Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಭಾರತದಲ್ಲಿ ಆಡದಿದ್ದರೆ ವಿಶ್ವಕಪ್‌ ಟೂರ್ನಿಯಿಂದಲೇ ಹೊರದಬ್ಬುತ್ತೇವೆ – ಬಾಂಗ್ಲಾಗೆ ಐಸಿಸಿ ಲಾಸ್ಟ್‌ ವಾರ್ನಿಂಗ್‌
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಭಾರತದಲ್ಲಿ ಆಡದಿದ್ದರೆ ವಿಶ್ವಕಪ್‌ ಟೂರ್ನಿಯಿಂದಲೇ ಹೊರದಬ್ಬುತ್ತೇವೆ – ಬಾಂಗ್ಲಾಗೆ ಐಸಿಸಿ ಲಾಸ್ಟ್‌ ವಾರ್ನಿಂಗ್‌

Latest

ಭಾರತದಲ್ಲಿ ಆಡದಿದ್ದರೆ ವಿಶ್ವಕಪ್‌ ಟೂರ್ನಿಯಿಂದಲೇ ಹೊರದಬ್ಬುತ್ತೇವೆ – ಬಾಂಗ್ಲಾಗೆ ಐಸಿಸಿ ಲಾಸ್ಟ್‌ ವಾರ್ನಿಂಗ್‌

Public TV
Last updated: January 19, 2026 12:16 pm
Public TV
Share
2 Min Read
ICC Jay shah
SHARE

ಢಾಕಾ/ನವದೆಹಲಿ:‌ 2026ರ ಟಿ20 ವಿಶ್ವಕಪ್‌ (T20 World Cup 2026) ಪಂದ್ಯಗಳನ್ನಾಡಲು ಭಾರತಕ್ಕೆ ಬರಲ್ಲ ಎಂದು ಪಟ್ಟು ಹಿಡಿದಿರುವ ಬಾಂಗ್ಲಾದೇಶ ಕ್ರಿಕೆಟ್‌ ತಂಡಕ್ಕೆ ಐಸಿಸಿ ಲಾಸ್ಟ್‌ ವಾರ್ನಿಂಗ್‌ ಕೊಟ್ಟಿದೆ. ಭಾರತದಲ್ಲಿ (India) ಪಂದ್ಯ ಆಡಲು ಬರದಿದ್ದರೆ, ವಿಶ್ವಕಪ್‌ ಟೂರ್ನಿಯಿಂದಲೇ ಹೊರದಬ್ಬುತ್ತೇವೆ ಎಂದು ಎಚ್ಚರಿಕೆ ಕೊಟ್ಟಿದೆ.

ಮೂಲಗಳ ಪ್ರಕಾರ, ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ (BCB) ತನ್ನ ನಿರ್ಧಾರ ಬದಲಾಯಿಸಿಕೊಳ್ಳಲು, ಜನವರಿ 21 ರ ವರೆಗೆ ಗಡುವು ನೀಡಿದೆ. ಬಾಂಗ್ಲಾ ತಂಡವನ್ನ ಭಾರತಕ್ಕೆ ಕಳುಹಿಸಲು ಒಪ್ಪದಿದ್ದರೆ, ಪ್ರಸ್ತುತ ಪುರುಷರ ಟಿ20 ರ‍್ಯಾಂಕಿಂಗ್‌ ಆಧಾರದ ಮೇಲೆ ಬೇರೊಂದು ಯುರೋಪಿಯನ್‌ ತಂಡವನ್ನ ಟೂರ್ನಿಗೆ ಆಯ್ಕೆ ಮಾಡಲಿದೆ ಎಂದು ಐಸಿಸಿ ಎಚ್ಚರಿಕೆ ನೀಡಿದೆ.

