫಿ ತೆಗೆದಿದ್ದಕ್ಕೆ ಟ್ರೋಲ್ ಆದ ಕರೀನಾ

Published

on

ಮುಂಬೈ: ಬಾಲಿವುಡ್ ಬೆಡಗಿ ಕರೀನಾ ಕಪೂರ್ ಖಾನ್ ಮೇಕಪ್ ಇಲ್ಲದೆ ಸೆಲ್ಫಿ ತೆಗೆದಿದ್ದಕ್ಕೆ ಜನರು ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದಾರೆ.

ಕರೀನಾ ತಮ್ಮ ಪತಿ, ನಟ ಸೈಫ್ ಅಲಿ ಖಾನ್ ಹಾಗೂ ಮಗ ತೈಮೂರ್ ಜೊತೆ ಇಟಲಿಯ ಟಸ್ಕನಿಯಲ್ಲಿ ರಜೆಯನ್ನು ಕಳೆಯುತ್ತಿದ್ದಾರೆ. ಈ ನಡುವೆ ಕರೀನಾ ಒಂದು ಸೆಲ್ಫಿ ತೆಗೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಕರೀನಾ ಹಲ್ಟರ್ ನೆಕ್ ಫ್ಲೋರಲ್ ಡ್ರೆಸ್ ಧರಿಸಿದ್ದಾರೆ. ಈ ವೇಳೆ ಕರೀನಾ ಯಾವುದೇ ಮೇಕಪ್ ಹಾಕಿರಲಿಲ್ಲ.

ಕರೀನಾ ಅಭಿಮಾನಿಗಳು ತಮ್ಮ ಫ್ಯಾನ್ ಪೇಜ್‍ಗಳಲ್ಲಿ ಆ ಸೆಲ್ಫಿ ಫೋಟೋವನ್ನು ಹಂಚಿಕೊಂಡಿದ್ದಾರೆ. ಕರೀನಾ ಈ ಮೊದಲು ಕೂಡ ಸಾಕಷ್ಟು ಬಾರಿ ಮೇಕಪ್ ಇಲ್ಲದೆ ಕಾಣಿಸಿಕೊಂಡಿದ್ದರು. ಈ ಬಾರಿಯೂ ಮೇಕಪ್ ಇಲ್ಲದ ಅವರ ಫೋಟೋ ಹೊರಬಂದಿದ್ದು, ಇದನ್ನು ನೋಡಿ ಜನರು ಟ್ರೋಲ್ ಮಾಡುತ್ತಿದ್ದಾರೆ.

ವೈರಲ್ ಆಗಿರುವ ಕರೀನಾ ಫೋಟೋ ನೋಡಿ ಕೆಲವರು, ‘ಹೌದು. ನಿಮಗೆ ಈಗ ವಯಸ್ಸಾಗಿದೆ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು, ‘ಅಯ್ಯೋ, ದೇವರೇ ಭಯಂಕರ’ ಎಂದು ಕಮೆಂಟ್ ಮಾಡಿದ್ದಾರೆ. ಮತ್ತೆ ಕೆಲವರು ‘ಭಯಂಕರವಾದ ಮುಖ’ ಎಂದು ಕಮೆಂಟ್ ಮಾಡುವ ಮೂಲಕ ಟ್ರೋಲ್ ಮಾಡುತ್ತಿದ್ದಾರೆ.

ಪ್ರತಿ ವರ್ಷ ಕರೀನಾ ತನ್ನ ಪತಿ ಸೈಫ್ ಹಾಗೂ ಮಗ ತೈಮೂರ್ ಜೊತೆ ಬೇಸಿಗೆ ರಜೆ ಕಳೆಯಲು ವಿದೇಶಕ್ಕೆ ಹೋಗುತ್ತಾರೆ. ಅಂತೆಯೇ ಈ ವರ್ಷ ಅವರು ಇಟಲಿಗೆ ಹೋಗಿದ್ದಾರೆ. ಸದ್ಯ ಕರೀನಾ, ಸೈಫ್ ಹಾಗೂ ಕರೀನಾ ಜೊತೆ ಇಟಲಿಯಲ್ಲಿ ಸುತ್ತಾಡುತ್ತಿರುವ ಫೋಟೋ ಹಾಗೂ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

Click to comment

Leave a Reply

Your email address will not be published. Required fields are marked *