Connect with us

Bengaluru City

ಅರಣ್ಯ ವಸತಿ, ವಿಹಾರಧಾಮಗಳಲ್ಲಿ ಕನ್ನಡಿಗರನ್ನೇ ನೇಮಿಸಬೇಕು: ಟಿ.ಎಸ್ ನಾಗಾಭರಣ

Published

on

ಬೆಂಗಳೂರು: ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆ (ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್)ಯು ಕರ್ನಾಟಕದ ವಿವಿಧ ಭಾಗಗಳಲ್ಲಿ ಹೊರ ರಾಜ್ಯದವರನ್ನು ನೇಮಿಸಿಕೊಂಡಿದ್ದು ಕೂಡಲೇ ಇವರನ್ನು ಬಿಡುಗಡೆಗೊಳಿಸಿ ಡಾ. ಸರೋಜಿನಿ ಮಹಿಷಿ ವರದಿಯನ್ವಯ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀ ಟಿ.ಎಸ್ ನಾಗಾಭರಣ ಅವರು ಹೇಳಿದರು

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಬೆಂಗಳೂರಿನ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯಲ್ಲಿ ನಡೆದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಬಿನಿ ಮತ್ತು ಬಂಡಿಪುರಗಳಲ್ಲಿರುವ ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗೆ ಹೊರ ರಾಜ್ಯದವರನ್ನು ನೇಮಕ ಮಾಡಿರುವುದು ರಾಜ್ಯ ಸರ್ಕಾರದ ನಿಯಮವನ್ನು ಉಲ್ಲಂಘಿಸಿದಂತಾಗುತ್ತದೆ. ಹಾಗಾಗಿ ಕೂಡಲೇ ಅವರನ್ನು ತೆರವುಗೊಳಿಸಿ ಕನ್ನಡಿಗರನ್ನು ನೇಮಿಸಿಕೊಳ್ಳಬೇಕು ಇಲ್ಲದಿದ್ದರೆ ಕ್ರಮವಹಿಸಲಾಗುವುದು ಎಂದು ಎಚ್ಚರಿಸಿದರು.

ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಗೆ ಸಂಬಂಧಿಸಿದ ವೆಬ್‍ಸೈಟ್‍ನಲ್ಲಿ ಆಯ್ಕೆ ಭಾಷೆಯಾಗಿ ಕನ್ನಡವನ್ನು ನೀಡಲಾಗಿದ್ದು, ಅದನ್ನು ಪ್ರಧಾನವಾಗಿ ಬಳಸುವಂತೆ ಸೂಚಿಸಿದರು. ಅಲ್ಲದೆ ವಿದೇಶಿಗರು ಭೇಟಿ ನೀಡುವುದರಿಂದ ಕನ್ನಡ ಭಾಷೆ, ಸಂಸ್ಕೃತಿ, ಕಲೆಗಳಾದ ಜಾನಪರ, ಯಕ್ಷಗಾನ, ಕರ್ನಾಟಕದ ಆಹಾರ ಪದ್ಧತಿಗಳು ಸ್ಥಳೀಯ ಆಟಗಳನ್ನು ವಿದೇಶಿಗರಿಗೆ ಪರಿಚಯಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕೆಂದು ಸೂಚಿಸಿದರು.

ಇಂದಿನ ನಡೆದ ಸಭೆಯಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ ಮುರಳಿಧರ, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಡಾ. ವೀರಶೆಟ್ಟಿ, ಪ್ರಾಧಿಕಾರದ ಸದಸ್ಯರಾದ ಅಬ್ದುಲ್ ರೆಹಮಾನ್ ಪಾಷಾ, ಕೈಗಾರಿಕಾ ಸಂಘಗಳ ಒಕ್ಕೂಟದ ಕಾರ್ಯಾಧ್ಯಕ್ಷರಾದ ಸಿದ್ದಯ್ಯ, ಅರಣ್ಯ ವಸತಿ ಮತ್ತು ವಿಹಾರಧಾಮಗಳ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ವಿಜಯ ಶರ್ಮ, ಕಾರ್ಯಕಾರಿ ನಿರ್ದೇಶಕರಾದ ಎ.ಕೆ ಸಿಂಗ್, ಸಹಾಯಕ ಆಡಳಿತಾಧಿಕಾರಿ ಲಿಂಗರಾಜು ಮತ್ತಿತರರು ಉಪಸ್ಥಿತರಿದ್ದರು.

Click to comment

Leave a Reply

Your email address will not be published. Required fields are marked *