ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸೋಮವಾರ ಗುಡುಗು ಸಹಿತ ಭಾರಿ ಮಳೆ (Heavy Rain) ಹಾಗೂ ಬಿರುಗಾಳಿ ಬೀಸಿದ ಪರಿಣಾಮ ವಿಮಾನ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ. ದೆಹಲಿ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಾಗೂ ಅಲ್ಲಿಗೆ ಆಗಮಿಸಬೇಕಿದ್ದ ಹಲವು ವಿಮಾನಗಳು (Flights) ವಿಳಂಬಗೊಂಡಿದ್ದು, ಒಟ್ಟು 15 ವಿಮಾನಗಳ ಮಾರ್ಗ ಬದಲಾವಣೆಯಾಗಿದೆ.
ವಿಮಾನಗಳ ಪೈಕಿ ಮೂರು ಅಂತಾರಾಷ್ಟ್ರೀಯ ವಿಮಾನಗಳು ಸೇರಿವೆ. ಒಟ್ಟು 15 ವಿಮಾನಗಳಲ್ಲಿ 12 ವಿಮಾನಗಳನ್ನು ಜೈಪುರಕ್ಕೆ, ಎರಡು ವಿಮಾನಗಳನ್ನು ಚಂಡೀಗಢಕ್ಕೆ ಹಾಗೂ ಒಂದು ವಿಮಾನವನ್ನು ಲಕ್ನೋಗೆ ತಿರುಗಿಸಲಾಗಿದೆ. ಇದನ್ನೂ ಓದಿ: ಕಂಟ್ರಾಕ್ಟರ್ ಆಗಿ ಅದಾನಿ ಸಿಎಂ ಭೇಟಿಯಾಗಿದ್ದಾರೆ: ಪ್ರಿಯಾಂಕ್ ಖರ್ಗೆ
ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಭಾರಿ ಮಳೆಯಾಗಿದ್ದು, ವಿಶೇಷವಾಗಿ ದಕ್ಷಿಣ ದೆಹಲಿಯ ಹಲವು ಭಾಗಗಳಲ್ಲಿ ತೀವ್ರ ಮಳೆ ದಾಖಲಾಗಿದೆ. ಭಾರೀ ಮಳೆಯ ಪರಿಣಾಮ ಭಾರತೀಯ ಹವಾಮಾನ ಇಲಾಖೆ ಹಲವು ಪ್ರದೇಶಗಳಿಗೆ ಮಳೆ ಸಂಬಂಧಿತ ಎಚ್ಚರಿಕೆಗಳನ್ನು ನೀಡಿದೆ. ಇದನ್ನೂ ಓದಿ: 2026ರ ಮಿಸ್ ಯೂನಿವರ್ಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಕೇರಳದ ಕಾಜಿಯಾ
ವಿಮಾನ ಪ್ರಯಾಣಿಕರಿಗೆ ಎಚ್ಚರಿಕೆ:
ಹವಾಮಾನ ವೈಪರೀತ್ಯದಿಂದ ವಿಮಾನಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಸಾಧ್ಯತೆ ಇರುವುದರಿಂದ ಪ್ರಯಾಣಿಕರು ವಿಮಾನ ನಿಲ್ದಾಣಕ್ಕೆ ತೆರಳುವ ಮುನ್ನ ತಮ್ಮ ವಿಮಾನದ ಸ್ಥಿತಿಯನ್ನು ಪರಿಶೀಲಿಸುವಂತೆ ವಿಮಾನಯಾನ ಸಂಸ್ಥೆಗಳು ಮನವಿ ಮಾಡಿವೆ. ಇದನ್ನೂ ಓದಿ: ಗೊಲ್ಲ ನಿಗಮ ಸ್ಥಾಪನೆಗೆ ಸಿಎಂ ಜತೆ ಚರ್ಚೆ: ಶಿವರಾಜ್ ತಂಗಡಗಿ
