– ಚುನಾವಣಾ ಆಯೋಗಕ್ಕೆ ಕರ್ನಾಟಕವೇ ಟಾರ್ಗೆಟ್
ಬೆಂಗಳೂರು: ಸಚಿವ ನಾಗೇಂದ್ರ (B Nagendra) ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಲಿ. ಅದರ ಜೊತೆ ಅವರ ಮುಂದೆ ಇರೋ ರಾಜಕಾರಣಿಗಳ ಕೇಸ್‌ಗಳನ್ನೂ ಸಿಬಿಐಗೆ (CBI) ಕೊಡಲಿ ಅಂತ ಸಚಿವ ಪ್ರಿಯಾಂಕ್ ಖರ್ಗೆ (Priyank Kharge) ತಿಳಿಸಿದ್ದಾರೆ.
ನಾಗೇಂದ್ರ ರಾಜೀನಾಮೆಗಾಗಿ ಬಿಜೆಪಿ ಪ್ರತಿಭಟನೆ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಸರ್ಕಾರವಾಗಿ ನಾವು ಏನು ಮಾಡಬೇಕು? ನಾಗೇಂದ್ರ ಅವರೇನು ಅಪರಾಧಿ ಆಗಿದ್ದಾರಾ? ಸಿಐಡಿ, ಎಸ್‌ಐಟಿಯಲ್ಲಿ ಅವರ ಹೆಸರು ಇದೆಯಾ? ಸಿಬಿಐ ಸೆಕೆಂಡ್ ಚಾರ್ಜ್‌ಶೀಟ್‌ನಲ್ಲಿ ಅವರ ಹೆಸರು ಬಂದಿದೆ. ಅದು ಹೇಗೆ ಬಂದಿದೆ ಅಂತ ಎಲ್ಲರಿಗೂ ಗೊತ್ತಿದೆ. ನಾಗೇಂದ್ರ ಅವರೇ ಪ್ರೆಸ್‌ಮೀಟ್ ಮಾಡಿ ಎಲ್ಲಾ ಹೇಳಿದ್ದಾರೆ. ಸದನದಲ್ಲಿ ನೋಟಿಸ್ ಕೊಟ್ಟು ಚರ್ಚೆ ಮಾಡಿ ಅಂದರು ಅವರು ಮಾಡ್ತಾ ಇಲ್ಲ. ಸರ್ಕಾರ ಸ್ಟೇಟ್‌ಮೆಂಟ್ ಕೊಟ್ಟರು ಒಪ್ಪಲಿಲ್ಲ. ನಮ್ಮ ಬಳಿ ಸಾಕ್ಷಿ ಇದೆ ಅಂತ ಹೇಳಿದ್ರೆ ನೋಡಬಹುದು. ಸುಮ್ಮನೇ ಪ್ರತಿಭಟನೆ ಮಾಡಿ, ಕಪ್ಪು ಬಾವುಟ, ಕಪ್ಪು ಶರ್ಟ್ ಹಾಕಿಕೊಂಡು ಬಂದರೆ ಅಷ್ಟೇನಾ? ಅಂತ ಕಿಡಿಕಾರಿದರು. ಇದನ್ನೂ ಓದಿ: ಜೇಬಿನಲ್ಲಿದ್ದ ಪವರ್ ಬ್ಯಾಂಕ್ ಬ್ಲಾಸ್ಟ್: ಯುವಕನಿಗೆ ಗಾಯ, ಆಸ್ಪತ್ರೆಗೆ ದಾಖಲು
ನಾಗೇಂದ್ರ ವಿರುದ್ಧ ತನಿಖೆಗೆ ರಾಜ್ಯಪಾಲರು ಅನುಮತಿ ಕೊಡಲಿ. ಅವರು ಕೋರ್ಟ್‌ಗೆ ಹೋಗಿ ಏನು ಮಾಡಬೇಕೋ ಮಾಡುತ್ತಾರೆ. ಸಿಬಿಐ ಜಾರ್ಜ್ ಶೀಟ್ ಅವರು, ನಾವು, ರಾಜ್ಯಪಾಲರು ನೋಡಿಲ್ಲ. ಅದರಲ್ಲಿ ಏನಿದೆ ಗೊತ್ತಿಲ್ಲ. ರಾಜ್ಯಪಾಲರಿಗೆ ಮನವಿ ಮಾಡ್ತೀನಿ ಇಂತಹ ಹಲವಾರು ಪ್ರಕರಣ ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರ ಮುಂದೆ ಇದೆ. ಅದಕ್ಕೂ ಅನುಮತಿ ಕೊಟ್ಟು ಬಿಡಿ. ಎಲ್ಲಾ ರಾಜಕಾರಣಿ ಕೇಸ್ ಅವರ ಕಚೇರಿಯಲ್ಲಿ ಬಿದ್ದಿದೆ. ಅದಕ್ಕೂ ಅನುಮತಿ ಕೊಡಲಿ ಎಂದು ಆಗ್ರಹಿಸಿದರು. ಇದನ್ನೂ ಓದಿ: ಕೇಂದ್ರ ಸಚಿವರ ಬಂಗಲೆಗಳ ದುರಸ್ತಿಗೆ 11 ವರ್ಷಕ್ಕೆ 547.68 ಕೋಟಿ ಹಣ ವ್ಯಯ
