ಶಿಮ್ಲಾ: ಹಿಮಾಚಲ ಪ್ರದೇಶದ ಸರ್ಕಾರವು ರಾಜ್ಯದಲ್ಲಿ ಸಾಮೂಹಿಕ ಮತಾಂತರವನ್ನು ನಿಷೇಧಿಸಿದ್ದು, ಬಲವಂತದಿಂದ ಮತಾಂತರ ಮಾಡುವವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದೆ.
ಪ್ರಸಕ್ತ ವರ್ಷದ ಅಂತ್ಯಕ್ಕೆ ಹಿಮಾಚಲ ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಗೂ ಮುನ್ನ ಸರ್ಕಾರ ಈ ಕಾನೂನು ಕ್ರಮವನ್ನು ಜರುಗಿಸಲಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ತಮಿಳುನಾಡು ಸಚಿವರ ಕಾರಿಗೆ ಚಪ್ಪಲಿ ಎಸೆತ – 5 ಬಿಜೆಪಿ ಕಾರ್ಯಕರ್ತರ ಬಂಧನ
Advertisement
Advertisement
ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರ ಹಿಮಾಚಲ ಪ್ರದೇಶ ವಿಧಾನಸಭೆಯಲ್ಲಿ ಮತಾಂತರ ನಿಷೇಧ ತಿದ್ದುಪಡಿ ವಿಧೇಯಕವನ್ನು ಮಂಡಿಸಲಾಯಿತು. ಇಲ್ಲಿ ಸಾಮೂಹಿಕ ಮತಾಂತರ ನಿಷೇಧಿಸುವ ಮಸೂದೆಯನ್ನು ಅಂಗೀಕರಿಸಿತು. ಅಲ್ಲದೇ 2019ರ ಕಾನೂನಿನ ಅನ್ವಯ ಯಾವುದೇ ಧರ್ಮಕ್ಕೆ ಮತಾಂತರ ಮಾಡುವವರಿಗೆ ಗರಿಷ್ಠ 10 ವರ್ಷಗಳ ಕಾಲ ಶಿಕ್ಷೆ ವಿಧಿಸುವುದಾಗಿ ನಿರ್ಧರಿಸಿತು. ಇದೇ ವೇಳೆ ಹಿಮಾಚಲ ಪ್ರದೇಶ ಧಾರ್ಮಿಕ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ-2022 ಅನ್ನು ಧ್ವನಿ ಮತದೊಂದಿಗೆ ಸರ್ವಾನುಮತದಿಂದ ಅಂಗೀಕರಿಲ್ಪಟ್ಟಿತು.
Advertisement
Advertisement
ಇತ್ತೀಚೆಗೆ ಇಬ್ಬರು ಅಥವಾ ಅದಕ್ಕಿಂತಲೂ ಹೆಚ್ಚಿನವರನ್ನು ಏಕಕಾಲದಲ್ಲಿ ಮತಾಂತರಗೊಳಿಸುತ್ತಿದ್ದಾರೆ. ಅದಕ್ಕಾಗಿ ಮತಾಂತರ ಶಿಕ್ಷೆಯ ಪ್ರಮಾಣವನ್ನು 7 ರಿಂದ 10 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ಮಸೂದೆಯಲ್ಲಿ ಸಭೆಯಲ್ಲಿ ಠಾಕೂರ್ ಉಲ್ಲೇಖಿಸಿದರು. ಇದನ್ನೂ ಓದಿ: ಒಡಿಶಾ ಸರ್ಕಾರದಿಂದ ನವ ವಿವಾಹಿತರಿಗೆ ಕಾಂಡೋಮ್, ಪ್ರೆಗ್ನೆನ್ಸಿ ಟೂಲ್ ಹೊಂದಿದ `ವೆಡ್ಡಿಂಗ್ ಕಿಟ್’ ಗಿಫ್ಟ್
ಜೈ ರಾಮ್ ಠಾಕೂರ್ ನೇತೃತ್ವದ ಸರ್ಕಾರವು ಶುಕ್ರವಾರ ಹಿಮಾಚಲ ಪ್ರದೇಶ ಧರ್ಮದ ಸ್ವಾತಂತ್ರ್ಯ (ತಿದ್ದುಪಡಿ) ಮಸೂದೆ, 2022 ಅನ್ನು ಪರಿಚಯಿಸಿತು. ಇದು 18 ತಿಂಗಳುಗಳ ಹಿಂದಷ್ಟೇ ಜಾರಿಗೆ ಬಂದ ಹಿಮಾಚಲ ಪ್ರದೇಶದ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆ -2019ರ ಹೆಚ್ಚು ಕಟ್ಟುನಿಟ್ಟಾದ ವಿಧೇಯಕವಾಗಿದೆ.
