BollywoodCinemaLatestLeading NewsMain Post

ರಾಖಿ ಸಾವಂತ್‍ಳನ್ನು ಮೈಸೂರು ಸೊಸೆಯಾಗಲು ಒಪ್ಪದ ಆದಿಲ್: ಮದುವೆ ಪ್ರಪೋಸಲ್ ರಿಜೆಕ್ಟ್

ಬಾಲಿವುಡ್ ನಟಿ ರಾಖಿ ಸಾವಂತ್ (Rakhi Sawant) ಸಿನಿಮಾಗಿಂತ, ವೈಯಕ್ತಿಕ ವಿಚಾರವಾಗಿಯೇ ಸಿಕ್ಕಾಪಟ್ಟೆ ಸುದ್ದಿಯಲ್ಲಿದ್ದಾರೆ. ರಿತೇಶ್ ಜೊತೆಗಿನ ಬ್ರೇಕಪ್ ನಂತರ ಮೈಸೂರು ಮೂಲದ ಹುಡುಗ ಆದಿಲ್ (Adil Khan)  ಜೊತೆ ಡೇಟಿಂಗ್‌ನಲ್ಲಿದ್ದಾರೆ. ಆದಿಲ್ ಜತೆಗಿನ ಲವ್ ಸ್ಟೋರಿ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಟಿ ಸದ್ದು ಮಾಡುತ್ತಿದ್ದಾರೆ. ಹೀಗಿರುವಾಗ ರಾಖಿ ತನ್ನ ಬಾಯ್‌ಫ್ರೆಂಡ್ ಆದಿಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅಚ್ಚರಿ ಅಂದ್ರೆ ರಾಖಿ ಪ್ರಪೋಸಲ್ ಅನ್ನು ಆದಿಲ್ ರಿಜೆಕ್ಟ್ ಮಾಡಿದ್ದಾರೆ.

`ಬಿಗ್ ಬಾಸ್’ ಖ್ಯಾತಿಯ ರಾಖಿ ಸಾವಂತ್, ಆದಿಲ್ ಜೊತೆಗಿನ ಲವ್ ರಿಲೇಷನ್‌ಶಿಪ್ ವಿಷ್ಯವಾಗಿ ನೆಟ್ಟಿಗರ ಗಮನ ಸೆಳೆದಿದ್ದಾರೆ. ಈ ಹಿಂದೆ ರಾಖಿ ಸಾವಂತ್‌ಗೆ ದುಬಾರಿ ಗಿಫ್ಟ್ ಕೊಟ್ಟು ಭಿನ್ನವಾಗಿ ಆದಿಲ್ ಪ್ರಪೋಸ್ ಮಾಡಿದ್ದರು. ಮುಂಬೈನ ಬೀದಿಗಳಲ್ಲಿ ಪ್ರೇಮ ಪಕ್ಷಿಗಳಾಗಿ ಹಾರಾಡುತ್ತಿರುವ ಈ ಜೋಡಿ ಇದೀಗ ಮತ್ತೆ ಪಾಪರಾಜಿಗಳ ಕಣ್ಣಿಗೆ ಬಿದ್ದಿದ್ದಾರೆ. ಎಲ್ಲರ ಎದುರು ನಟಿ ರಾಖಿ ಸಾವಂತ್, ಆದಿಲ್‌ಗೆ ಪ್ರಪೋಸ್ ಮಾಡಿದ್ದಾರೆ. ಅಚ್ಚರಿ ಅಂದ್ರೆ ರಾಖಿ ಸಾವಂತ್ ಪ್ರಪೋಸಲ್ ಅನ್ನು ಆದಿಲ್ ನಿರಾಕರಿಸಿದ್ದಾರೆ. ರಾಖಿ ಜೊತೆ ಮದುವೆಯಾಗಲು ಆದಿಲ್ ʻನೋʼ ಎಂದಿದ್ದಾರೆ. ಇದನ್ನೂ ಓದಿ:ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

 

View this post on Instagram

 

A post shared by Viral Bhayani (@viralbhayani)

ರಾಖಿ ಸಾವಂತ್ ಪ್ರೀತಿಯಿಂದ ಬೊಕ್ಕೆ ಹಿಡಿದು ಆದಿಲ್ ಪ್ರಪೋಸ್ ಮಾಡಿದ್ದರೆ, ನಗು ನಗುತ್ತಾ ತಮಾಷೆಯಾಗಿ ರಾಖಿ ಸಾವಂತ್ ಅವರನ್ನ ರಿಜೆಕ್ಟ್ ಮಾಡಿದ್ದಾರೆ. ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇನ್ನು ಬಿಗ್ ಬಾಸ್ ಸೀಸನ್ 16ಕ್ಕೆ ಹೋಗಲು ರಾಖಿ ಸಾವಂತ್ ಮತ್ತು ಆದಿಲ್ ತೆರೆಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ. ಅಷ್ಟಕ್ಕೂ ಈ ಸೀಸನ್‌ನಲ್ಲಿ ರಾಖಿ ಸಾವಂತ್ ಜೋಡಿ ಕಾಣಿಸಿಕೊಳ್ಳುತ್ತಾರಾ ಎಂಬುದನ್ನ ಕಾದು ನೋಡಬೇಕಿದೆ.

Live Tv

Back to top button