ಬೆಂಗಳೂರು: ನಾನು ಹುಟ್ಟು ಕನ್ನಡಿಗನಾಗಿದ್ದೇನೆ. ಇಲ್ಲೇ ಹುಟ್ಟಿದ್ದೇನೆ. ಇಲ್ಲೇ ಸಾಯುತ್ತೇನೆ ಎಂದು ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದ್ದಾರೆ.
ಸಿಎಎ ಮತ್ತು ಗುರುವಾರದ ಕರ್ನಾಟಕ ಬಂದ್‍ಗೆ ಭಾಸ್ಕರ್ ರಾವ್ ಅನುಮತಿ ನಿರಾಕರಿಸಿದರು. ಕೆಲ ಸಂಘಟನೆ ಮುಖ್ಯಸ್ಥರು ಪೊಲೀಸ್ ಕಮಿಷನರ್ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳುತ್ತಿದ್ದಾರೆ. ಅವರು ಆರ್‌ಎಸ್‌ಎಸ್ ಮತ್ತು ಬಿಜೆಪಿಗರಂತೆ ವರ್ತಿಸುತ್ತಿದ್ದಾರೆ. ಅವರು ಬಿಜೆಪಿ ಸೇರಿಕೊಳ್ಳಲಿ. ಭಾಸ್ಕರ್ ರಾವ್ ಕನ್ನಡ ವಿರೋಧಿ ಎಂದು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದರು.
Advertisement
Advertisement
ಈ ಬಗ್ಗೆ ಪ್ರತಿಕ್ರಿಯಿಸಿದ ಭಾಸ್ಕರ್ ರಾವ್, ನಾನು ಹುಟ್ಟು ಕನ್ನಡಿಗ, ಇಲ್ಲೇ ಹುಟ್ಟಿದ್ದೇನೆ ಇಲ್ಲೇ ಸಾಯುತ್ತೇನೆ. ಇಲ್ಲೇ ನೌಕರಿ ಕೂಡ ಮಾಡುತ್ತಿದ್ದೀನಿ. ಯಾರೋ ಕನ್ನಡ ಪರ ಸಂಘಟನೆ ಸದಸ್ಯರಿಂದ ಕಲಿಯುವ ಆಗತ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
Advertisement
ಅಲ್ಲದೆ ಕಾನೂನು ಇರೋದು ಜನರ ರಕ್ಷಣೆಗೆಗಾಗಿ, ನಾನಿರೋದು 1 ಕೋಟಿ 44 ಲಕ್ಷ ಜನ ಬೆಂಗಳೂರಿಗರ ರಕ್ಷಣೆಗೆಗಾಗಿ. ನಿಮ್ಮಿಂದ ನಾನು ಕನ್ನಡ ಕಲಿಯೋ ಆಗತ್ಯವಿಲ್ಲ ಎಂದು ಸಂಘಟನೆ ಮುಖ್ಯಸ್ಥರ ವಿರುದ್ಧ ಗರಂ ಆದರು.