ಕೋಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮತ್ತು ರಾಜಸ್ಥಾನ್ ರಾಯಲ್ಸ್ (RR) ನಡುವಿನ ಐಪಿಎಲ್ (IPL 2026) ಪಂದ್ಯದಲ್ಲಿ 13 ಎಸೆತಗಳಲ್ಲಿ 27 ರನ್ ಗಳಿಸಿದ್ದ ಕ್ಯಾಮರೂನ್ ಗ್ರೀನ್ (Cameron Green) ಅವರನ್ನು ಧ್ರುವ್ ಜುರೆಲ್ (Dhruv Jurel) ಸ್ಟಂಪಿಂಗ್ ಮೂಲಕ ಔಟ್ ಮಾಡಿದರು.
SRH ENTERS TOP 4 OF IPL POINTS TABLE. 🎯
– An animated celebration by Kavya Maran. ❤️ pic.twitter.com/kPm109cPtU
— Mufaddal Vohra (@mufaddal_vohra) April 18, 2026
KKR ನ ರನ್ ಚೇಸ್‌ನ ಐದನೇ ಓವರ್‌ನಲ್ಲಿ ರವಿ ಬಿಷ್ಣೋಯ್ ಬೌಲಿಂಗ್ ಮಾಡುತ್ತಿದ್ದರು. ಈ ವೇಳೆ ಬ್ಯಾಟ್ ಬೀಸಿ ಮುನ್ನುಗ್ಗಿದ ಕ್ಯಾಮರೂನ್ ಬ್ಯಾಟ್‌ಗೆ ಬಾಲ್ ತಪ್ಪಿ ಕೀಪರ್ ಕೈ ಸೇರಿತು. ಕೋಡಲೇ ಕೀಪರ್ ಧ್ರುವ್ ಜುರೆಲ್ ಮಿಂಚಿನ ವೇಗದಲ್ಲಿ ಜಿಗಿದು ಬಾಲ್ ಹಿಡಿದು ವಿಕೆಟ್‌ಗೆ ಎಸೆದರು. ಈ ವೇಳೆ ಅವರು ಬಿದ್ದರೂ ಸಹ ಗುರಿ ತಪ್ಪಲಿಲ್ಲ. ಇದನ್ನೂ ಓದಿ: 2027 ರ ಏಕದಿನ ವಿಶ್ವಕಪ್ ವರೆಗೆ ಅಜಿತ್ ಅಗರ್ಕರ್ ಟೀಂ ಇಂಡಿಯಾ ಆಯ್ಕೆ ಮುಖ್ಯಸ್ಥ?
ಬಳಿಕ ಥರ್ಡ್ ಅಂಪೈರ್ ನಿರ್ಣಯಕ್ಕಾಗಿ ಕ್ಯಾಮರಾನ್ ಸ್ವಲ್ಪ ಸಮಯ ಕಾದರು. ಆದರೆ ಅಷ್ಟರಲ್ಲಾಗಲೇ ಥರ್ಡ್ ಅಂಪೈರ್ ಔಟ್ ಎಂದು ಪ್ರಕಟಿಸಿದರು. ಈ ವೇಳೆ ಜುರೆಲ್ ಚಾಣಾಕ್ಷ್ಯತನ ನೋಡಿ ಕ್ಷಣ ಕಾಲ ಕ್ಯಾಮರೂನ್ ದಂಗಾದರು.
ರಾಜಸ್ಥಾನ್ ರಾಯಲ್ಸ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಕ್ಕೆ ನಿಗದಿತ 20 ಓವರ್‌ಗಳಲ್ಲಿ 156 ರನ್‌ಗಳ ಗುರಿ ನೀಡಿದೆ. ಇದನ್ನೂ ಓದಿ: ಕೆಕೆಆರ್‌ಗೆ ಶ್ರೀಲಂಕಾ ವೇಗಿ ಎಂಟ್ರಿ – ಸತತ 6 ಸೋಲುಗಳಿಂದ ಕಂಗೆಟ್ಟಿರೋ ತಂಡಕ್ಕೆ ಸಿಗುತ್ತಾ ಬೂಸ್ಟ್?