2019ರ ಮಸೂದೆಯನ್ನು ಡಿಸೆಂಬರ್ 21, 2020 ರಂದು ಅಂದರೆ ರಾಜ್ಯ ವಿಧಾನಸಭೆಯಲ್ಲಿ ಅಂಗೀಕರಿಸಲ್ಪಟ್ಟ 15 ತಿಂಗಳ ನಂತರ ಅಧಿಸೂಚನೆ ಹೊರಡಿಸಲಾಗಿತ್ತು. 2019ರ ಕಾಯ್ದೆಯು 2006ರ ಕಾನೂನನ್ನು ಬದಲಿಸಿದೆ. ಆದರೆ, ಈ ಕಾಯ್ದೆ ಕಡಿಮೆ ಶಿಕ್ಷೆಯನ್ನು ಸೂಚಿಸಿದೆ. ಇನ್ನೊಂದೆಡೆ, ಶುಕ್ರವಾರ ಮಂಡಿಸಲಾಗಿರುವ ತಿದ್ದುಪಡಿ ಮಸೂದೆಯು ಬಲವಂತದ ಮತಾಂತರದ ಶಿಕ್ಷೆಯನ್ನು ಗರಿಷ್ಠ 7 ವರ್ಷಗಳಿಂದ ಗರಿಷ್ಠ 10 ವರ್ಷಗಳಿಗೆ ಹೆಚ್ಚಿಸಲು ಪ್ರಸ್ತಾಪಿಸುತ್ತದೆ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ನಿಮ್ಮ ಸ್ಪೂರ್ತಿದಾಯಕ ಸಾಧನೆಯೊಂದಿಗೆ ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವಕ್ಕೆ ಕಾಲಿಡುತ್ತಿರುವುದು ವಿಶೇಷ: ಮೋದಿ
2019ರ ಕಾಯ್ದೆಯೂ ಸಾಮೂಹಿಕ ಮತಾಂತರವನ್ನು ತಡೆಯುವ ಅವಕಾಶಗಳನ್ನು ಹೊಂದಿಲ್ಲ. ಅದಕ್ಕಾಗಿ ಪರಿಣಾಮಕಾರಿ ನಿಬಂಧನೆಗಳನ್ನು ಮಾಡಲಾಗುತ್ತಿದೆ ಎಂದು ಅವರು ಪ್ರಸ್ತಾಪಿಸಿದರು.
ಬಿಜೆಪಿಯು ಮತಾಂತರ-ವಿರೋಧಿ ಕಾನೂನುಗಳ ಧ್ವನಿಯನ್ನು ಬೆಂಬಲಿಸುತ್ತಿದ್ದು, ಅನೇಕ ಪಕ್ಷ-ಆಡಳಿತ ರಾಜ್ಯಗಳು ಇದೇ ರೀತಿಯ ಕಾನೂನು ಕ್ರಮಗಳನ್ನು ಪರಿಚಯಿಸಿವೆ ಎಂದು ಹೇಳಲಾಗಿದೆ.