ಕೊಲಂಬೊ: ಇಲ್ಲಿನ ಸಿಂಹಳೀಸ್ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಶ್ರೀಲಂಕಾ (Sri Lanka) ವಿರುದ್ಧ ನಡೆಯುತ್ತಿರುವ 2ನೇ ಟೆಸ್ಟ್ ಪಂದ್ಯದ ಮೊದಲ ದಿನವೇ ಭಾರತ ಪ್ರಾಬಲ್ಯ ಸಾಧಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಶುಭಮನ್ ಗಿಲ್ ನಾಯಕತ್ವದ ಟೀಂ ಇಂಡಿಯಾ (Team India), ಮೊದಲ ದಿನ 85 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 300 ರನ್ ಕಲೆಹಾಕಿದೆ. ಇದನ್ನೂ ಓದಿ: ಮರಳಿ ತಂಡಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದ ಗುಜರಾತ್ ಟೈಟಾನ್ಸ್ – ಪಾಂಡ್ಯ ಮೇಲೆ ಕಣ್ಣಿಟ್ಟ ಚೆನ್ನೈ, ಕೆಕೆಆರ್

ಶತಕ ಸಿಡಿಸಿ ಮೆರೆದಾಡಿದ ಕನ್ನಡಿಗ
ಶ್ರೀಲಂಕಾ ವಿರುದ್ಧ ಅಭ್ಯಾಸದ ಪಂದ್ಯದಲ್ಲಿ ಶತಕ ಸಿಡಿಸಿದ್ದ ಕನ್ನಡಿಗ ದೇವದತ್ ಪಡಿಕಲ್ (Devdutt Padikkal) ಮೊದಲ ಟೆಸ್ಟ್‌ನಲ್ಲೂ ಶತಕ ಸಿಡಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಪಾತ್ರರಾಗಿದ್ದರು. ಇದೀಗ 2ನೇ ಟೆಸ್ಟ್ ಪಂದ್ಯದಲ್ಲೂ ಶತಕ ಸಿಡಿಸಿ ಟೀಂ ಇಂಡಿಯಾಗೆ ಆಸರೆಯಾಗಿದ್ದಾರೆ.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಪಡಿಕಲ್ 193 ಎಸೆತಗಳಲ್ಲಿ 117 ರನ್ ಗಳಿಸಿ ಔಟಾದರು. ಇನ್ನುಳಿದಂತೆ ನಾಯಕ ಶುಭಮನ್ ಗಿಲ್ (Shubman Gill) 50 ರನ್ (108 ಎಸೆತ), ಕೆ.ಎಲ್ ರಾಹುಲ್ 18 ರನ್, ಯಶಸ್ವಿ ಜೈಸ್ವಾಲ್ 45 ರನ್, ರವೀಂದ್ರ ಜಡೇಜಾ 43 ರನ್ ಕೊಡುಗೆ ನೀಡಿ ಔಟಾದರು. ಇನ್ನೂ ಧ್ರುವ್ ಜುರೆಲ್ 7 ರನ್, ಸರಾಂಶ್ ಜೈನ್ 4 ರನ್ ಗಳಿಸಿದ್ದು, ಸೋಮವಾರ 2ನೇ ದಿನದ ಆಟ ಆರಂಭಿಸಲಿದ್ದಾರೆ.

ಇನ್ನೂ ಶ್ರೀಲಂಕಾ ಪರ ಅಸಿತ ಫೆರ್ನಾಂಡೋ 4 ವಿಕೆಟ್ ಪಡೆದರೆ, ಲಹಿರು ಕುಮಾರ ಹಾಗೂ ಕೇಶರ ನುವಂತ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ರೇಪ್ ಕೇಸ್‌ನಲ್ಲಿ ಬಂಧಿತ ಕ್ರಿಕೆಟಿಗ ಅಭಿಷೇಕ್ ಪೊರೇಲ್‌ಗೆ ಜಾಮೀನು ನಿರಾಕರಣೆ – ಐಪಿಎಲ್ ಕ್ರಿಕೆಟಿಗ 14 ದಿನ ಜೈಲಿಗೆ

