ನಾನೇ ಹಾಸನ ಅಭ್ಯರ್ಥಿ ಎಂದು ವರಿಷ್ಠರ ಮೇಲೆ ಒತ್ತಡ ತಂತ್ರ ಹಾಕ್ತಿದ್ದಾರಾ ಭವಾನಿ ರೇವಣ್ಣ?

ಬೆಂಗಳೂರು: ವಿಧಾನಸಭಾ ಚುನಾವಣೆ (Vidhanasabha Elections) ಹತ್ತಿರವಾಗುತ್ತಲೇ ಜೆಡಿಎಸ್ (JDS) ನಲ್ಲಿ ಫ್ಯಾಮಿಲಿ ಫೈಟ್ ಮತ್ತೆ ಶುರುವಾಗಿದೆ. ವಿಧಾನಸಭಾ ಚುನಾವಣೆ ಅಖಾಡಕ್ಕೆ ಎಂಟ್ರಿ ಕೊಡಲು ಮುಂದಾಗಲು ದೇವೇಗೌಡ (HD Devegowda) ರ ಮತ್ತೊಬ್ಬ ಸೊಸೆ ಭವಾನಿ ರೇವಣ್ಣ ಸಿದ್ಧತೆ ಶುರು ಮಾಡಿದ್ದಾರೆ. ಇದರ ಬೆನ್ನಲ್ಲೆ ಹಾಸನ (Hassan) ದಲ್ಲಿ ನಾನೇ ಹಾಸನ ಅಭ್ಯರ್ಥಿ ಅಂತ ಬಹಿರಂಗವಾಗಿ ಘೋಷಣೆ ಮಾಡಿದ್ದಾರೆ. ಭವಾನಿ ರೇವಣ್ಣ ನಡೆ ಜೆಡಿಎಸ್ ಗೆ ನುಂಗಲಾರದ ತುಪ್ಪವಾಗಿದೆ.
ಜೆಡಿಎಸ್ ಪಕ್ಷದಿಂದ ಹಾಸನದಲ್ಲಿ ಟಿಕೆಟ್ ಘೋಷಣೆ ಆಗಿಲ್ಲ. ಆದರೂ ನಾನೇ ಅಭ್ಯರ್ಥಿ ಅಂತ ಭವಾನಿ ರೇವಣ್ಣ (Bhavani Revanna) ಘೋಷಣೆ ಮಾಡಿದ್ದಾರೆ. ದೊಡ್ಡಗೌಡರ ಒಪ್ಪಿಗೆ ಇಲ್ಲದೇ ನಾನೇ ಅಭ್ಯರ್ಥಿ ಅಂದ ಭವಾನಿ ಅವರಿಂದ ಒತ್ತಡ ತಂತ್ರ ಶುರುವಾಗಿದೆಯಾ ಎಂಬ ಚರ್ಚೆ ಶುರುವಾಗಿದೆ. ಭವಾನಿ ರೇವಣ್ಣ ನಡೆಗೆ ಮಾಜಿ ಸಿಎಂ ಕುಮಾರಸ್ವಾಮಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. ಕುಟುಂಬ ರಾಜಕೀಯ ಹಣೆಪಟ್ಟಿ ಬೇಡ ಅಂತ ಕುಮಾರಸ್ವಾಮಿ (HD Kumaraswamy) ಕಿಡಿಕಾರಿದ್ದಾರೆ ಅಂತ ಹೇಳಲಾಗ್ತಿದೆ.
