CrimeDharwadDistrictsKarnatakaLatestLeading NewsMain Post

ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಆರೋಪಿ ಅರೆಸ್ಟ್

ವೀಡಿಯೋ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಪೊಲೀಸರ ವಶಕ್ಕೆ

ಹುಬ್ಬಳ್ಳಿ: ಮಧ್ಯಾಹ್ನವಷ್ಟೇ ಅಜ್ಞಾತ ಸ್ಥಳದಿಂದ ವೀಡಿಯೋ ಮೂಲಕ ಪ್ರತ್ಯಕ್ಷವಾಗಿದ್ದ ಹುಬ್ಬಳ್ಳಿ ಗಲಭೆಯ ಮಾಸ್ಟರ್‌ಮೈಂಡ್ ಆರೋಪಿ ವಾಸಿಂ ಪಠಾಣ್, ವೀಡಿಯೋ ರಿಲೀಸ್ ಮಾಡಿದ ಕೆಲವೇ ಗಂಟೆಗಳಲ್ಲಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

HUBBALLI VASIM

ಗಲಭೆ ನಡೆದ ದಿನ ಪೊಲೀಸರ ಜತೆ ವಾಗ್ವಾದಕ್ಕಿಳಿದಿದ್ದ ಎಐಎಮ್‌ಐಎಮ್ ಮುಖಂಡ ಮಹಮ್ಮದ್ ಆರಿಫ್‌ನನ್ನು ಪೊಲೀಸರು ವಶಕ್ಕೆ ಪಡೆದ್ದರು. ಇಂದು ವಾಸಿಂ ವೀಡಿಯೋ ರಿಲೀಸ್ ಮಾಡುತ್ತಿದ್ದಂತೆ ಹುಬ್ಬಳ್ಳಿ ಕೇಶ್ವಾಪೂರ ಠಾಣೆ ಇನ್ಸ್ಪೆಕ್ಟರ್ ಜಗದೀಶ್ ಹಂಚಿನಾಳ ತಂಡವು ಕಾರ್ಯಾಚರಣೆ ನಡೆಸಿ ಮುಂಬೈನಲ್ಲಿ ಆರೋಪಿಯನ್ನು ಬಂಧಿಸಿ ಕರೆತರಲಾಗಿದೆ. ಇನ್ಸ್ಪೆಕ್ಟರ್ ಅಲ್ತಾಫ್ ಕೂಡಾ ತಂಡದಲ್ಲಿ ಇದ್ದರು. ಇದನ್ನೂ ಓದಿ: ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

ಹುಬ್ಬಳ್ಳಿ ಗಲಭೆ ವಿಚಾರಕ್ಕೆ ಸಂಬಂಧಿಸಿದಂತೆ ಈವರೆಗೆ ಒಟ್ಟು 126 ಜನರನ್ನು ಬಂಧಿಸಿದ್ದು, 12 ಮಂದಿಯ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನೂ 20ಕ್ಕೂ ಹೆಚ್ಚು ಜನರ ವಿಚಾರಣೆ ನಡೆಯುತ್ತಿದೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

HUBBALLI INCIDENT

ವೀಡಿಯೋನಲ್ಲಿ ವಾಸಿಂ ಹೇಳಿದ್ದೇನು?
ಇಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ಪೊಲೀಸರ ಸೂಚನೆಯಂತೆ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಅವರ ಕೈಯಲ್ಲಿದ್ದ ಮೈಕ್ ತೆಗೆದುಕೊಂಡು ಮಾತನಾಡಿದೆ ಅಷ್ಟೇ. ಬಂದಿದ್ದ ಜನರನ್ನು ಕರೆದು ದೂರು ಕೊಡಲು ಅವರೇ ಹೇಳಿದ್ರು. ಯಾವಾಗ ಗಲಭೆಗೆ ತಿರುಗಿತ್ತೋ ಆಗ ನನಗೆ ಎಲ್ಲರನ್ನು ಸಮಾಧಾನ ಪಡಿಸಲು ಜೀಪ್ ಮೇಲೆ ಹತ್ತುವಂತೆ ಹೇಳಿದ್ರು. ಅವರ ಸೂಚನೆಯಂತೆಯೇ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಮುಂದಾದೆ. ಪೊಲೀಸರ ಕೈಯಲ್ಲಿದ್ದ ಮೈಕ್ ಅನ್ನು ತೆಗೆದುಕೊಂಡು ಮಾತನಾಡಿದೆ. ಇದೇ ವೇಳೆ ಅಚಾನಕ್ಕಾಗಿ ಕರೆಂಟ್ ಕಟ್ ಆಯ್ತು. ನಾನೂ ಅಲ್ಲೇ ಇದ್ದರಿಂದ ನನ್ನ ಮೇಲೆ ಆರೋಪ ಬಂದಿದೆ. ಇದನ್ನೂ ಓದಿ: ಅಲ್ಪಸಂಖ್ಯಾತರು ಮುಗ್ಧ ಜನರು, ಅಮಾಯಕರು: ಆನಂದ್ ಸಿಂಗ್

HUBBALLI_ GALATE 1

ನಾನು ಜನರಿಗೆ ಸಮಾಧಾನ ಮಾಡಿದ ವೀಡಿಯೋ ಯಾವುದೂ ಜಾಲತಾಣದಲ್ಲಿ ಬಂದಿಲ್ಲ. ಅದು ಬಿಟ್ಟು ಬೇರೆ ಬೇರೆ ವೀಡಿಯೋ ಬಂದಿವೆ. ನನಗೆ ಪೊಲೀಸರ ಮೇಲೆ ಹಾಗೂ ಕಾನೂನಿನ ಮೇಲೆ ಭರವಸೆಯಿದೆ. ಆದಷ್ಟು ಬೇಗ ಪೊಲೀಸರ ಮುಂದೆ ಹಾಜರಾಗುತ್ತೇನೆ. ಜಮಾತ್ ಮುಂದೆ ಸಹ ನಿಲ್ಲುತ್ತೇನೆ ಎಂದು ವೀಡಿಯೋನಲ್ಲಿ ಹೇಳಿದ್ದರು.

Leave a Reply

Your email address will not be published.

Back to top button