mustafizur rahman 3

ಕ್ರಿಕೆಟಿಗ ಮುಸ್ತಾಫಿಜುರ್ ರೆಹಮಾನ್‌ (Mustafizur Rahman) ಅವರನ್ನ ಐಪಿಎಲ್‌ನಿಂದ ಹೊರದಬ್ಬಿದ ಬಳಿಕ ಬಾಂಗ್ಲಾ ಈ ರೀತಿ ಕ್ಯಾತೆ ತೆಗೆದಿದೆ. ಭದ್ರತಾ ಕಾರಣಗಳನ್ನ ನೀಡಿ ತನ್ನ ಪಾಲಿನ ಪಂದ್ಯಗಳನ್ನ ನೆನೆಯ ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಪಟ್ಟು ಹಿಡಿದಿದೆ. ಅದಕ್ಕಾಗಿ ಐರ್ಲೆಂಡ್‌ ಜೊತೆಗೆ ಲೀಗ್‌ ಪಂದ್ಯಗಳನ್ನು ಬದಲಾವಣೆ ಮಾಡುವಂತೆ ಕೇಳಿಕೊಂಡಿದೆ. ಏಕೆಂದ್ರೆ ಐರ್ಲೆಂಡ್‌ ತನ್ನ ಎಲ್ಲಾ ಲೀಗ್‌ ಪಂದ್ಯಗಳನ್ನು ಶ್ರೀಲಂಕಾದಲ್ಲಿ ಆಡಲಿದೆ. ಆದ್ರೆ ಬಾಂಗ್ಲಾ ವಿರುದ್ಧ ಅಥವಾ ಭಾರತದಲ್ಲಿ ಆಡುವ ಇತರ ಯಾವುದೇ ತಂಡಗಳು ಈ ರೀತಿ ಭದ್ರತೆಯ ಬಗ್ಗೆ ಕಳವಳ ವ್ಯಕ್ತಪಡಿಸಿಲ್ಲ ಎಂದು ಐಸಿಸಿ ಬಿಸಿಬಿಗೆ ತಿಳಿಸಿದೆ.

ಬಿಸಿಬಿ ಹಾಗೂ ಐಸಿಸಿ ನಡುವಿನ ಬಿಕ್ಕಟ್ಟು ಈಗ 3ನೇ ವಾರಕ್ಕೆ ತಲುಪಿದೆ. ಐಸಿಸಿ ಟಿ20 ವಿಶ್ವಕಪ್‌ 2026ರ ಟೂರ್ನಿ ಫೆ.7 ರಂದು ಪಾಕಿಸ್ತಾನ ಮತ್ತು ನೆದರ್ಲೆಂಡ್‌ ನಡುವಿನ ಪಂದ್ಯದಿಂದ ಶುರುವಾಗಲಿದೆ. ಒಂದುವ ವೇಳೆ ಬಾಂಗ್ಲಾ ಭಾರತದಲ್ಲಿ ಆಡಲು ನಿರಾಕರಿಸಿದ್ರೆ, ಬೇರೊಂದು ತಂಡಕ್ಕೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಜ.21 ರ ವರೆಗೆ ಐಸಿಸಿ ಗಡುವು ನೀಡಿದೆ.

