Thursday, 5th December 2019

Recent News

ಚಾಲಕನಿಂದ ಸಾಲ ಪಡೆದು ಬಾಲಕನಿಗೆ ಸಹಾಯ ಮಾಡಿದ ಜಾಹ್ನವಿ

ಮುಂಬೈ: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಚಾಲಕನಿಂದ ಸಾಲ ಪಡೆದು ಬಾಲಕನಿಗೆ ಸಹಾಯ ಮಾಡಿದ ವಿಡಿಯೋವೊಂದು ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿ ಜನರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

ಈ ವಿಡಿಯೋದಲ್ಲಿ ಜಾಹ್ನವಿ ತಮ್ಮ ಕಾರಿನ ಬಳಿ ಹೋಗುತ್ತಿರುತ್ತಾರೆ. ಈ ವೇಳೆ ಬಾಲಕನೊಬ್ಬ ಮ್ಯಾಗಜೀನ್ ಮಾರಲು ಜಾಹ್ನವಿ ಅವರ ಬಳಿ ಬಂದಿದ್ದಾನೆ. ಆಗ ಜಾಹ್ನವಿ ನನ್ನ ಬಳಿ ಹಣ ಇಲ್ಲ ಎಂದು ಕಾರಿನ ಬಳಿ ಹೋಗುತ್ತಾರೆ. ಆದರೂ ಬಾಲಕ ಜಾಹ್ನವಿ ಹಿಂದೆ ಹೋಗುತ್ತಾನೆ.

ಬಳಿಕ ಜಾಹ್ನವಿ ಕಾರಿನಲ್ಲಿ ಕುಳಿತುಕೊಂಡು ಹಿಂದೆ ಸೀಟಿನಲ್ಲಿ ಇದ್ದ ಪೌಚ್(ಪರ್ಸ್) ಎತ್ತಿಕೊಂಡು ಹಣವನ್ನು ಹುಡುಕುತ್ತಿರುತ್ತಾರೆ. ಆಗ ಅವರಿಗೆ ತಮ್ಮ ಬಳಿ ಹಣ ಇಲ್ಲದಿರುವುದು ಗೊತ್ತಾಗುತ್ತದೆ. ಬಳಿಕ ಜಾಹ್ನವಿ ತಮ್ಮ ಚಾಲಕನ ಬಳಿ ಸಹಾಯ ಕೇಳಿದ್ದಾರೆ. ಈ ವೇಳೆ ಚಾಲಕ 500 ರೂ. ನೀಡಿದ್ದರು. ಆ ಹಣವನ್ನು ಜಾಹ್ನವಿ ಬಾಲಕನಿಗೆ ನೀಡಿದ್ದಾರೆ.

ಇಂತಹ ಸಂದರ್ಭದಲ್ಲಿ ಬೇರೆ ಕಲಾವಿದರು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ ಜಾಹ್ನವಿ ಬಾಲಕನಿಗೆ ಸಹಾಯ ಮಾಡಿದ್ದು ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಈ ವಿಡಿಯೋ ನೋಡಿ ಹಲವರು ಜಾಹ್ನವಿ ಅವರನ್ನು ಹೊಗಳಿದ್ದಾರೆ. ಅಲ್ಲದೆ ಕೆಲವರು ‘ಇದು ಶ್ರೀದೇವಿ ಅವರ ಸಂಸ್ಕಾರ. ಅವರು ಕೂಡ ಬಡವರಿಗೆ ಸಹಾಯ ಮಾಡುತ್ತಿದ್ದರು’ ಎಂದಿದ್ದಾರೆ.

ಜಾಹ್ನವಿ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದು, ಖ್ಯಾತ ನಿರ್ದೇಶಕ ಕರಣ್ ಜೋಹರ್ ನಿರ್ದೇಶಿಸುತ್ತಿರುವ ‘ತಕ್ತ್’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರ ಹೊರತುಪಡಿಸಿ ನಟ ಕಾರ್ತಿಕ್ ಆರ್ಯನ್ ಜೊತೆ ‘ದೋಸ್ತಾನ-2’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

 

View this post on Instagram

 

#janhvikapoor genuinely out of cash but driver lends as a girl child wanted help👍 #viralbhayani @viralbhayani

A post shared by Viral Bhayani (@viralbhayani) on

Leave a Reply

Your email address will not be published. Required fields are marked *