ನವದೆಹಲಿ: 2ನೇ ದಿನದಾಟದಲ್ಲಿ ಆಸ್ಟ್ರೇಲಿಯಾ (Australia) ಆಟಗಾರ ನಥನ್ ಲಿಯಾನ್ (Nathan Lyon) ಸ್ಪಿನ್ ದಾಳಿಗೆ ಭಾರತ ಪಲ್ಟಿ ಹೊಡೆದಿದ್ದು, 262 ರನ್‌ಗಳಿಗೆ ಆಲೌಟ್ ಆಗಿದೆ.
2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ದಿನದ ಅಂತ್ಯಕ್ಕೆ 12 ಓವರ್‌ಗಳಲ್ಲಿ 61 ರನ್‌ಗಳಿಸಿ 62 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ. ಪಂದ್ಯದ 2ನೇ ದಿನದಾಟದಲ್ಲೂ ಬೌಲರ್‌ಗಳ ಆರ್ಭಟ ಮುಂದುವರಿದಿದ್ದು, ಮೂರನೇ ದಿನದಾಟಕ್ಕೆ ರೋಚಕ ತಿರುವು ಪಡೆದುಕೊಂಡಿದೆ.
Advertisement
Advertisement
ಇಂದು ಇನ್ನಿಂಗ್ಸ್ ಆರಂಭಿಸಿದ್ದ ಭಾರತ ನಥನ್ ಲಿಯಾನ್ ಸ್ಪಿನ್ ದಾಳಿಗೆ ಪಲ್ಟಿಹೊಡೆಯಿತು. ಘಟಾನುಘಟಿಗಳಾದ ರೋಹಿತ್ ಶರ್ಮಾ (Rohit Sharma), ಕೆ.ಎಲ್.ರಾಹುಲ್ (KL Rahul), ಚೇತೇಶ್ವರ್ ಪೂಜಾರ, ಶ್ರೇಯಸ್ ಅಯ್ಯರ್, ಶ್ರೀಕರ್ ಭರತ್ ಲಿಯಾನ್‌ಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ಪರಿಣಾಮ ಭಾರತ 262 ರನ್‌ಗಳಿಗೆ ಆಲೌಟ್ ಆಯಿತು. ಇದನ್ನೂ ಓದಿ: ಬೌಲರ್‌ಗಳ ಆಟಕ್ಕೆ ಕಂಗಾಲು – ಮೊದಲ ದಿನವೇ ಆಸೀಸ್ ಸರ್ವಪತನ
Advertisement
ಆರಂಭಿಕರಾಗಿ ಕಣಕ್ಕಿಳಿದ ರೋಹಿತ್ ಶರ್ಮಾ ಹಾಗೂ ಕೆ.ಎಲ್.ರಾಹುಲ್ ಜೋಡಿ ಉತ್ತಮ ಇನ್ನಿಂಗ್ಸ್ ಕಟ್ಟುವಲ್ಲಿ ವಿಫಲವಾಯಿತು. ರೋಹಿತ್ ಶರ್ಮಾ 32 ರನ್‌ಗಳಿಗೆ, ಕೆ.ಎಲ್.ರಾಹುಲ್ 17 ರನ್‌ಗಳಿಗೆ ಔಟಾದರು. ಈ ಬೆನ್ನಲ್ಲೇ ಶ್ರೇಯಸ್ ಅಯ್ಯರ್ 4 ರನ್, ಶ್ರೀಕರ್ ಭರತ್ 6 ರನ್‌ಗಳಿಸಿ ಪೆವಿಲಿಯನ್ ಸೇರಿದ್ರೆ, ಚೇತೇಶ್ವರ್ ಪೂಜಾರ ಶೂನ್ಯಕ್ಕೆ ನಿರ್ಗಮಿಸಿದರು.
