– ತೆಂಗಿನ ಎಣ್ಣೆ, ತೆಂಗಿನಕಾಯಿ, ದ್ರಾಕ್ಷಿ ದುಬಾರಿ
ನವದೆಹಲಿ: ದೇಶದ ಚಿಲ್ಲರೆ ಹಣದುಬ್ಬರವು (Retail Inflation) ಮಾರ್ಚ್ ತಿಂಗಳಿನಲ್ಲಿ 2019ರ ಬಳಿಕ ಕನಿಷ್ಠ ಮಟ್ಟವಾದ 3.34%ಕ್ಕೆ ಇಳಿಕೆಯಾಗಿದೆ.
ಈ ವರ್ಷದ ಫೆಬ್ರವರಿಯಲ್ಲಿ ಚಿಲ್ಲರೆ ಹಣದುಬ್ಬರ 3.61%ಗೆ ಇಳಿಕೆಯಾಗಿತ್ತು. ಮಾರ್ಚ್‌ನಲ್ಲಿ 27 ಬೇಸಿಸ್ ಅಂಕ ಕಡಿಮೆಯಾಗುವ ಮೂಲಕ ಚಿಲ್ಲರೆ ಹಣದುಬ್ಬರ ಮತ್ತಷ್ಟು ಇಳಿಕೆಯಾಗಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ (Ministry of Commerce and Industry) ತಿಳಿಸಿದೆ. 2019ರ ಮಾರ್ಚ್‌ನಲ್ಲಿ 3.28% ದಾಖಲಾಗಿತ್ತು.
ಫೆಬ್ರವರಿಯಲ್ಲಿ ಗ್ರಾಮೀಣ (Rural) ಭಾಗದಲ್ಲಿ ಚಿಲ್ಲರೆ ಹಣದುಬ್ಬರ 3.79% ಇದ್ದರೆ ಮಾರ್ಚ್‌ನಲ್ಲಿ 3.25%ಕ್ಕೆ ತಗ್ಗಿದೆ. ಫೆಬ್ರವರಿಯಲ್ಲಿ ನಗರದಲ್ಲಿ (Urban) 3.32% ದಾಖಲಾಗಿದ್ದರೆ ಮಾರ್ಚ್‌ನಲ್ಲಿ 3.43ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ : ಈ ಬಾರಿ ಸಾಮಾನ್ಯಕ್ಕಿಂತ ಹೆಚ್ಚಿನ ಮಳೆಯ ಸಾಧ್ಯತೆ – ಮುಂಗಾರು ಮಳೆ ಬಗ್ಗೆ ಹವಾಮಾನ ಇಲಾಖೆ ಮಾಹಿತಿ
ಆಹಾರದ ಹೊರತಾಗಿ, ನಗರ ಪ್ರದೇಶಗಳಲ್ಲಿ ವಸತಿ ಹಣದುಬ್ಬರವು 2.91% ರಿಂದ 3.03% ಕ್ಕೆ ಸ್ವಲ್ಪ ಏರಿಕೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ವಿಭಾಗಗಳು ಕ್ರಮವಾಗಿ 3.98% ಮತ್ತು 4.26% ನಷ್ಟು ಹಣದುಬ್ಬರ ದರಗಳನ್ನು ದಾಖಲಿಸಿವೆ. ಸಾರಿಗೆ ಮತ್ತು ಸಂವಹನ ಹಣದುಬ್ಬರವು ಸಹ ಏರಿಕೆಯಾಗಿದ್ದು, ಹಿಂದಿನ ತಿಂಗಳ 2.93% ಕ್ಕೆ ಹೋಲಿಸಿದರೆ 3.30% ರಷ್ಟು ಏರಿಕೆಯಾಗಿದೆ
ವೈಯಕ್ತಿಕ ವಸ್ತುಗಳ ಪೈಕಿ, ತೆಂಗಿನ ಎಣ್ಣೆ (56.81%), ತೆಂಗಿನಕಾಯಿ (42.05%), ಚಿನ್ನ (34.09%), ಬೆಳ್ಳಿ (31.57%), ಮತ್ತು ದ್ರಾಕ್ಷಿಗಳು (25.55%) ನಲ್ಲಿ ವರ್ಷದಿಂದ ವರ್ಷಕ್ಕೆ ತೀವ್ರ ಬೆಲೆ ಏರಿಕೆಯಾಗುತ್ತಿದೆ. ಇದನ್ನೂ ಓದಿ: ನವಜಾತ ಶಿಶುಗಳ ಕಳ್ಳಸಾಗಣೆ ಮಾಡಿದರೆ ಆಸ್ಪತ್ರೆಗಳ ಪರವಾನಿಗೆ ಕೂಡಲೇ ಅಮಾನತುಗೊಳಿಸಿ: ಸುಪ್ರೀಂ
ತರಕಾರಿಗಳು, ಆಲೂಗಡ್ಡೆ ಮತ್ತು ಇತರ ಆಹಾರ ಪದಾರ್ಥಗಳ ಬೆಲೆಗಳು ಕಡಿಮೆಯಾಗಿರುವುದರಿಂದ ಮಾರ್ಚ್‌ನಲ್ಲಿ ಸಗಟು ಬೆಲೆ ಹಣದುಬ್ಬರವು ಆರು ತಿಂಗಳ ಕನಿಷ್ಠ ಮಟ್ಟವಾದ 2.05% ಕ್ಕೆ ಇಳಿದಿದೆ ಎಂ
ಸಗಟು ಬೆಲೆ ಸೂಚ್ಯಂಕ (Wholesale Price Index ) ಆಧಾರಿತ ಹಣದುಬ್ಬರವು ಫೆಬ್ರವರಿಯಲ್ಲಿ 2.38% ರಷ್ಟಿತ್ತು. ಕಳೆದ ವರ್ಷ ಮಾರ್ಚ್‌ನಲ್ಲಿ ಇದು 0.26% ರಷ್ಟಿತ್ತು.