ಚುನಾವಣಾ ಆಯೋಗದಿಂದ ಎಸ್‌ಐಆರ್ ಕರಡು ಪ್ರಕಟ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಪಶ್ಚಿಮ ಬಂಗಾಳದಂತೆ ಚುನಾವಣಾ ಆಯೋಗಕ್ಕೆ ಕರ್ನಾಟಕ ಟಾರ್ಗೆಟ್ ಆಗಿದೆ. ನಾವು ಹಲವಾರು ಬಾರಿ ಮನವಿ ಮಾಡಿ, ಪತ್ರ ಬರೆದಿದ್ದೇವೆ. ಯಾವುದಕ್ಕೂ ಆಯೋಗ ಉತ್ತರ ಕೊಡುತ್ತಿಲ್ಲ. ಈ ರೀತಿ ಎಸ್‌ಐಆರ್ ಮಾಡೋದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ. 1.10 ಕೋಟಿ ಮತದಾರನ್ನ ಕಾರಣ ಕೊಡದೇ ಹೊರಗೆ ಇಡುತ್ತಿದ್ದಾರೆ. ಪ್ರಕ್ರಿಯೆಗಳನ್ನ ಜಟಿಲ ಮಾಡಿದ್ದಾರೆ, ಸರಳೀಕರಣ ಇಲ್ಲ. ಸಬಲೀಕರಣವೂ ಆಗಿಲ್ಲ ಎಸ್‌ಐಆರ್‌ನಿಂದ ಎಂದು ಕಿಡಿಕಾರಿದರು. ಇದನ್ನೂ ಓದಿ: IAS ಅಧಿಕಾರಿ ಗ್ಯಾನೇಂದ್ರ ಕುಮಾರ್ ಯಾವಾಗ ಬರ್ತಾರೆ ಗೊತ್ತಿಲ್ಲ: ಪ್ರಿಯಾಂಕ್ ಖರ್ಗೆ
ಏನಾಗಿದೆ ಅಂತ ಯಾರಿಗೂ ಗೊತ್ತಿಲ್ಲ. ಸಾಕಷ್ಟು ಜನರಿಗೆ ಇದರಿಂದ ಅನಾನುಕೂಲವಾಗಿದೆ. ವಲಸೆ ಹೋಗಿರೋರಿಗೆ, ತಿಳುವಳಿಕೆ ಇಲ್ಲದೇ ಇರೋರಿಗೆ ಸಮಸ್ಯೆ ಆಗಿದೆ. ನಾವು ಜಾಹೀರಾತು ಕೊಡುತ್ತಿದ್ದೇವೆ. ಡಿಸಿ, ತಹಶೀಲ್ದಾರ್ ಜೊತೆ ಸಿಎಂ ಸಭೆ ಮಾಡಿದ್ದಾರೆ. ಚುನಾವಣಾ ಆಯೋಗ ಸರ್ವಾಧಿಕಾರಿ ಧೋರಣೆ ಮಾಡುತ್ತಿದೆ ಎಂದು ಹರಿಹಾಯ್ದರು. ಇದನ್ನೂ ಓದಿ: H1N1 ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ: ಆರೋಗ್ಯ ಇಲಾಖೆ ಹೈ ಅಲರ್ಟ್, ಆಸ್ಪತ್ರೆಗಳು ಸಂಪೂರ್ಣ ಸನ್ನದ್ಧ
ನಮ್ಮ ರಾಜ್ಯವೇ ಚುನಾವಣಾ ಆಯೋಗಕ್ಕೆ ಟಾರ್ಗೆಟ್. ಪಶ್ಚಿಮ ಬಂಗಾಳದಲ್ಲಿ ಮಾಡಿದ ಹಾಗೆ ಮಾಡುತ್ತಿದ್ದಾರೆ. ಮಹಾರಾಷ್ಟ್ರ, ಗುಜರಾತ್, ಮಧ್ಯ ಪ್ರದೇಶದಲ್ಲಿ ಈ ವಿಷಯ ಇದೆಯಾ? ವಿರೋಧ ಪಕ್ಷ ಇರೋ ಕಡೆ ಟಾರ್ಗೆಟ್ ಮಾಡುತ್ತಿದ್ದಾರೆ. ಕೇಂದ್ರ ಮುಖ್ಯ ಚುನಾವಣೆ ಆಯುಕ್ತರಿಗೆ ನ್ಯಾಯಾಂಗದ ಪವರ್ ಕೂಡ ಇದೆ. ಅವರಂತೂ ದೇವರು ಆಗಿದ್ದಾರೆ. ಅವರು ಮಾಡಿದ್ದೆಲ್ಲಾ ಒಪ್ಪಿಕೊಳ್ಳಬೇಕು ಎಂದು ಆಯೋಗದ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಡಿಕೆಶಿ – ಅದಾನಿ ಭೇಟಿ| ನಮ್ಮ ಹೋರಾಟ ಏಕಸ್ವಾಮ್ಯದ ವಿರುದ್ಧವೇ ಹೊರತು ಉದ್ಯಮಿಗಳ ವಿರುದ್ಧವಲ್ಲ: ಪವನ್ ಖೇರಾ

