– SIRಗೆ ನೇಮಕಗೊಂಡಿದ್ದ ಶಿಕ್ಷಕ
ಬೆಂಗಳೂರು: ಜಿಬಿಎ (GBA) ನಿರ್ಲಕ್ಷ್ಯಕ್ಕೆ ನಗರದ ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ (Attiguppe Metro Station) ಬಳಿ ಮರದ ಒಣಗಿದ ಕೊಂಬೆ ಬಿದ್ದು ಹೆಡ್‌ಮಾಸ್ಟರ್ ಸ್ಥಿತಿ ಗಂಭೀರವಾಗಿದೆ.
ಗಂಭೀರವಾಗಿ ಗಾಯಗೊಂಡವರನ್ನು ಬಾಲಾಜಿ ಎಂದು ಗುರುತಿಸಲಾಗಿದ್ದು, ರಾಮನಗರದಲ್ಲಿ ಹೆಡ್‌ಮಾಸ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಇದನ್ನೂ ಓದಿ: Cap 278 Signing Off| ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಅಜಿಂಕ್ಯ ರಹಾನೆ ನಿವೃತ್ತಿ
ಬೈಕ್ ಮೇಲೆ ಹೊರಟಿದ್ದ ಬಾಲಾಜಿ ಅವರು ಅತ್ತಿಗುಪ್ಪೆ ಮೆಟ್ರೋ ಸ್ಟೇಷನ್ ಬಳಿ ಬೈಕ್ ನಿಲ್ಲಿಸಿ ಓರ್ವ ಮಹಿಳೆ ಜೊತೆಗೆ ಮಾತನಾಡುತ್ತಾ ನಿಂತಿದ್ದರು. ಈ ವೇಳೆ ಏಕಾಏಕಿ ಒಣಗಿದ ಮರದ ಕೊಂಬೆ ಬಿದ್ದಿದ್ದು, ಬಾಲಾಜಿ ಅವರಿಗೆ ಬೆನ್ನು ಹುರಿ ಹಾಗೂ ತಲೆಗೆ ಗಂಭೀರವಾಗಿ ಗಾಯವಾಗಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ತೀವ್ರ ನಿಗಾ ಘಟಕದಲ್ಲಿದ್ದಾರೆ.
ಈ ಕುರಿತು ಗಾಯಾಳು ಶಿಕ್ಷಕನ ಸಹೋದರ ಮಾತನಾಡಿ, ನಿನ್ನೆ ದಾರಿಯಲ್ಲಿ ಸ್ಟೂಡೆಂಟ್ ಸಿಕ್ಕಿದ್ರು ಅಂತಾ ಗಾಡಿ ಸೈಡ್‌ಗೆ ಹಾಕಿ ಮಾತನಾಡಿದ್ದಾರೆ. ಈ ವೇಳೆ ಅನಾಹುತ ಸಂಭವಿಸಿದೆ. ಸೊಂಟದ ಕೆಳಭಾಗದಿಂದ ಕಾಲಿನವರೆಗೆ ನಿಸ್ತೇಜ ಸ್ಥಿತಿಯಲ್ಲಿದ್ದಾರೆ. ಗಂಭೀರವಾಗಿ ಬೆನ್ನಿನ ಹುರಿಗೆ ಏಟು ಬಿದ್ದಿದೆ ಎಂದು ತಿಳಿಸಿದ್ದಾರೆ.
ಘಟನೆಗೂ ಮುನ್ನ ಸ್ಥಳೀಯರು ಹಲವು ಬಾರಿ ಜಿಬಿಎಗೆ ದೂರು ನೀಡಿದ್ದರೂ ಕೂಡ ತೆರವುಗೊಳಿಸದೇ ನಿರ್ಲಕ್ಷö್ಯವಹಿಸಿದೆ.ಇದನ್ನೂ ಓದಿ: ಶಾಲೆಗೆ ತೆರಳುವಾಗ ಥಾರ್ ಡಿಕ್ಕಿ – 10 ವರ್ಷದ ಬಾಲಕಿ ಸ್ಥಳದಲ್ಲೇ ಸಾವು
