ಮುಂಬೈ: 2026ರ ಐಪಿಎಲ್ (IPL) ಟೂರ್ನಿ ಪ್ಲೇ ಆಫ್ ಹಂತ ತಲುಪುತ್ತಿದ್ದು, ತಂಡಗಳ ನಡುವಿನ ಹಣಾಹಣಿ ತೀವ್ರಗೊಂಡಿದೆ. ಇದರ ಬೆನ್ನಲ್ಲೇ ಅಧಿಕೃತ ಪ್ರಸಾರ ಸಂಸ್ಥೆಗಳಾದ ಜಿಯೋಸ್ಟಾರ್ (JioHotstar), ಟಿವಿ ಮತ್ತು ಡಿಜಿಟಲ್ ಪ್ಲಾಟ್ ಫಾರ್ಮ್‌ಗಳಾದ್ಯಂತ ವೀಕ್ಷಕರ ಸಂಖ್ಯೆಯಲ್ಲಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಟೂರ್ನಿಯ ಒಟ್ಟಾರೆ ವೀಕ್ಷಕರ ಸಂಖ್ಯೆ ಬರೋಬ್ಬರಿ 110 ಕೋಟಿ ದಾಟಿದೆ. ಟಿವಿ ವೀಕ್ಷಣೆಯಲ್ಲಿ ಉತ್ತಮ ದಾಖಲೆ ಬರೆದಿದ್ದು, 50 ಕೋಟಿ ವೀಕ್ಷಕರ ಗಡಿಯತ್ತ ಮುನ್ನಡೆಯುತ್ತಿದೆ. ಇದೇ ವೇಳೆ ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ವೀಕ್ಷಕರ ಸಂಖ್ಯೆ ಶೇ. 15ರಷ್ಟು ಹೆಚ್ಚಳವಾಗಿದೆ. ಇದನ್ನೂ ಓದಿ: ಕೊನೆಯಲ್ಲಿ ಪೂರನ್ 6, 6, 6, 6 – ಲಕ್ನೋಗೆ 7 ವಿಕೆಟ್‌ಗಳ ಭರ್ಜರಿ ಜಯ; CSKಗೆ ಪ್ಲೇ ಆಫ್ ಹಾದಿ ಕಠಿಣ
ವೀಕ್ಷಣೆಯ ಸಮಯವೂ ಶೇ. 7 ರಷ್ಟು ಹೆಚ್ಚಾಗಿದೆ. ಕನೆಕ್ಸೆಡ್ ಟಿವಿ (ಸಿಟಿವಿ) ಮಾಧ್ಯಮದಲ್ಲಿ ಶೇ. 25 ರಷ್ಟು ಬೆಳವಣಿಗೆಯಾಗಿದ್ದು, ವೀಕ್ಷಣೆಯ ಸಮಯ ಶೇ. 20 ರಷ್ಟು ಏರಿಕೆ ಕಂಡಿದೆ ಎಂದು ಸಂಸ್ಥೆ ಮಾಹಿತಿ ನೀಡಿದೆ. ಇದನ್ನೂ ಓದಿ: RCB ಸೇರಿಕೊಂಡ ಮಾರಕ ವೇಗಿ ರಿಚರ್ಡ್ – ಪ್ಲೇಆಫ್ ಸನಿಹದಲ್ಲಿರುವ ಬೆಂಗ್ಳೂರು ತಂಡಕ್ಕೆ ಆನೆಬಲ

