ಉಡುಪಿ: ಸಾಸ್ತಾನ ಟೋಲ್ ಬಳಿ ಆಟೋಗೆ ಕಾರು (Car) ಡಿಕ್ಕಿಯಾಗಿ (Accident) ಕಮರಿಗೆ ಬಿದ್ದು ಹೊತ್ತಿ ಉರಿದಿದೆ.
ಡಿಕ್ಕಿಯಾಗುತ್ತಿದ್ದಂತೆ ನಿಯಂತ್ರಣ ಕಳೆದುಕೊಂಡು ಡಿವೈಡರ್ಗೆ ಕಾರು ಡಿಕ್ಕಿಯಾಗಿದೆ. ಡಿಕ್ಕಿಯಾದ ರಭಸಕ್ಕೆ ಕ್ಷಣಾರ್ಧದಲ್ಲೇ ಕಾರು ಧಗಧಗನೆ ಹೊತ್ತಿ ಉರಿದಿದೆ. ಈ ಅಪಘಾತದಲ್ಲಿ ರಿಕ್ಷಾದಲ್ಲಿದ್ದ ಮಹಿಳೆ, ಚಾಲಕ ಸೇರಿ ಮೂವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಕಂದಕಕ್ಕೆ ಉರುಳಿದ ಕಾರು – 7 ಮಂದಿ ಸಾವು, ಐವರಿಗೆ ಗಾಯ
ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಬಂದು ಬೆಂಕಿ ನಂದಿಸಿದ್ದಾರೆ. ಕೋಟ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಬೆಂಗಳೂರು, ಮೈಸೂರು ಹೈವೆಯಲ್ಲಿ ಟಿಪ್ಪರ್ಗೆ ಹಿಂಬದಿಯಿಂದ ಥಾರ್ ಡಿಕ್ಕಿ – ಕೇರಳದ ಇಬ್ಬರು ದುರ್ಮರಣ