Jay Shah 1

ದಾಖಲೆ ಬೆಲೆಗೆ ಬಿಕರಿಯಾಗಿದ್ದ ರೆಹಮಾನ್‌
2026ರ ಐಪಿಎಲ್‌ ಟೂರ್ನಿಗಾಗಿ ಡಿಸೆಂಬರ್‌ನಲ್ಲಿ ನಡೆದ ಹರಾಜಿನಲ್ಲಿ ಮುಸ್ತಾಫಿಜುರ್ ರೆಹಮಾನ್‌ ಅವರನ್ನ ಕೆಕೆಆರ್‌ ಫ್ರಾಂಚೈಸಿಯು 9.20 ಕೋಟಿ ರೂ. ನೀಡಿ ಖರೀದಿಸಿತ್ತು. ಐಪಿಎಲ್‌ ಇತಿಹಾಸದಲ್ಲಿ ಅತಿ ಹೆಚ್ಚು ಬೆಲೆಗೆ ಮಾರಾಟವಾದ ಬಾಂಗ್ಲಾ ಆಟಗಾರ ಎಂಬ ಹೆಗ್ಗಳಿಕೆಗೂ ಮುಸ್ತಾಫಿಜುರ್ ಪಾತ್ರವಾಗಿದ್ದರು. ಆದ್ರೆ ಶೇಖ್‌ ಹಸೀನಾ ಸರ್ಕಾರ ಪತನದ ಬಳಿಕ ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಂಬಂಧ ಹಾಳಾಗಿದೆ. ಈಗ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿರುವ ಕಾರಣ ಬಾಂಗ್ಲಾದೇಶದ ಆಟಗಾರರು ಐಪಿಎಲ್‌ನಲ್ಲಿ (IPL) ಆಡಬಾರದು ಎಂಬ ಆಕ್ರೋಶ ಕ್ರಿಕೆಟ್‌ ಅಭಿಮಾನಿಗಳಿಂದ ವ್ಯಕ್ತವಾಗಿತ್ತು. ಒತ್ತಡ ಜಾಸ್ತಿಯಾಗುತ್ತಿದ್ದಂತೆ ಬಿಸಿಸಿಐ ಮಧ್ಯಪ್ರವೇಶಿಸಿ ಮುಸ್ತಾಫಿಜುರ್ ರೆಹಮಾನ್ ಅವರನ್ನ ಕೆಕೆಆರ್‌ನಿಂದ ಕೈಬಿಡುವಂತೆ ಫ್ರಾಂಚೈಸಿಗೆ ಸೂಚಿಸಿತ್ತು.

ಫೆಬ್ರವರಿಯಲ್ಲಿ ಟಿ20 ವಿಶ್ವಕಪ್‌
2026ರ ಟಿ20 ವಿಶ್ವಕಪ್‌ ಟೂರ್ನಿಯ ಹಕ್ಕು ಭಾರತದ್ದೇ ಆದರೂ ಶ್ರೀಲಂಕಾ ಜೊತೆಗಿನ ಜಂಟಿ ಆತಿಥ್ಯದಲ್ಲಿ ನಡೆಸಲಾಗುತ್ತಿದೆ. ಭಾರತ ಮತ್ತು ಪಾಕ್‌ ನಡುವಿನ ಸಂಬಂಧ ಹದಗೆಟ್ಟಿದ್ದರಿಂದ, ಪಾಕಿಸ್ತಾನದ ಎಲ್ಲಾ ಪಂದ್ಯಗಳು ಲಂಕಾದಲ್ಲಿ ನಡೆಯಲಿದೆ. ಬಾಂಗ್ಲಾ ತಂಡವು ಫೆಬ್ರವರಿ 7 ರಂದು ಕೋಲ್ಕತ್ತಾದ ಈಡನ್‌ ಗಾರ್ಡನ್‌ನಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ತನ್ನ ವಿಶ್ವಕಪ್‌ ಅಭಿಯಾನ ಶುರು ಮಾಡಲಿದೆ. ಅದೇ ಸಮಯಕ್ಕೆ ಪಾಕಿಸ್ತಾನ ಮತ್ತು ನೆದರ್ಲ್ಯಾಂಡ್‌ ನಡುವಿನ ಪಂದ್ಯ ಶ್ರೀಲಂಕಾದಲ್ಲಿ ನಡೆಯಲಿದೆ. ಫೆ.9 ರಂದು ಇಟೇ ವಿರುದ್ಧ, ಫೆ.14 ರಂದು ಇಂಗ್ಲೆಂಡ್‌ ವಿರುದ್ಧ ಈಡನ್‌ ಗಾರ್ಡನ್‌ನಲ್ಲಿ ಹಾಗೂ ಅಂತಿಮ ಲೀಗ್‌ ಸುತ್ತಿನ ಪಂದ್ಯವನ್ನ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ ನೇಪಾಳದ ವಿರುದ್ಧ ಆಡಬೇಕಿದೆ.