Advertisement
ಮಧ್ಯಮ ಕ್ರಮಾಂಕದಲ್ಲಿ ಒಂದಾದ ವಿರಾಟ್ ಕೊಹ್ಲಿ, ರವೀಂದ್ರ ಜಡೇಜಾ ಜೋಡಿ ಉತ್ತಮ ಇನ್ನಿಂಗ್ಸ್ಕಟ್ಟಲು ಪ್ರಯತ್ನಿಸಿದರು. ಕೊಹ್ಲಿ 44 ರನ್ (84 ಎಸೆತ, 4 ಬೌಂಡರಿ) ಗಳಿಸಿದ್ರೆ, ಜಡೇಜಾ 26 ರನ್‌ಗಳಿಸಿದ್ದರು. ಅಷ್ಟರಲ್ಲಿ ಆಸೀಸ್ ಬೌಲರ್‌ಗಳು ಇವರಿಬ್ಬರ ಆಟಕ್ಕೆ ಬ್ರೇಕ್ ಹಾಕಿ, ಪೆವಿಲಿಯನ್ ದಾರಿ ತೋರಿಸಿದರು. ಇದನ್ನೂ ಓದಿ: ಕ್ರಿಕೆಟಿಗ ಪೃಥ್ವಿ ಶಾ ಕಾರಿನ ಮೇಲೆ ದಾಳಿ – ಸಿನಿ ತಾರೆ ಸಪ್ನಾ ಗಿಲ್ ಅರೆಸ್ಟ್
ಅಕ್ಷರ್ ಪಟೇಲ್ ಫಿಫ್ಟಿ:
ನಂತರ ಕಣಕ್ಕಿಳಿದ್ದ ಅಕ್ಷರ್ ಪಟೇಲ್ (Axar Patel) ಸಿಕ್ಸರ್, ಬೌಂಡರಿಗಳನ್ನು ಸಿಡಿಸುತ್ತಾ ಉತ್ತಮ ಬ್ಯಾಟಿಂಗ್ ಮಾಡಿದರು. 115 ಎಸೆತಗಳಲ್ಲಿ 74 ರನ್ (9 ಬೌಂಡರಿ, 3 ಸಿಕ್ಸರ್) ಸಿಡಿಸಿ ಮಿಂಚಿದರು. ಇದಕ್ಕೆ ಸಾಥ್ ನೀಡಿದ ರವಿಚಂದ್ರನ್ ಅಶ್ವಿನ್ ಸಹ 71 ಎಸೆತಗಳಲ್ಲಿ 5 ಬೌಂಡರಿಗಳೊಂದಿಗೆ 37 ರನ್ ಗಳಿಸಿ ತಂಡಕ್ಕೆ ನೆರವಾದರು. ನಂತರ ಬಂದ ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಕ್ರಮವಾಗಿ 2, 1 ರನ್‌ಗಳಿಸಿ ಔಟಾದರು. ಇದಲ್ಲದೇ ತಂಡಕ್ಕೆ ಹೆಚ್ಚುವರಿಯಾಗಿ 19 ರನ್ ಸೇರ್ಪಡೆಯಾಯಿತು.
ಅಂತಿಮವಾಗಿ 2ನೇ ದಿನದಾಟದ ಅಂತ್ಯಕ್ಕೆ ಭಾರತ 262 ರನ್‌ಗಳಿಗೆ ಆಲೌಟ್ ಆಯಿತು. ತನ್ನ 2ನೇ ಇನ್ನಿಂಗ್ಸ್ ಆರಂಭಿಸಿದ ಆಸ್ಟ್ರೇಲಿಯಾ ತಂಡ 12 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 61 ರನ್‌ಗಳಿಸಿ 62 ರನ್‌ಗಳ ಮುನ್ನಡೆ ಕಾಯ್ದುಕೊಂಡಿದೆ.
ಆರಂಭಿಕರಾಗಿ ಕಣಕ್ಕಿಳಿದ ಉಸ್ಮಾನ್ ಖವಾಜ ಜಡೇಜಾ ಸ್ಪಿನ್ ದಾಳಿಗೆ ಔಟಾಗಿ ಪೆವಿಲಿಯನ್ ಸೇರಿದರು. ಏಕದಿನ ಶೈಲಿಯಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿದ ಟ್ರಾವಿಸ್ ಹೆಡ್ 39 (40 ಎಸೆತ, 5 ಬೌಂಡರಿ, 1 ಸಿಕ್ಸ್) ಗಳಿದರೆ, ಮಾರ್ನಸ್ ಲಾಬುಶೇನ್ 16 ರನ್ (19 ಎಸೆತ, 3 ಬೌಂಡರಿ) ಗಳಿಸಿದ್ದು, ಭಾನುವಾರ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಆಸ್ಟ್ರೇಲಿಯಾ ತಂಡದ ಪರ ನಥನ್ ಲಿಯಾನ್ 5 ವಿಕೆಟ್ ಕಬಳಿಸಿದರೆ, ಮ್ಯಾಥ್ಯೂ ಕುಹ್ನೆಮನ್, ಟಾಡ್ ಮರ್ಫಿ ತಲಾ 2 ವಿಕೆಟ್ ಪಡೆದರೆ, ಪ್ಯಾಟ್ ಕಮ್ಮಿನ್ಸ್ 1 ವಿಕೆಟ್‌ಗೆ ತೃಪ್ತಿಪಟ್ಟುಕೊಂಡರು.
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k