CrimeDharwadDistrictsKarnatakaLatestLeading NewsMain Post

ಮಾಸ್ಟರ್ ಮೈಂಡ್ ನಾನಲ್ಲ, ಗಲಭೆಗೆ ನಾನು ಕಾರಣನಲ್ಲ – ಅಜ್ಞಾತ ಸ್ಥಳದಿಂದ ವೀಡಿಯೋ ಬಿಟ್ಟ ವಾಸಿಂ

ಹುಬ್ಬಳ್ಳಿ: ಇಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ಪೊಲೀಸರ ಸೂಚನೆಯಂತೆ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಅವರ ಕೈಯಲ್ಲಿದ್ದ ಮೈಕ್ ತೆಗೆದುಕೊಂಡು ಮಾತನಾಡಿದೆ ಅಷ್ಟೇ ಎಂದು ಹುಬ್ಬಳ್ಳಿ ಗಲಭೆ ಬಳಿಕ ನಾಪತ್ತೆಯಾಗಿರುವ ವಾಸಿಂ ಹೇಳಿದ್ದಾನೆ.

ಹುಬ್ಬಳ್ಳಿ ಗಲಭೆಯ ನಂತರ ಕಾಣೆಯಾಗಿದ್ದ ಮಾಸ್ಟರ್‌ಮೈಂಡ್ ವಾಸಿಂ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದ್ದು, ಅಜ್ಞಾತ ಸ್ಥಳದಿಂದ ವೀಡಿಯೋವೊಂದನ್ನು ಹರಿಯಬಿಟ್ಟಿದ್ದಾನೆ. ವೀಡಿಯೋದಲ್ಲಿ ಸುಮಾರು 4 ನಿಮಿಷಗಳ ಕಾಲ ಮಾತನಾಡಿದ್ದು, ಪೊಲೀಸರೇ ನನಗೆ ಫೋನ್ ಮಾಡಿ ಕರೆದು ಅಲ್ಲಿ ಮಾತನಾಡಲು ಹೇಳಿದ್ರು ಎಂದಿದ್ದಾನೆ. ಇದನ್ನೂ ಓದಿ: ಹುಬ್ಬಳ್ಳಿ ಗಲಭೆ – ಮಸೀದಿ ಮೇಲೆ `ಜೈಶ್ರೀರಾಮ್’ ಲೇಸರ್ ಲೈಟ್ ಹಾಕಿದ್ದ ಕಿಡಿಗೇಡಿಗಳು

HUBBALLI_ MOULVI 3

ಬಂದಿದ್ದ ಜನರನ್ನು ಕರೆದು ದೂರು ಕೊಡಲು ಅವರೇ ಹೇಳಿದ್ರು. ಯಾವಾಗ ಗಲಭೆಗೆ ತಿರುಗಿತ್ತೋ ಆಗ ನನಗೆ ಎಲ್ಲರನ್ನು ಸಮಾಧಾನ ಪಡಿಸಲು ಜೀಪ್ ಮೇಲೆ ಹತ್ತುವಂತೆ ಹೇಳಿದರು. ಅವರ ಸೂಚನೆಯಂತೆಯೇ ನಾನು ಉದ್ರಿಕ್ತರನ್ನು ಸಮಾಧಾನಪಡಿಸಲು ಮುಂದಾದೆ. ಪೊಲೀಸರ ಕೈಯಲ್ಲಿದ್ದ ಮೈಕ್ ಅನ್ನು ತೆಗೆದುಕೊಂಡು ಮಾತನಾಡಿದೆ. ಇದೇ ವೇಳೆ ಅಚಾನಕ್ಕಾಗಿ ಕರೆಂಟ್ ಕಟ್ ಆಯ್ತು. ನಾನೂ ಅಲ್ಲೇ ಇದ್ದರಿಂದ ನನ್ನ ಮೇಲೆ ಆರೋಪ ಬಂದಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅಲ್ಪಸಂಖ್ಯಾತರು ಮುಗ್ಧ ಜನರು, ಅಮಾಯಕರು: ಆನಂದ್ ಸಿಂಗ್

HUBBALLI INCIDENT

ನಾನು ಜನರಿಗೆ ಸಮಾಧಾನ ಮಾಡಿದ ವೀಡಿಯೋ ಯಾವುದೂ ಜಾಲತಾಣದಲ್ಲಿ ಬಂದಿಲ್ಲ. ಅದು ಬಿಟ್ಟು ಬೇರೆ ಬೇರೆ ವೀಡಿಯೋ ಬಂದಿವೆ. ನನಗೆ ಪೊಲೀಸರ ಮೇಲೆ ಹಾಗೂ ಕಾನೂನಿನ ಮೇಲೆ ಭರವಸೆಯಿದೆ. ಆದಷ್ಟು ಬೇಗ ಪೊಲೀಸರ ಮುಂದೆ ಹಾಜರಾಗುತ್ತೇನೆ. ಜಮಾತ್ ಮುಂದೆ ಸಹ ನಿಲ್ಲುತ್ತೇನೆ ಎಂದು ವೀಡಿಯೋನಲ್ಲಿ ಹೇಳಿಕೊಂಡಿದ್ದಾನೆ.

ಹುಬ್ಬಳ್ಳಿಯಲ್ಲಿನ ಗಲಭೆಗೆ ನಾನು ಮಾಸ್ಟರ್ ಮೈಂಡ್ ಅಲ್ಲ. ವಾಟ್ಸಪ್‌ನಲ್ಲಿ ಹಾಕಿದ್ದ ಸ್ಟೇಟಸ್ ಗಲಭೆಗೆ ಕಾರಣ. ನನ್ನ ಮೇಲಿನ ಆರೋಪಗಳಿಂದ ನನ್ನ ಕುಟುಂಬಕ್ಕೂ ನಾನು ಕೆಟ್ಟವನಾಗಿ ಕಾಣಿಸುತ್ತಿದ್ದೇನೆ. ನನ್ನ ಮಾತುಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದೀರಿ ಅಂದುಕೊಂಡಿದ್ದೇನೆ ಎಂದು ಮನವಿ ಮಾಡಿದ್ದಾನೆ.

Leave a Reply

Your email address will not be published.

Back to top button