– 20ನೇ ಆವೃತ್ತಿಯ ಐಪಿಎಲ್ಗೂ ಮುನ್ನ ಬಿಗ್ ಟ್ರೇಡ್ಡೀಕ್; ಪಾಂಡ್ಯ ಮೇಲೂ ಸಿಎಸ್ಕೆ ಕಣ್ಣು
ಚೆನ್ನೈ: ಕಳೆದ ಆವೃತ್ತಿಯಲ್ಲಿ ಲೀಗ್ ಸುತ್ತಿನಲ್ಲೇ ಹೊರಬಿದ್ದ ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡ ಈ ಬಾರಿ ಮಹತ್ವದ ಬದಲಾವಣೆಗೆ ಮುಂದಾಗಿದೆ. 2027ರಲ್ಲಿ ಆವೃತ್ತಿಯಲ್ಲಿ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಫ್ರಾಂಚೈಸಿ ತಂಡದಲ್ಲಿ ಕೆಲವು ಬದಲಾವಣೆಗಳನ್ನ ಮಾಡಲು ಶುರು ಮಾಡಿದೆ. ಈ ನಿಟ್ಟಿನಲ್ಲಿ ಸಿಎಸ್ಕೆ ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH) ತಂಡಗಳು 4 ಆಟಗಾರರ ವಿನಿಮಯವನ್ನ ಪೂರ್ಣಗೊಳಿಸಿವೆ.
🚨 ONE OF THE BIGGEST IPL TRADE 🤯
Liam Livingstone & Jack Edwards to CSK.
Khaleel Ahmed & Nathan Ellis to SRH. https://t.co/wsPz1fL26U
— Johns. (@CricCrazyJohns) November 5, 2026
ಒಪ್ಪಂದದ ಪ್ರಕಾರ, ವೇಗದ ಬೌಲರ್ಗಳಾದ ಖಲೀಲ್ ಅಹ್ಮದ್ (Khaleel Ahmed) ಮತ್ತು ನಾಥನ್ ಎಲ್ಲಿಸ್ ಹೈದರಾಬಾದ್ ತಂಡಕ್ಕೆ ಸೇರಲಿದ್ದು, ಬದಲಿಗೆ ಲಿಯಾಮ್ ಲಿವಿಂಗ್ಸ್ಟೋನ್ (Liam Livingstone) ಮತ್ತು ಜಾಕ್ ಎಡ್ವರ್ಡ್ಸ್ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನ ಸೇರಿಕೊಳ್ಳಲಿದ್ದಾರೆ. ಈ ಮಧ್ಯೆ ಮುಂಬೈ ತಂಡದ ಹಾಲಿ ಕ್ಯಾಪ್ಟನ್ ಹಾರ್ದಿಕ್ ಪಾಂಡ್ಯ ಅವರನ್ನು ತಂಡಕ್ಕೆ ಸೇರಿಸಿಕೊಳ್ಳುವ ಮಾಸ್ಟರ್ ಪ್ಲ್ಯಾನನ್ನೂ ಸಿಎಸ್ಕೆ ಮಾಡಿಕೊಂಡಿದೆ.
ಇಂದು (ಗುರುವಾರ) ಬಿಸಿಸಿಐ ಈ ಮಹತ್ವದ ಒಪ್ಪಂದವನ್ನ ಖಚಿತಪಡಿಸಿದೆ. ಲಿವಿಂಗ್ಸ್ಟೋನ್ 6 ಕೋಟಿ ರೂಪಾಯಿಗೆ CSK ತಂಡಕ್ಕೆ ಬಿಕರಿಯಾಗಿದ್ದಾರೆ. 2025ರ ಐಪಿಎಲ್ ಹರಾಜಿನಲ್ಲಿ ಹೈದರಾಬಾದ್ ತಂಡ ಇವರನ್ನ 13 ಕೋಟಿ ರೂ.ಗೆ ಬಿಕರಿ ಮಾಡಿತ್ತು. ಇನ್ನೂ ಜಾಕ್ ಎಡ್ವರ್ಡ್ 3 ಕೋಟಿ ರೂ.ಗೆ ಚೆನ್ನೈ ತಂಡವನ್ನ ಸೇರಿಕೊಂಡಿದ್ದಾರೆ. ಅದರಂತೆ ಖಲೀಲ್ ಅಹ್ಮದ್ 4.8 ಕೋಟಿ ಮತ್ತು ನಾಥನ್ ಎಲ್ಲೀಸ್ (Nathan Ellis) 2 ಕೋಟಿ ರೂ.ಗೆ ಹೈದರಾಬಾದ್ ತಂಡಕ್ಕೆ ಡೀಲ್ ಆಗಿದ್ದಾರೆ.
20ನೇ ಆವೃತ್ತಿಯ ಐಪಿಎಲ್ಗಾಗಿ ಸಿಎಸ್ಕೆ ತನ್ನ ತಂಡ ಹಾಗೂ ಕೋಚಿಂಗ್ ವಿಭಾಗದಲ್ಲಿ ಮಹತ್ವದ ಬದಲಾವಣೆ ತರಲು ಯೋಜನೆಗಳನ್ನು ರೂಪಿಸುತ್ತಿರುವ ಹೊತ್ತಿನಲ್ಲೇ ಈ ಟ್ರೇಡ್ ಡೀಲ್ ನಡೆದಿದೆ. ಡಿಸೆಂಬರ್ 16ರಂದು ಗೋವಾದಲ್ಲಿ 2027ರ ಐಪಿಎಲ್ಗೆ ಮಿನಿ ಹರಾಜು ನಡೆಯಲಿದೆ.
ಚಾಂಪಿಯನ್ ತಂಡದಲ್ಲಿದ್ದ ಲಿವಿಂಗ್ಸ್ಟೋನ್
IPL 2025ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ ಆದಾಗ ಲಿವಿಂಗ್ಸ್ಟೋನ್ ಆ ತಂಡದ ಭಾಗವಾಗಿದ್ದರು. 2026ರ ಸೀಸನ್ನಲ್ಲಿ SRH ಪರ ಕೇವಲ 2 ಪಂದ್ಯಗಳನ್ನ ಆಡಿದ್ದರು. ಇಂಗ್ಲೆಂಡ್ನ ಈ ಆಲ್ರೌಂಡರ್ ಈಗ 6 ಕೋಟಿ ರೂಪಾಯಿಗೆ ಸಿಎಸ್ಕೆ ಸೇರಿದ್ದಾರೆ. ಇನ್ನೂ ಜಾಕ್ ಎಡ್ವರ್ಡ್ಸ್ 3 ಕೋಟಿ ರೂಪಾಯಿಗೆ ಚೆನ್ನೈ ತಂಡಕ್ಕೆ ಸೇರಲಿದ್ದಾರೆ. ಆಸ್ಟ್ರೇಲಿಯಾದ ಈ ಆಲ್ರೌಂಡರ್, 19ನೇ ಆವೃತ್ತಿಯ ಐಪಿಎಲ್ನಲ್ಲಿ ಹೈದರಾಬಾದ್ಪರ ಒಂದೂ ಪಂದ್ಯವನ್ನು ಆಡಿರಲಿಲ್ಲ.


