ರಾಜಸ್ಥಾನ್ ರಾಯಲ್ಸ್‌ನ (Rajasthan Royals) ಅದ್ಭುತ ಆಟಗಾರ ವೈಭವ್ ಸೂರ್ಯವಂಶಿ ತಮ್ಮ 21ನೇ ವಯಸ್ಸಿನಲ್ಲೇ ನಿವೃತ್ತಿ ಆಗ್ತಾರೆ ಎಂದು ಇಂಗ್ಲೆಂಡ್ (England) ಮಾಜಿ ಕ್ರಿಕೆಟಿಗ ಮೈಕೆಲ್ ವಾಘನ್ (Michael Vaughan) ವ್ಯಂಗ್ಯವಾಡಿದ್ದಾರೆ.
ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ ಅವರು, ಐಪಿಎಲ್‌ನಲ್ಲಿ (IPL) ವೈಭವ್ ಸೂರ್ಯವಂಶಿ ಆಟ ನಿಜಕ್ಕೂ ಅದ್ಭುತವಾಗಿದೆ. ಕೇವಲ 15ನೇ ವಯಸ್ಸಿನಲ್ಲೇ ಕ್ರಿಕೆಟ್ ಜಗತ್ತೇ ತಮ್ಮತ್ತ ನೋಡುವಂತೆ ಮಾಡಿದ್ದಾರೆ. ತಮ್ಮ ಬ್ಯಾಟಿಂಗ್ ಪ್ರದರ್ಶನದಿಂದ ಜಸ್ಪ್ರೀತ್ ಬುಮ್ರಾ, ಪ್ಯಾಟ್ ಕಮ್ಮಿನ್ಸ್ ಮತ್ತು ಜೋಶ್ ಹ್ಯಾಜಲ್‌ವುಡ್‌ರಂತಹ ವೇಗದ ಬೌಲಿಂಗ್ ದಿಗ್ಗಜರನ್ನೇ ಬೆರಗಾಗುವಂತೆ ಮಾಡಿದ್ದಾರೆ. ವೈಭವ್ ಬೇಗ ಬರ್ನ್ ಔಟ್ ಆಗ್ತಾರೆ. ಆಗ ಅವರ ಬಳಿ ಸಾಕಷ್ಟು ಹಣವಿರುತ್ತೆ, ಅದಕ್ಕೆ ತಮ್ಮ 21ನೇ ವಯಸ್ಸಿನಲ್ಲಿ ನಿವೃತ್ತಿಯಾಗ್ತಾರೆ ಎಂದು ತಮಾಷೆಯಾಗಿ ಹೇಳಿದ್ದಾರೆ. ಇದನ್ನೂ ಓದಿ: IPL ಸ್ಟಾರ್ ಆಟಗಾರರ ಹನಿಟ್ರ್ಯಾಪ್‌ಗೆ ಸ್ಕೆಚ್ – BCCI ನಿಂದ ಹೋಟೆಲ್ ರೂಮ್‌ಗಳ ದಿಢೀರ್ ತಪಾಸಣೆ
“He’ll be burnt out by 21!” 😂
Is Vaibhav Sooryavanshi one of the best right now? 🇮🇳 pic.twitter.com/7XVY4o9ZrQ
— Stick to Cricket (@StickToCricket) May 6, 2026
ಐಪಿಎಲ್ ಇತಿಹಾಸದಲ್ಲಿ ಮೂರು ವೇಗದ ಶತಕಗಳ ಪೈಕಿ ಸೂರ್ಯವಂಶಿ 35 ಎಸೆತಗಳಲ್ಲಿ ಶತಕ ಬಾರಿಸಿ ಎರಡನೇ ಸ್ಥಾನದಲ್ಲಿದ್ದಾರೆ. ಇದೀಗ ಕ್ರಿಸ್ ಗೇಲ್ ದಾಖಲೆಯನ್ನು ಸಮೀಸುತ್ತಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದೇ ಸೀಸನ್‌ನಲ್ಲಿ ಹೆಚ್ಚಿನ ಸಿಕ್ಸ್ ಬಾರಿಸಿದ ಭಾರತೀಯ ಆಟಗಾರ ಎಂಬ ದಾಖಲೆ ಅಭಿಷೇಕ್ ಶರ್ಮಾ ಹೆಸರಲ್ಲಿದೆ. 3024ರ ಸೀಸನ್‌ನಲ್ಲಿ ಅಭಿಷೇಕ್ 42 ಸಿಕ್ಸರ್ ಬಾರಿಸಿದ್ದರು. ಇದೀಗ ವೈಭವ್ ಈ ಸೀಸನ್‌ನಲ್ಲಿ 37 ಸಿಕ್ಸ್ ಬಾರಿಸಿದ್ದಾರೆ. ಆತ ವಿಶ್ವದ ಅತ್ಯುತ್ತಮ ಸಿಕ್ಸರ್ ಹಿಟ್ಟರ್ ಎಂದಿದ್ದಾರೆ.

