ಟೆಹ್ರಾನ್: ತಮ್ಮ ಕದನ ವಿರಾಮ ಒಪ್ಪಂದಕ್ಕೆ ಸಹಿ ಹಾಕದಿದ್ದರೆ ಇಡೀ ಇರಾನ್‌ನನ್ನು (Iran) ಸರ್ವನಾಶ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಇದಕ್ಕೆ ಮಂಗಳವಾರದ ವರೆಗೆ (ಇಂದು) ಡೆಡ್‌ಲೈನ್ ಕೂಡ ನೀಡಿದ್ದಾರೆ. ಟ್ರಂಪ್ (Donald Trump) ಗಡುವು ಸಮೀಪಿಸುತ್ತಿದ್ದಂತೆ ಟೆನ್ಞನ್ ಕೊಡೋಕೆ ಇರಾನ್ ಹೊಸ ವರಸೆ ತೆಗೆದಿದೆ. ವಿದ್ಯುತ್ ಸ್ಥಾವರಗಳ ಸುತ್ತಲೂ ಮಾನವ ಸರಪಳಿ (Human Chains) ನಿರ್ಮಿಸುವಂತೆ ಇಡೀ ದೇಶದ ಯುವ ಸಮೂಹಕ್ಕೆ ಇರಾನ್ ಕರೆ ಕೊಟ್ಟಿದೆ.
JUST IN: 🇺🇸🇮🇷 President Trump threatens to blow up “everything” in Iran if a ceasefire deal is not reached soon.
“If they don’t make a deal, I am blowing up everything over there.”
“Donald Trump has really gone cra… Show more pic.twitter.com/Q9DESoeKgJ
— Global War Desk (@GlobalNewsHQI) April 6, 2026
ಕ್ರೀಡಾಪಟುಗಳು, ಕಲಾವಿದರು, ವಿದ್ಯಾರ್ಥಿಗಳು ಸೇರಿದಂತೆ ದೇಶಾದ್ಯಂತ ಇರುವ ಯುವಜನರು ಮಂಗಳವಾರ ಮಧ್ಯಾಹ್ನ 2 ಗಂಟೆ ಹೊತ್ತಿಗೆ ಪ್ರಮುಖ ಇಂಧನ ಮೂಲ ಸೌಕರ್ಯಗಳು ಹಾಗೂ ವಿದ್ಯುತ್ ಸ್ಥಾವರಗಳ ಬಳಿ ಒಟ್ಟುಗೂಡುವಂತೆ ಇರಾನ್‌ನ ಯುವ & ಕ್ರೀಡಾ ಸಚಿವಾಲಯ ಹೇಳಿದೆ. ಇದನ್ನೂ ಓದಿ: ಒಂದೇ ರಾತ್ರಿಯಲ್ಲಿ ಇಡೀ ಇರಾನ್‌ನ ಸರ್ವನಾಶ ಮಾಡಬಹುದು, ಅದು ಮಂಗಳವಾರ ಇರಬಹುದು: ಟ್ರಂಪ್ ಮತ್ತೆ ಎಚ್ಚರಿಕೆ
ದೇಶದ ಯುವ ಸಮೂಹಕ್ಕೆ ಇರಾನ್ ಹೇಳಿರೋದೇನು?
ಯುವಜನರ ಸಲಹೆಯ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ. ಹಲವು ವಿಶ್ವವಿದ್ಯಾಲಯದ ಯುವಜನರು, ಯುವ ಕಲಾವಿದರು ಹಾಗೂ ಯುವ ಸಂಘಟನೆಗಳು ದೇಶದ ವಿದ್ಯುತ್ ಸ್ಥಾವರಗಳ (Power Plants) ಸುತ್ತಲೂ ಮಾನವ ಸರಪಳಿ ರಚಿಸುವಂತೆ ಪ್ರಸ್ತಾಪಿಸಿದ್ದಾರೆ. ʻಉಜ್ವಲ ಭವಿಷ್ಯಕ್ಕಾಗಿ ಇರಾನ್ ಯುವಕರ ಮಾನವ ಸರಪಳಿʼ ಘೋಷವಾಕ್ಯದಡಿ ಅಭಿಯಾನ ಆರಂಭಿಸಲಾಗುತ್ತದೆ. ದೇಶದ ಏಕತೆ ಮತ್ತು ದೃಢನಿಶ್ಚಯ ಪ್ರತಿಬಿಂಬಿಸುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಕದನ ವಿರಾಮಕ್ಕೆ ಒಪ್ಪದ ಇರಾನ್ ಮೇಲೆ ಮಿಸೈಲ್ ಮಳೆಗರೆದ ಇಸ್ರೇಲ್ – ಹಲವೆಡೆ ಸ್ಫೋಟ

ದೇಶಾದ್ಯಂತ ಯುವಜನರ ಭಾಗವಹಿಸುವಿಕೆಯೊಂದಿಗೆ ವಿದ್ಯುತ್ ಸ್ಥಾವರಗಳ ಸುತ್ತಲೂ ಮಾನವ ಸರಪಳಿ ರಚನೆಯಾಗಲಿದೆ. ಇದು ಮೂಲ ಸೌಕರ್ಯವನ್ನು ರಕ್ಷಿಸುವ ಮತ್ತು ಇರಾನ್ ಉಜ್ವಲ ಭವಿಷ್ಯಕ್ಕಾಗಿ ಯುವಕರ ಬದ್ಧತೆಯನ್ನು ಸೂಚಿಸುವ ಸಂಕೇತವಾಗಲಿದೆ ಎಂದು ಕ್ರೀಡಾ ಸಚಿವಾಲಯದ ಯುವ ವ್ಯವಹಾರಗಳ ಉಪಮುಖ್ಯಸ್ಥ ಅಲಿರೆಜಾ ರಹೀಮಿ ಹೇಳಿದ್ದಾರೆ. ಇದನ್ನೂ ಓದಿ: ಯುಎಸ್ ಸೇನೆ ಮಾಹಿತಿ ಇರಾನ್‌ಗೆ ಮಾರಿದ ಚೀನಾ: ಅಮೆರಿಕ
ಟ್ರಂಪ್ ಎಚ್ಚರಿಕೆ ಏನು?
ಇರಾನ್ ಕದನ ವಿರಾಮ ಒಪ್ಪಂದ ಮಾಡಿಕೊಳ್ಳಲು ವಿಫಲವಾದ್ರೆ ಅಥವಾ ಹಾರ್ಮುಜ್ ಜಲಸಂಧಿಯನ್ನ ಮತ್ತೆ ತೆರೆಯಲು ವಿಫಲವಾದರೆ, ಇರಾನಿನ ವಿದ್ಯುತ್ ಸ್ಥಾವರಗಳು, ಸೇತುವೆಗಳು ಮತ್ತು ಇತರ ಮೂಲಸೌಕರ್ಯಗಳ ಮೇಲೆ ದಾಳಿ ಮಾಡುವುದಾಗಿ ಡೊನಾಲ್ಡ್ ಟ್ರಂಪ್ ಎಚ್ಚರಿಸಿದ್ದರು. ಅಮೆರಿಕವು (America) ಒಂದೇ ರಾತ್ರಿಯಲ್ಲಿ ಇಡೀ ಇರಾನ್ (Iran) ದೇಶವನ್ನು ನಾಶಪಡಿಸಬಹುದು. ಅದು ಮಂಗಳವಾರ ರಾತ್ರಿ ಆಗಿರಬಹುದು ಎಂದು ವಾರ್ನಿಂಗ್ ಕೊಟ್ಟಿದ್ದರು.