ಏರ್ ಇಂಡಿಯಾ ತನ್ನ ಸಲಹೆಯಲ್ಲಿ ದೆಹಲಿಯಿಂದ ಹೊರಡುವ ಮತ್ತು ದೆಹಲಿಗೆ ಆಗಮಿಸುವ ವಿಮಾನಗಳ ಸಂಚಾರದ ಮೇಲೆ ಪ್ರತಿಕೂಲ ಹವಾಮಾನ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ತಿಳಿಸಿದೆ. ಇಂಡಿಗೋ ಕೂಡ ದೆಹಲಿಯ ಕೆಟ್ಟ ಹವಾಮಾನದಿಂದ ವಿಮಾನಗಳ ವೇಳಾಪಟ್ಟಿಗೆ ತೊಂದರೆಯಾಗಿದ್ದು, ಪರಿಸ್ಥಿತಿಯನ್ನು ನಿರಂತರವಾಗಿ ಗಮನಿಸಲಾಗುತ್ತಿದೆ ಎಂದು ತಿಳಿಸಿದೆ. ಸ್ಪೈಸ್‌ಜೆಟ್ ದೆಹಲಿಯ ಕೆಟ್ಟ ಹವಾಮಾನದಿಂದ ಆಗಮನ, ನಿರ್ಗಮನ ಮತ್ತು ಅವುಗಳಿಗೆ ಸಂಬಂಧಿಸಿದ ಮುಂದಿನ ವಿಮಾನಗಳ ಮೇಲೂ ಪರಿಣಾಮ ಬೀರಬಹುದು ಎಂದು ಪ್ರಯಾಣಿಕರಿಗೆ ಎಚ್ಚರಿಕೆ ನೀಡಿದೆ. ಆಕಾಸ ಏರ್ ಕೂಡ ದೆಹಲಿಯ ತೀವ್ರ ಹವಾಮಾನದಿಂದ ತನ್ನ ನೆಟ್‌ವರ್ಕ್‌ನ ಕೆಲವು ವಿಮಾನಗಳ ಮೇಲೆ ಪರಿಣಾಮ ಬೀರಿದೆ ಎಂದು ತಿಳಿಸಿದೆ. ಇದನ್ನೂ ಓದಿ: ಬ್ರಹ್ಮಾವರ | ಮಗನಿಂದಲೇ ತಂದೆ – ತಾಯಿಯ ಬರ್ಬರ ಹತ್ಯೆ
ದೆಹಲಿಯ ಹಲವು ಭಾಗಗಳಲ್ಲಿ ಭಾರಿ ಮಳೆ:
ದಕ್ಷಿಣ ಪೂರ್ವ ದೆಹಲಿ, ಪೂರ್ವ ದೆಹಲಿ, ಶಹದಾರಾ, ಮಧ್ಯ ದೆಹಲಿ, ಈಶಾನ್ಯ ದೆಹಲಿ, ದಕ್ಷಿಣ ದೆಹಲಿ, ನವದೆಹಲಿ, ನೈಋತ್ಯ ದೆಹಲಿ, ಪಶ್ಚಿಮ ದೆಹಲಿ, ವಾಯವ್ಯ ದೆಹಲಿ ಹಾಗೂ ಉತ್ತರ ದೆಹಲಿಯ ಕೆಲವು ಪ್ರದೇಶಗಳಲ್ಲಿ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಇದನ್ನೂ ಓದಿ: ನಾಗೇಂದ್ರ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲಿ: ಪ್ರಿಯಾಂಕ್ ಖರ್ಗೆ
ಗಂಟೆಗೆ 30ರಿಂದ 40 ಕಿಲೋಮೀಟರ್ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯನ್ನೂ ಹವಾಮಾನ ಇಲಾಖೆ ತಿಳಿಸಿದೆ. ಮಧ್ಯ ದೆಹಲಿ, ದಕ್ಷಿಣ ದೆಹಲಿ, ನೈಋತ್ಯ ದೆಹಲಿ, ಪಶ್ಚಿಮ ದೆಹಲಿ, ವಾಯವ್ಯ ದೆಹಲಿ ಹಾಗೂ ಉತ್ತರ ದೆಹಲಿಯ ಹಲವು ಪ್ರದೇಶಗಳಲ್ಲಿ ಸಾಧಾರಣ ಮಳೆಯೊಂದಿಗೆ ಗುಡುಗು-ಸಿಡಿಲು ಕಾಣಿಸಿಕೊಳ್ಳುವ ಸಾಧ್ಯತೆಯಿದೆ. ಇದನ್ನೂ ಓದಿ: ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್: ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು
ರಸ್ತೆಗಳಲ್ಲೂ ಟ್ರಾಫಿಕ್ ಜಾಮ್:
