ಬೆಂಗಳೂರು: ಐಪಿಎಲ್ 2026ರ (IPL 2026) ನಿರ್ಣಾಯಕ ಹಂತದಲ್ಲಿ ಆರ್‌ಸಿಬಿ (RCB) ಹೊಸ ಆಟಗಾರನನ್ನು ತಂಡಕ್ಕೆ ಸೇರ್ಪಡೆ ಮಾಡಿಕೊಂಡಿದೆ. ಶ್ರೀಲಂಕಾದ ವೇಗಿ ನುವಾನ್ ತುಷಾರ್ ಅವರ ಬದಲಿ ಆಟಗಾರರಾಗಿ ಇಂಗ್ಲೆಂಡ್‌ನ ರಿಚರ್ಡ್ ಗ್ಲೀಸನ್ ಅವರೊಂದಿಗೆ ಆರ್‌ಸಿಬಿ ಒಪ್ಪಂದ ಮಾಡಿಕೊಂಡಿದೆ.
ಈ ಕುರಿತು ಆರ್‌ಸಿಬಿ ಅಧಿಕೃತವಾಗಿ ಮಾಹಿತಿ ಹಂಚಿಕೊಂಡಿದೆ. ಪ್ಲೇಆಫ್‌ಗೂ ಮುನ್ನ ಆರ್‌ಸಿಬಿ ಇಂಗ್ಲೆಂಡ್‌ನ ವೇಗಿ ರಿಚರ್ಡ್ ಗ್ಲೀಸನ್ (Richard Gleeson) ಅವರನ್ನು 1.6 ಕೋಟಿ ರೂ. ಮೊತ್ತಕ್ಕೆ ಖರೀದಿಸಿ, ಒಪ್ಪಂದ ಮಾಡಿಕೊಂಡಿದೆ.ಇದನ್ನೂ ಓದಿ: ಸದ್ದಿಲ್ಲದೇ ನಿವೃತ್ತಿ ಬಗ್ಗೆ ಸುಳಿವು ಕೊಟ್ರಾ ಕಿಂಗ್ ಕೊಹ್ಲಿ?
View this post on Instagram
ಶ್ರೀಲಂಕಾ ಕ್ರಿಕೆಟ್ ಮಂಡಳಿಯಿಂದ ಎನ್‌ಓಸಿ (NOC) ಪಡೆಯಲು ವಿಫಲರಾದ ಕಾರಣ ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ್ (Nuwan Thushara) ಐಪಿಎಲ್‌ನಿಂದ ಹೊರಗುಳಿದಿದ್ದಾರೆ. ಐಪಿಎಲ್‌ನಲ್ಲಿ ಭಾಗವಹಿಸಲು ಅನುಮತಿ ಪಡೆಯುವ ಉದ್ದೇಶದಿಂದ ತುಷಾರ್ ಆರಂಭದಲ್ಲಿ ಫ್ರಾಂಚೈಸಿ ವಿರುದ್ಧ ಕಾನೂನು ಕ್ರಮಕೈಗೊಳ್ಳಲು ಚಿಂತಿಸಿದ್ದರು. ಆದರೆ, ಟೂರ್ನಿಯ ಬಹುಪಾಲು ಪಂದ್ಯಗಳನ್ನು ಈಗಾಗಲೇ ಕಳೆದುಕೊಂಡಿದ್ದರಿಂದ ಈ ನಿರ್ಧಾರದಿಂದ ಹಿಂದೆ ಸರಿದಿದ್ದರು. ಸದ್ಯ ಆರ್‌ಸಿಬಿಗೆ ಸೇರ್ಪಡೆಯಾಗಿರುವ 38 ವರ್ಷದ ಗ್ಲೀಸನ್ ಇಂಗ್ಲೆಂಡ್ ಪರ 6 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಒಟ್ಟು 9 ವಿಕೆಟ್ ಪಡೆದುಕೊಂಡಿದ್ದಾರೆ.
ಕಳೆದ ಮೂರು ಐಪಿಎಲ್ ಸೀಸನ್‌ಗಳಲ್ಲಿ ಗ್ಲೀಸನ್ ಅವರು ಸೇರ್ಪಡೆಯಾಗುತ್ತಿರುವ ಮೂರನೇ ತಂಡ ಇದಾಗಿದೆ. 2024ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು 2025ರಲ್ಲಿ ಮುಂಬೈ ಇಂಡಿಯನ್ಸ್ ಪರ ಆಡಿದ್ದರು. ಸದ್ಯ ಬೆಂಗಳೂರು ತಂಡವು ಗ್ಲೀಸನ್ ಅವರು ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಲಿದ್ದಾರೆ ಎಂಬ ವಿಶ್ವಾಸ ಹೊಂದಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಸದ್ಯ 16 ಪಾಯಿಂಟ್ಸ್‌ಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದು, ಪ್ಲೇಆಫ್‌ಗಾಗಿ ಟಾಪ್ 4ರಲ್ಲಿ ತನ್ನ ಸ್ಥಾನವನ್ನು ಬಹುತೇಕ ಖಚಿತಪಡಿಸಿಕೊಂಡಿದೆ.ಇದನ್ನೂ ಓದಿ: 1 ಪಂದ್ಯ, ಹಲವು ದಾಖಲೆಗಳು- ಕೊಹ್ಲಿ ವಿಶ್ವದಾಖಲೆಯ ಆಟ, ಮೊದಲ ಸ್ಥಾನಕ್ಕೆ ಜಿಗಿದ ಆರ್‌ಸಿಬಿ

