ಶ್ರೀನಗರ: ಮಾದಕವಸ್ತು-ಭಯೋತ್ಪಾದನಾ ಜಾಲದ ವಿರುದ್ಧ ಪ್ರಮುಖ ಕಾರ್ಯಾಚರಣೆಯಲ್ಲಿ ಜಮ್ಮು ಮತ್ತು ಕಾಶ್ಮೀರ (Jammu Kashmir) ಪೊಲೀಸರು 806 ಆರೋಪಿಗಳನ್ನು ಬಂಧಿಸಿದ್ದು, 667 ಕೆಜಿ ಡ್ರಗ್ಸ್ ಸೀಜ್ ಮಾಡಿದ್ದಾರೆ.
41.85 ಕೋಟಿ ರೂ. ಮೌಲ್ಯದ 97 ಆಸ್ತಿಗಳನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸುಮಾರು 15 ಕೋಟಿ ರೂ. ಮೌಲ್ಯದ 41 ಆಸ್ತಿಗಳನ್ನು ಕೆಡವಿದ್ದಾರೆ. ಈಗ ಮಾದಕವಸ್ತು ಕಳ್ಳಸಾಗಣೆಯ ಆರ್ಥಿಕ ಬೆನ್ನೆಲುಬನ್ನು ಹತ್ತಿಕ್ಕುವತ್ತ ಗಮನ ಹರಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿ ಕೆಂಪುಕೋಟೆ ಬಳಿ ಸ್ಫೋಟ ಪ್ರಕರಣ – 7,500 ಪುಟಗಳ ಚಾರ್ಜ್‌ಶೀಟ್ ಸಲ್ಲಿಕೆ
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜಮ್ಮು-ಕಾಶ್ಮೀರದ ಡಿಜಿಪಿ ನಳಿನ್ ಪ್ರಭಾತ್, ಏಪ್ರಿಲ್ 11 ರಿಂದ ಮೇ 12 ರವರೆಗೆ ನಡೆಸಿದ 100 ದಿನಗಳ ‘ನಶೆ ಮುಕ್ತ ಜಮ್ಮು-ಕಾಶ್ಮೀರ ಅಭಿಯಾನ’ದ ಮೊದಲ ತಿಂಗಳ ಭಾಗವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಳೆದ ತಿಂಗಳಲ್ಲಿ ಎನ್‌ಡಿಪಿಎಸ್ ಕಾಯ್ದೆಯಡಿ 724 ಪ್ರಕರಣಗಳು ದಾಖಲಾಗಿದ್ದು, 806 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸುಮಾರು ಏಳು ಪಟ್ಟು ಹೆಚ್ಚಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ. ಇದನ್ನೂ ಓದಿ: ತಮಿಳುನಾಡಿನಲ್ಲಿ ಮದ್ಯ ಖರೀದಿಗೆ 21 ವರ್ಷ ಕಡ್ಡಾಯ – ವಿಜಯ್ ಸರ್ಕಾರ ಆದೇಶ
ಅಧಿಕಾರಿಗಳು 667 ಕೆಜಿ ಮಾದಕ ವಸ್ತುಗಳು ಮತ್ತು 19,000 ಯೂನಿಟ್ ಸೈಕೋಟ್ರೋಪಿಕ್ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಬಂಧಿತರಲ್ಲಿ 28 ಪ್ರಕರಣಗಳಲ್ಲಿ ಬೇಕಾಗಿರುವ ಗುಲ್ಜಾರ್ ಅಹ್ಮದ್ ಅಲಿಯಾಸ್ ಲಾವ್ ಗುಜ್ಜರ್ ಮತ್ತು 17 ಪ್ರಕರಣಗಳಲ್ಲಿ ಬೇಕಾಗಿರುವ ಅವನೀತ್ ಸಿಂಗ್ ಅಲಿಯಾಸ್ ನಾಗಿ ಸೇರಿದಂತೆ ಹಲವರು ಅಪರಾಧಿಗಳಿದ್ದಾರೆ.

