Bengaluru CityDistrictsKarnatakaLatestLeading NewsMain Post

ಹುಬ್ಬಳ್ಳಿ ಗಲಭೆ ಪ್ರಕರಣದ ಮತ್ತೋರ್ವ ಮಾಸ್ಟರ್ ಮೈಂಡ್ ಬೆಂಗಳೂರಿನಲ್ಲಿ ಅರೆಸ್ಟ್

ಬೆಂಗಳೂರು: ಹುಬ್ಬಳ್ಳಿ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೋರ್ವ ಮಾಸ್ಟರ್ ಮೈಂಡ್ ಮೊಹಮ್ಮದ್ ಆರೀಫ್‍ನನ್ನು ಪೊಲೀಸರು ಬಂಧಿಸಿದ್ದಾರೆ.

ಹುಬ್ಬಳ್ಳಿ ಗಲಭೆ ನಂತರ ಕಳೆದ ಒಂದು ವಾರದಿಂದ ಮೊಹಮ್ಮದ್ ಆರೀಫ್ ನಾಪತ್ತೆಯಗಿದ್ದನು. ಗಲಭೆಗೆ ಕಾರಣರಾದವರು ಸೃಷ್ಟಿ ಮಾಡಿದ್ದ ವಾಟ್ಸಪ್ ಗ್ರೂಪ್‍ನಲ್ಲಿ ಕೆಲವೊಂದು ವಾಯ್ಸ್ ಮೆಸೇಜ್ ಮತ್ತು ಸಂದೇಶಗಳನ್ನು ಆಧಾರಿಸಿ ಇದೀಗ ಹುಬ್ಬಳ್ಳಿ ಪೊಲೀಸರು ಮೊಹಮ್ಮದ್ ಆರೀಫ್‍ನನ್ನು ಬಂಧಿಸಿದ್ದಾರೆ. ಇದನ್ನೂ ಓದಿ: ನಮ್ಮ ದೇಶ ಎತ್ತ ಸಾಗುತ್ತಿದೆ? ಇಲ್ಲಿ ಯಾವ ಅಪರಾಧ ನಡೆದಿದೆ – ಹಿಜಬ್‌ ಹೋರಾಟಗಾರ್ತಿ ಆಲಿಯಾ ಪ್ರಶ್ನೆ

ಇತ್ತೀಚೆಗಷ್ಟೇ ಅಜ್ಞಾತ ಸ್ಥಳದಿಂದ ಹುಬ್ಬಳ್ಳಿ ಗಲಭೆ ಪ್ರಕರಣದ ಮಾಸ್ಟರ್ ಮೈಂಡ್ ವಾಸೀಂ ಪಠಾಣ್ ವೀಡಿಯೋ ಮಾಡಿ, ಇಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ಪೊಲೀಸರ ಸೂಚನೆಯಂತೆ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಅವರ ಕೈಯಲ್ಲಿದ್ದ ಮೈಕ್ ತೆಗೆದುಕೊಂಡು ಮಾತನಾಡಿದೆ ಅಷ್ಟೇ. ಬಂದಿದ್ದ ಜನರನ್ನು ಕರೆದು ದೂರು ಕೊಡಲು ಅವರೇ ಹೇಳಿದ್ರು. ಯಾವಾಗ ಗಲಭೆಗೆ ತಿರುಗಿತ್ತೋ ಆಗ ನನಗೆ ಎಲ್ಲರನ್ನು ಸಮಾಧಾನ ಪಡಿಸಲು ಜೀಪ್ ಮೇಲೆ ಹತ್ತುವಂತೆ ಹೇಳಿದ್ದರು. ಅವರ ಸೂಚನೆಯಂತೆಯೇ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಮುಂದಾದೆ. ಪೊಲೀಸರ ಕೈಯಲ್ಲಿದ್ದ ಮೈಕ್ ಅನ್ನು ತೆಗೆದುಕೊಂಡು ಮಾತನಾಡಿದೆ. ಇದೇ ವೇಳೆ ಅಚಾನಕ್ಕಾಗಿ ಕರೆಂಟ್ ಕಟ್ ಆಯ್ತು. ನಾನೂ ಅಲ್ಲೇ ಇದ್ದರಿಂದ ನನ್ನ ಮೇಲೆ ಆರೋಪ ಬಂದಿದೆ ಎಂದು ತಿಳಿಸಿದ್ದನು. ಇದನ್ನೂ ಓದಿ: ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಆರೋಪಿ ಅರೆಸ್ಟ್

ಈ ವೀಡಿಯೋ ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಪೊಲೀಸರು ವಾಸೀಂ ಪಠಾಣ್‍ನನ್ನು ಬಂಧಿಸಿದ್ದರು. ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 126 ಜನರನ್ನು ಬಂಧಿಸಿದ್ದು, 12 ಮಂದಿಯ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ. ಇನ್ನೂ 20ಕ್ಕೂ ಹೆಚ್ಚು ಜನರ ವಿಚಾರಣೆ ನಡೆಯುತ್ತಿದೆ.

Leave a Reply

Your email address will not be published.

Back to top button