InternationalLatestMain Post

ಇಂಡೋನೇಷ್ಯಾ: ಜ್ವಾಲಾಮುಖಿ ಸ್ಫೋಟದಿಂದ 13 ಮಂದಿ ಸಾವು

ಜಕಾರ್ತ: ಜ್ವಾಲಾಮುಖಿ ಸ್ಫೋಟದಿಂದ 13 ಮಂದಿ ಮೃತಪಟ್ಟಿದ್ದರು, ಹತ್ತಾರು ಜನರು ಗಾಯಗೊಂಡಿರುವ ಘಟನೆ ಇಂಡೋನೇಷ್ಯಾದ ಜಾವಾ ಪ್ರಾಂತ್ಯದ ಮೌಂಟ್‌ ಸಿಮೇರುವಿನಲ್ಲಿ ನಡೆದಿದೆ.

ಜಾವಾ ದ್ವೀಪದ ಅತಿ ಎತ್ತರದ ಪರ್ವತವಾದ ಸಿಮೇರುವಿನಲ್ಲಿ ಜ್ವಾಲಾಮುಖಿ ಸ್ಫೋಟಗೊಂಡು ಹತ್ತಿರದ ಹಳ್ಳಿಗಳಲ್ಲಿ ಲಾವಾ ಹರಿದಿದೆ. ಪರಿಣಾಮವಾಗಿ ಬಹುತೇಕ ನಾಶವಾಗಿದ್ದು, ಹಲವರು ಮೃತಪಟ್ಟಿದ್ದಾರೆ. ಸ್ಥಳೀಯರು ಭಯಭೀತರಾಗಿ ಬೇರೆಡೆಗೆ ಸ್ಥಳಾಂತರರಾಗಿದ್ದಾರೆ. ಇದನ್ನೂ ಓದಿ: ತಮಿಳುನಾಡಲ್ಲಿ ಸರ್ಕಾರಿ ನೌಕರಿಗೆ ತಮಿಳು ಕಡ್ಡಾಯ

ಸಿಮೇರು ಸಮೀಪದ ಲುಮಾಜಾಂಗ್‌ ಕೆರೊಬೊಕನ್‌ ಗ್ರಾಮದಲ್ಲಿ ಜ್ವಾಲಾಮುಖಿ ಸ್ಫೋಟದಿಂದಾಗಿ 13 ಮಂದಿ ಮೃತಪಟ್ಟಿದ್ದು, ಅವರಲ್ಲಿ ಇಬ್ಬರನ್ನು ಗುರುತಿಸಲಾಗಿದೆ ಎಂದು ಅಧಿಕಾರಿ ಅಬ್ದುಲ್‌ ಮುಹಾರಿ ತಿಳಿಸಿದ್ದಾರೆ. ಇಬ್ಬರು ಗರ್ಭಿಣಿಯರು ಸೇರಿದಂತೆ 92 ಮಂದಿ ಗಾಯಗೊಂಡಿದ್ದಾರೆ. ಗ್ರಾಮದಲ್ಲಿ ನೆಲೆಸಿದ್ದ 902 ಮಂದಿಯನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ನಾಳೆ ಬಾಬರಿ ಮಸೀದಿ ಧ್ವಂಸಗೊಂಡ ದಿನ- ಮಥುರಾದಲ್ಲಿ ನಿಷೇಧಾಜ್ಞೆ ಜಾರಿ

ಇಂಡೋನೇಷ್ಯಾದಲ್ಲಿ ಆಗಾಗ ಭೂಕಂಪ ಸಂಭವಿಸುತ್ತಿರುತ್ತದೆ. ಹೆಚ್ಚಿನ ಭಾರಿ ಭೂಕಂಪನ ಆಗುವುದರಿಂದ ಅಲ್ಲಿ ಜ್ವಾಲಾಮುಖಿಗಳು ಸೃಷ್ಟಿಯಾಗುತ್ತಿರುತ್ತವೆ. ಇದರಿಂದ ಸ್ಥಳೀಯರಿಗೆ ಆಗಾಗ ಅಪಾಯ ಸಂಭವಿಸುತ್ತದೆ.

Leave a Reply

Your email address will not be published. Required fields are marked *

Back to top button