BollywoodCinemaLatestMain Post

ವಿಚಾರಣೆ ವೇಳೆ ‘ಬೆತ್ತಲೆ ಫೋಟೋ’ ನಂದಲ್ಲ ಎಂದ ಬಾಲಿವುಡ್ ನಟ ರಣವೀರ್ ಸಿಂಗ್

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಬೆತ್ತಲೆ ಫೋಟೋ ಶೂಟ್ ಮಾಡಿಸಿಕೊಂಡು ಅಚ್ಚರಿ ಮೂಡಿಸಿದ್ದರು. ಸ್ವತಃ ಆ ಫೋಟೋವನ್ನು ಅವರು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಖ್ಯಾತ ನಟನೊಬ್ಬ ಹೀಗೆ ಬೆತ್ತಲೆ ಫೋಟೋ ಶೂಟ್ ನಲ್ಲಿ ಭಾಗಿಯಾಗಿದ್ದು ಸ್ವತಃ ಅಭಿಮಾನಿಗಳಿಗೆ ಇಷ್ಟವಾಗಲಿಲ್ಲ. ಬಾಲಿವುಡ್ (Bollywood) ಕೂಡ ಬೆರಗಿನಿಂದಲೇ ಈ ನಡೆಯನ್ನು ಸ್ವೀಕರಿಸಿತ್ತು. ಕೆಲವರಂತೂ ರಸವತ್ತಾಗಿಯೇ ಕಾಮೆಂಟ್ ಮಾಡಿದ್ದರು.

ರಣವೀರ್ ಹಾದಿಯನ್ನೇ ಕೆಲವರು ತುಳಿದರು. ಹಿಂದಿ ಕಿರುತೆರೆ ನಟನೊಬ್ಬ ಬೆತ್ತಲೆ ಫೋಟೋ (Nude Photo) ಶೂಟ್ ಮಾಡಿಸಿಕೊಂಡ. ತೆಲುಗಿನಲ್ಲೂ ಇಂಥದ್ದೊಂದು ಘಟನೆ ನಡೆಯಿತು. ಇದು ವಿವಾದಕ್ಕೂ ಕಾರಣವಾಯಿತು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಕಾರಣ ಕೊಟ್ಟು ಎನ್.ಜಿ.ಓ ಸಂಸ್ಥೆಯು ಮುಂಬೈನ (Mumbai) ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇದನ್ನೂ ಓದಿ:ನಟಿ ಶ್ರೀಲೀಲಾ ತಾಯಿ ವಿರುದ್ಧ ಎಫ್ಐಆರ್: ಬಂಧನಕ್ಕಾಗಿ ಬಲೆ ಬೀಸಿದ ಪೊಲೀಸರು

ರಣವೀರ್ ಸಿಂಗ್ ಮೇಲೆ ದೂರು ದಾಖಲಾದ ನಂತರ ಪೊಲೀಸ್ (Police) ಠಾಣೆಗೆ ಬಂದು ಹೇಳಿಕೆ ನೀಡುವಂತೆ ಕಳೆದ ತಿಂಗಳು ನೋಟಿಸ್ ಕಳುಹಿಸಲಾಗಿತ್ತು. ತಾವು ಊರಲ್ಲಿ ಇರದೇ ಇರುವ ಕಾರಣಕ್ಕಾಗಿ ಹಾಜರಾಗಲು ಆಗುತ್ತಿಲ್ಲ. ಮುಂಬೈಗೆ ಬಂದ ತಕ್ಷಣವೇ ಹಾಜರಾಗುವುದಾಗಿ ತಿಳಿಸಿದ್ದಾರೆ. ಹಾಗಾಗಿ ಆಗಸ್ಟ್ 29 ರಂದು ಬೆಳಗ್ಗೆ 7.30ಕ್ಕೆ ಪೊಲೀಸ್ ಠಾಣೆಗೆ ಅವರು ಹಾಜರಾಗಿ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಎರಡು ಗಂಟೆಗಳ ಕಾಲ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದೆ.

ಈ ವೇಳೆ ತನಿಖಾಧಿಕಾರಿಯ ಮುಂದೆ ಬೆತ್ತಲಾಗಿರುವ ಫೋಟೋ ನನ್ನದಲ್ಲ ಎಂದು ರಣವೀರ್ ಸಿಂಗ್ ತಿಳಿಸಿದ್ದಾರಂತೆ. ಗುಪ್ತಾಂಗ ಕಾಣುವ ರೀತಿಯಲ್ಲಿ ವೈರಲ್ (Viral) ಆಗಿರುವ ಆ ಫೋಟೋ ನನ್ನದಲ್ಲ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ. ಅದನ್ನು ವೈರಲ್ ಮಾಡಿದೆ. ಆ ಫೋಟೋದಲ್ಲಿ ಇರುವುದು ನಾನಲ್ಲ ಎಂದು ಹೇಳಿಕೆ ನೀಡಿದ್ದಾರಂತೆ. ಸದ್ಯ ಹೇಳಿಕೆ ಪಡೆದುಕೊಂಡು ಮುಂದಿನ ವಿಚಾರಣೆ ಕೂಡ ಮಾಡಲಾಗುತ್ತಿದೆ.

Live Tv

Leave a Reply

Your email address will not be published.

Back to top button