ಮುಂಬೈ: ಬಾಲಿವುಡ್ ‘ಧಡಕ್ ಬೆಡಗಿ’ ಜಾಹ್ನವಿ ಕಪೂರ್ ಅವರು ರಸ್ತೆಯಲ್ಲಿದ್ದ ಬಾಲಕನಿಗೆ ತಿನ್ನಲು ನೀಡಿ ಆತನ ತಾಯಿಗೆ ಹಣ ನೀಡಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇತ್ತೀಚೆಗೆ ಜಾಹ್ನವಿ ಕಪೂರ್ ಸಲೂನ್ ಹೊರಗೆ ಕಾಣಿಸಿಕೊಂಡಿದ್ದರು. ಜಾಹ್ನವಿ ಕಾರಿನಿಂದ ಇಳಿದು ನಡೆದುಕೊಂಡು ಹೋಗುವಾಗ ಬಾಲಕನೊಬ್ಬ ಅವರ ಮುಂದೆ ಬಂದು ಹೊಟ್ಟೆ ಹಸಿಯುತ್ತಿದೆ ಎಂದು ಹೇಳಿದ್ದಾನೆ. ಬಾಲಕನ ಮಾತು ಕೇಳಿದ ಜಾಹ್ನವಿ ಮತ್ತೆ ಕಾರಿನ ಬಳಿ ಹೋಗಿ ಅಲ್ಲಿದ್ದ ಬಿಸ್ಕೇಟ್ ಪ್ಯಾಕೇಟ್ ಅನ್ನು ಆತನಿಗೆ ನೀಡುತ್ತಾರೆ. ಇದನ್ನೂ ಓದಿ: ಚಾಲಕನಿಂದ ಸಾಲ ಪಡೆದು ಬಾಲಕನಿಗೆ ಸಹಾಯ ಮಾಡಿದ ಜಾಹ್ನವಿ
ಜಾಹ್ನವಿ ಬಿಸ್ಕೇಟ್ ನೀಡುತ್ತಿದ್ದಂತೆ ಬಾಲಕ ಖುಷಿಪಡುತ್ತಾನೆ. ಬಾಲಕನಿಗೆ ಬಿಸ್ಕೇಟ್ ನೀಡಿದ ಬಳಿಕ ಜಾಹ್ನವಿ ಸಲೂನ್ ಬಳಿ ನಡೆದುಕೊಂಡು ಹೋಗುತ್ತಿರುತ್ತಾರೆ. ಈ ವೇಳೆ ಬಲೂನ್ ಮಾರುತ್ತಿದ್ದ ಬಾಲಕನ ತಾಯಿ ಜಾಹ್ನವಿ ಬಳಿ ಹಣ ಕೇಳುತ್ತಾರೆ.
ಜಾಹ್ನವಿ ಅಲ್ಲಿಯೇ ಮಹಿಳೆಗೆ ಹಣವನ್ನು ನೀಡಲಿಲ್ಲ. ಬದಲಿಗೆ ಅವರು ಸಲೂನ್ ಒಳಗೆ ಹೋದ ತಕ್ಷಣ ಬಾಲಕನನ್ನು ಅಲ್ಲಿಯೇ ಕರೆದು ಹಣವನ್ನು ನೀಡುತ್ತಾರೆ. ಈ ವೇಳೆ ಜಾಹ್ನವಿ ಬಾಲಕನಿಗೆ ಹ್ಯಾಪಿ ದೀಪಾವಳಿ ಎಂದು ಹೇಳಿದ್ದಾರೆ. ಜಾಹ್ನವಿ ತಾಯಿ-ಮಗನಿಗೆ ಸಹಾಯ ಮಾಡಿದ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
`ಧಡಕ್’ ಸಿನಿಮಾದ ಮೂಲಕ ಜಾಹ್ನವಿ ಕಪೂರ್ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಸದ್ಯಕ್ಕೆ ಜಾಹ್ನವಿ `ತಖ್ತ್’, `ರೂಹಿ ಅಫ್ಜಾ’ ಮತ್ತು `ದೋಸ್ತಾನಾ-೨ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಈ ನಡುವೆ ಅವರು ೨ ಕೋಟಿ ಅಧಿಕ ಮೌಲ್ಯದ ಮರ್ಸಿಡೀಸ್ ಬೆಂಜ್ ಕಾರನ್ನು ಖರೀದಿಸಿದ್ದರು.
View this post on Instagram
#janhvikapoor snapped at salon in bandra today #viralbayani @viralbhayani