TAGGED:bangladeshbcciICCindiaIPL 2026Mustafizur RahmanT20 World Cup 2026ಐಪಿಎಲ್‌ 2026ಐಸಿಸಿಟಿ20 ವಿಶ್ವಕಪ್‌ 2026ಬಾಂಗ್ಲಾ ಕ್ರಿಕೆಟ್‌ ಬೋರ್ಡ್‌ಬಾಂಗ್ಲಾದೇಶಬಿಸಿಸಿಐಭಾರತ
Share This Article
Facebook Whatsapp Whatsapp Telegram

Cinema news

Karen Kshiti Suvarna September 21 set for Cannes market premiere
ಕೇನ್ಸ್‌ನಲ್ಲಿ ಕನ್ನಡ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣಗೆ ಗೌರವ
Cinema Latest Sandalwood
Daali Dhananjaya
ಮೊದಲ ಮಗುವಿನ ನಿರೀಕ್ಷೆಯಲ್ಲಿ ಡಾಲಿ ಧನಂಜಯ್‌ ದಂಪತಿ
Cinema Latest Main Post Sandalwood
Darshan
ಜಾಮೀನಿಗಾಗಿ ಎರಡನೇ ಬಾರಿ ಸುಪ್ರೀಂ ಕದ ತಟ್ಟಿದ ದರ್ಶನ್‌
Cinema Court Latest Main Post Sandalwood
yash toxic
ಜಾಗತಿಕ ಮಟ್ಟದಲ್ಲಿ ಅಬ್ಬರಿಸಲು ಸಜ್ಜಾದ ಯಶ್ – ಟಾಕ್ಸಿಕ್ ಬಿಡುಗಡೆ ದಿನಾಂಕ ಮತ್ತೆ ಮುಂದಕ್ಕೆ
Cinema Latest Main Post

You Might Also Like

accident death
Bengaluru City

ಚಿಕನ್ ತರಲು ಹೋಗುತ್ತಿದ್ದವನಿಗೆ ಖಾಸಗಿ ಬಸ್ ಡಿಕ್ಕಿ – ಬಾಲಕ ಸಾವು

Public TV
By Public TV
38 minutes ago
Nepal Accident
Latest

ನೇಪಾಳದ ರೋಲ್ಪಾದಲ್ಲಿ ಪ್ರಪಾತಕ್ಕೆ ಬಿದ್ದ ಜೀಪ್ – 20 ಮಂದಿ ಸಾವು, ರಕ್ಷಣಾ ಕಾರ್ಯಾಚರಣೆಗೆ ಮಳೆ ಅಡ್ಡಿ

Public TV
By Public TV
1 hour ago
siddaramaiah
Bengaluru City

ಇದು ಆಡಳಿತವಲ್ಲ, ಸಂಘಟಿತ ಲೂಟಿ – ಗ್ಯಾಸ್ ಬೆಲೆ ಏರಿಕೆಗೆ ಕೇಂದ್ರದ ವಿರುದ್ಧ ಸಿಎಂ ವಾಗ್ದಾಳಿ

Public TV
By Public TV
2 hours ago
IndiGo Flight
Districts

ಶಿವಮೊಗ್ಗ – ಬೆಂಗಳೂರು ನಡುವಿನ ಹಾರಾಟ ನಿಲ್ಲಿಸಿದ ಇಂಡಿಗೋ ವಿಮಾನ

Public TV
By Public TV
2 hours ago
Hajj
Latest

ಹಜ್‌ ಯಾತ್ರೆಯ ವಿಮಾನ ದರ 10,000 ರೂ. ಹೆಚ್ಚಳ

Public TV
By Public TV
2 hours ago
SRH Player Heinrich Klaasen Loses Cool
Cricket

ಇನ್ನೊಮ್ಮೆ ಈ ರೀತಿ ಮಾಡಿದ್ರೆ ನೀನು ನೆಲದ ಮೇಲೆ ಬೀಳಬೇಕಾಗುತ್ತೆ: ಅಭಿಮಾನಿ ವಿರುದ್ಧ ಕ್ಲಾಸೆನ್ ಕೆಂಡಾಮಂಡಲ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?