ಭಾರಿ ಮಳೆಯ ಪರಿಣಾಮ ದೆಹಲಿಯ ಹಲವು ರಸ್ತೆಗಳಲ್ಲೂ ಸಂಚಾರ ಅಸ್ತವ್ಯಸ್ತಗೊಂಡಿದೆ. ಘಾಜಿಯಾಬಾದ್ ಸೇರಿದಂತೆ ಹಲವೆಡೆ ಮಳೆಯ ನಂತರ ವಾತಾವರಣ ತಂಪಾಗಿ ಆಹ್ಲಾದಕರವಾಗಿದ್ದರೂ, ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು. ಇದನ್ನೂ ಓದಿ: ಕೇಂದ್ರ ಸಚಿವರ ಬಂಗಲೆಗಳ ದುರಸ್ತಿಗೆ 11 ವರ್ಷಕ್ಕೆ 547.68 ಕೋಟಿ ಹಣ ವ್ಯಯ
ದೆಹಲಿಯಿಂದ ನೋಯ್ಡಾಗೆ ಕೆಲಸಕ್ಕೆ ತೆರಳುತ್ತಿದ್ದ ಅನೇಕ ಉದ್ಯೋಗಿಗಳು ಭಾರಿ ಟ್ರಾಫಿಕ್‌ನಿಂದಾಗಿ ದೀರ್ಘಕಾಲ ರಸ್ತೆಗಳಲ್ಲಿ ಸಿಲುಕಿಕೊಂಡರು. ಸಾಮಾನ್ಯವಾಗಿ ತೆಗೆದುಕೊಳ್ಳುವ ಪ್ರಯಾಣದ ಸಮಯ ಬಹುತೇಕ ದ್ವಿಗುಣವಾಗಿದ್ದು, ಕೆಲವರು ಒಂದೂವರೆ ಗಂಟೆಯವರೆಗೆ ಪ್ರಯಾಣಿಸಬೇಕಾಯಿತು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಯಾವಾಗ ಬರ್ತಾರೆ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ
ಮಳೆಯಿಂದ ವಾಯು ಗುಣಮಟ್ಟದಲ್ಲೂ ಸುಧಾರಣೆ:
ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ದೆಹಲಿಯ ವಾಯು ಗುಣಮಟ್ಟದಲ್ಲೂ ಸುಧಾರಣೆ ಕಂಡುಬಂದಿದೆ. ವಿವಿಧ ಮೇಲ್ವಿಚಾರಣಾ ಕೇಂದ್ರಗಳ ಮಾಹಿತಿಯ ಪ್ರಕಾರ, ಅಶೋಕ್ ವಿಹಾರ್‌ನಲ್ಲಿ ಎಕ್ಯೂಐ 97, ಅಯಾನಗರದಲ್ಲಿ 100, ಬವಾನಾದಲ್ಲಿ 127, ಕಂಟೋನ್ಮೆಂಟ್ ಪ್ರದೇಶದಲ್ಲಿ 102, ಚಾಂದಿನಿ ಚೌಕ್‌ನಲ್ಲಿ 109 ಎಕ್ಯೂಐ ದಾಖಲಾಗಿದೆ. ಇದನ್ನೂ ಓದಿ: H1N1 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯ ಇಲಾಖೆ ಹೈ ಅಲರ್ಟ್, ಆಸ್ಪತ್ರೆಗಳು ಸಂಪೂರ್ಣ ಸನ್ನದ್ಧ
ಮುಂದಿನ ಎರಡು ದಿನಗಳಲ್ಲೂ ದೆಹಲಿ-ಎನ್‌ಸಿಆರ್ ಪ್ರದೇಶದ ಕೆಲವು ಭಾಗಗಳಲ್ಲಿ ಇದೇ ರೀತಿಯ ಚದುರಿದ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ. ಇದನ್ನೂ ಓದಿ: ಡಿಕೆಶಿ – ಅದಾನಿ ಭೇಟಿ| ನಮ್ಮ ಹೋರಾಟ ಏಕಸ್ವಾಮ್ಯದ ವಿರುದ್ಧವೇ ಹೊರತು ಉದ್ಯಮಿಗಳ ವಿರುದ್ಧವಲ್ಲ: ಪವನ್ ಖೇರಾ