ಕುಟುಂಬ ರಾಜಕೀಯದ ಹಣೆಪಟ್ಟಿ ಹೊತ್ತುಕೊಂಡು ಭವಾನಿ ರೇವಣ್ಣ ಸ್ಪರ್ಧೆಗೆ ಗ್ರೀನ್ ಸಿಗ್ನಲ್ ಕೊಡ್ತಾರಾ ದೊಡ್ಡಗೌಡ್ರು?, ಒತ್ತಡ ಹಾಕಿ ಟಿಕೆಟ್ ಪಡೀತಾರಾ ಭವಾನಿ ರೇವಣ್ಣ ಎಂಬ ಚರ್ಚೆ ಶುರುವಾಗಿದೆ. ಇದನ್ನೂ ಓದಿ: ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಜೆಡಿಎಸ್‌ನಿಂದ ನಾನೇ ಅಭ್ಯರ್ಥಿ: ಭವಾನಿ ರೇವಣ್ಣ
ಭವಾನಿ ರೇವಣ್ಣ ನಡೆಗೆ ಏನು ಕಾರಣ!?: ದೇವೇಗೌಡರು ಸ್ಪರ್ಧೆಗೆ ಒಪ್ಪಿಗೆ ನೀಡಿಲ್ಲ. ದೇವೇಗೌಡರ ಒಪ್ಪಿಗೆಗೂ ಮುನ್ನ ನಾನೇ ಅಭ್ಯರ್ಥಿ ಅನ್ನೋ ಮೂಲಕ ಒತ್ತಡ ಹಾಕುವುದು. ಹಾಸನ ಕ್ಷೇತ್ರದಲ್ಲಿ ಭವಾನಿ ರೇವಣ್ಣ ಹಲವು ವರ್ಷಗಳಿಂದ ಓಡಾಟ ಮಾಡುತ್ತಿದ್ದಾರೆ. ಒಂದು ವೇಳೆ ಕುಟುಂಬ ರಾಜಕೀಯ ಅಂತ ಟಿಕೆಟ್ ಬೇರೆ ಅವರಿಗೆ ಕುಮಾರಸ್ವಾಮಿ ಘೋಷಣೆ ಮಾಡಬಹುದು ಎಂಬ ಆತಂಕದಿಂದ ಹಾಸನದಲ್ಲಿ ನಾನೇ ಅಭ್ಯರ್ಥಿ ಅಂತ ಘೋಷಣೆ ಮಾಡಿದ್ದಾರೆ ಎನ್ನಲಾಗುತ್ತಿದೆ. ನಾನೇ ಅಭ್ಯರ್ಥಿ ಅನ್ನೋ ಮೂಲಕ ಜನ ವಿಶ್ವಾಸವನ್ನು, ಕ್ಷೇತ್ರದ ವಿಶ್ವಾಸವನ್ನು ಹಿಡಿದಿಟ್ಟುಕೊಳ್ಳುವುದು ಭವಾನಿ ಅವರ ತಂತ್ರಗಾರಿಕೆ ಎನ್ನಲಾಗುತ್ತಿದೆ.
ಚುನಾವಣೆಗೆ ನಾನೇ ಅಭ್ಯರ್ಥಿ ಅನ್ನೋ ಮೂಲಕ ಜನರು ನನ್ನ ಜೊತೆ ಇದ್ದಾರೆ. ಹಾಸನದಲ್ಲಿ ಜೆಡಿಎಸ್ ಗೆಲ್ಲಬೇಕಾದರೆ ನನಗೆ ಟಿಕೆಟ್ ಕೊಡಬೇಕು ಎಂಬ ಸಂದೇಶ ನೀಡಿದ್ದಾರೆ. ಮಾತ್ರವಲ್ಲ ಈಗಾಗಲೇ ಚುನಾವಣೆ ಸಿದ್ಧತೆ ಮಾಡಿಕೊಂಡಿದ್ದೇನೆ. ಹೀಗಾಗಿ ಟಿಕೆಟ್ ನನಗೆ ಕೊಡಬೇಕು ಎಂಬ ಒತ್ತಡ ತಂತ್ರ ಅನುಸರಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ಚುನಾವಣೆ ಮುನ್ನ ಜೆಡಿಎಸ್‍ಗೆ ಫ್ಯಾಮಿಲಿ ಟೆನ್ಶನ್- ಹಾಸನ ಟಿಕೆಟ್‍ಗಾಗಿ ಭವಾನಿ ರೇವಣ್ಣ ಪಟ್ಟು
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k