ಸೌತ್ ಸಿನಿಮಾಗಳ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಇಲಿಯಾನಾ ಡಿ ಕ್ರೂಸ್(Ileana D’cruz) ಇದೀಗ ಮತ್ತೆ ಸುದ್ದಿಯಲ್ಲಿದ್ದಾರೆ. ಸಿನಿಮಾಗಿಂತ ತಮ್ಮ ವೈಯಕ್ತಿಕ ವಿಚಾರವಾಗಿ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಬಾಲಿವುಡ್ನ ಖ್ಯಾತ ನಟಿಯ ಸಹೋದರನ ಜೊತೆ ಹಸೆಮಣೆ ಏರಲು ಇಲಿಯಾನಾ ಸಜ್ಜಾಗಿದ್ದಾರೆ.
ದಕ್ಷಿಣದ ಸಿನಿಮಾಗಳ ಮೂಲಕ ಪಡ್ಡೆಹುಡುಗರ ನಿದ್ದೆಗೆಡಿಸಿದ ನಟಿ ಇಲಿಯಾನಾ ನಂತರ ಬಾಲಿವುಡ್ಗೆ ಲಗ್ಗೆ ಇಟ್ಟರು. ಆದರೆ ಹಿಂದಿಯಲ್ಲಿ ನಟಿಸಿದ ಕೆಲ ಸಿನಿಮಾಗಳು ಮಕಾಡೆ ಮಲಗಿತ್ತು. ನಂತರ ವಿದೇಶಿ ಪ್ರಜೆ ಆ್ಯಂಡ್ರಿವ್ ಜೊತೆ ಡೇಟಿಂಗ್ನಲ್ಲಿ ಇಲಿಯಾನಾ, ವೈಯಕ್ತಿಕ ಕಾರಣಗಳಿಂದ ಆ ರಿಲೇಷನ್ಶಿಪ್ಗೆ ಬ್ರೇಕ್ ಹಾಕಿದ್ದರು. ಆ್ಯಂಡ್ರಿವ್ನಿಂದ ಗರ್ಭಿಣಿಯಾಗಿದ್ದಾರೆ ಹಾಗಾಗಿ ಸಿನಿಮಾದಿಂದ ದೂರ ಇದ್ದಾರೆ ಎಂಬ ಗಾಸಿಪ್ ಹಬ್ಬಿತ್ತು. ಇದು ಸುಳ್ಳು ಸುದ್ದಿ ಎಂದು ನಟಿ ಸ್ಪಷ್ಟನೆ ನೀಡಿದ್ದರು. ಈಗ ಬಾಲಿವುಡ್ನ ಸ್ಟಾರ್ ನಟಿ ಕತ್ರಿನಾ ಕೈಫ್(Katrina Kaif) ಸಹೋದರನ ಜೊತೆ ಇಲಿಯಾನಾ ಡೇಟಿಂಗ್ನಲ್ಲಿದ್ದಾರೆ. ಸದ್ಯದಲ್ಲೇ ಮದುವೆ ಕೂಡ ಆಗಲಿದ್ದಾರೆ. ಇದನ್ನೂ ಓದಿ:ಮೈಸೂರು ಸೊಸೆಯಾಗಲು ಒಪ್ಪದ ಆದಿಲ್: ರಾಖಿ ಸಾವಂತ್ ಮದುವೆ ಪ್ರಪೋಸಲ್ ರಿಜೆಕ್ಟ್
ಹಿಂದಿ ಚಿತ್ರರಂಗದ ಸ್ಟಾರ್ ನಟಿ ಕತ್ರಿನಾ ಕೈಫ್ ಸಹೋದರ ಸೆಬಾಸ್ಟಿಯನ್ ಲಾರೆಂಟ್ ಮಿಚೆಲ್ ಜೊತೆ ಇಲಿಯಾನಾ ಪ್ರೀತಿಯಲ್ಲಿ ಬಿದ್ದಿದ್ದಾರೆ. ಅದಕ್ಕೆ ಪೂರಕವೆಂಬಂತೆ ಇತ್ತಿಚೆಗೆ ಕತ್ರಿನಾ ಹುಟ್ಟುಹಬ್ಬಕ್ಕೆ ಸೆಬಾಸ್ಟಿಯನ್ ಜೊತೆ ಇಲಿಯಾನಾ ಕಾಣಿಸಿಕೊಂಡಿದ್ದರು. ಇದೀಗ ಸದ್ದಿಲ್ಲದೆ ಹಸೆಮಣೆ ಏರಲು ನಟಿ ರೆಡಿಯಾಗಿದ್ದಾರೆ. ಶಾಪಿಂಗ್ ಸೇರಿದಂತೆ ಮದುವೆ ತಯಾರಿ ಕೂಡ ಭರದಿಂದ ಸಿದ್ಧತೆ ನಡೆಯುತ್ತಿದೆ.
ಇಲಿಯಾನಾ ಕಡೆಯದಾಗಿ `ಬಿಗ್ ಬುಲ್'(Big Bull) ಚಿತ್ರದಲ್ಲಿ ನಟಿಸಿದ್ದರು. ಅಭಿಷೇಕ್ ಬಚ್ಚನ್ ನಾಯಕಿಯಾಗಿ ಕಾಣಿಸಿಕೊಂಡಿದ್ದರು. ಇದೀಗ ನಟಿಯ ಕೈಯಲ್ಲಿ ಎರಡು ಬಾಲಿವುಡ್ ಸಿನಿಮಾಗಳಿವೆ.