– ಎಣ್ಣೆ ಏಟಲ್ಲಿ ಬೆದರಿಕೆ ಹಾಕಿದ್ದೆ ಅಂತ ಆರೋಪಿ ತಪ್ಪೊಪ್ಪಿಗೆ
ಹರಿದ್ವಾರ: ಉತ್ತರಾಖಂಡದ ಪವಿತ್ರ ನಗರ ಹರಿದ್ವಾರದಲ್ಲಿ (Haridwar) ಇಂದು ಭಯದ ವಾತಾವರಣ ಸೃಷ್ಟಿಯಾಗಿತ್ತು. ಹರ್ ಕಿ ಪೌರಿ ಘಾಟ್‌ಗೆ (Har Ki Pauri Ghat) ಬಾಂಬ್ ಸ್ಫೋಟಿಸುವುದಾಗಿ ದೂರವಾಣಿ ಬೆದರಿಕೆ ಬಂದಿದೆ. ಕರೆ ಬೆನ್ನಲ್ಲೇ ಕಾರ್ಯಪ್ರವೃತ್ತರಾದ ಪೊಲೀಸರು ಬೆದರಿಕೆ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆಹಚ್ಚಿ ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಮದ್ಯಪಾನ ಮಾಡಿದ್ದ ಯುವಕ 112 ತುರ್ತು ಸಂಖ್ಯೆಗೆ ಕರೆ ಮಾಡಿ, ಹರ್ ಕಿ ಪೌರಿ ಸೇರಿದಂತೆ ಇತರ ಸ್ಥಳಗಳಲ್ಲಿ ನಾಲ್ಕು ದಿನಗಳೊಳಗೆ ಬಾಂಬ್ ಸ್ಫೋಟಿಸುವುದಾಗಿ ಬೆದರಿಕೆ ಹಾಕಿದ್ದ. ಈ ಕರೆಯಿಂದಾಗಿ ಪೊಲೀಸ್ ಇಲಾಖೆಯಲ್ಲಿ ಭಾರಿ ಗೊಂದಲ ಉಂಟಾಗಿತ್ತು. ತಕ್ಷಣವೇ ತಂಡಗಳನ್ನು ರಚಿಸಿ ಆರೋಪಿಯ ಪತ್ತೆ ಆರಂಭಿಸಲಾಯಿತು. ಇದನ್ನೂ ಓದಿ: ಹೊಸ ಮದ್ಯ ನೀತಿಯಲ್ಲಿ ಅಕ್ರಮ ಕೇಸ್ – ಸಿಬಿಐ ಅರ್ಜಿ ವಿಚಾರಣೆ ನಡೆಸಲಿರುವ ನ್ಯಾ. ಮನೋಜ್ ಜೈನ್
ಕರೆ ಮಾಡಿದ ಫೋನ್ ಸಂಖ್ಯೆ ಮತ್ತು ಸ್ಥಳವನ್ನು ಟ್ರೇಸ್ ಮಾಡಿದ ಪೊಲೀಸರು, ಪೌರಿ ಜಿಲ್ಲೆಯ ಯಮ್‌ಕೇಶ್ವರ್ ನಿವಾಸಿ 30 ವರ್ಷದ ಸೋಹನ್ ಸಿಂಗ್ ರಾವತ್ ಎಂಬಾತನನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆತ ಮದ್ಯಪಾನದ ಸ್ಥಿತಿಯಲ್ಲಿ ಬೆದರಿಕೆ ಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಹರಿದ್ವಾರ ನಗರ ಕೋತ್ವಾಲಿಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಹರಿದ್ವಾರದ ಅತ್ಯಂತ ಪ್ರಸಿದ್ಧ ಮತ್ತು ಪವಿತ್ರ ಘಾಟ್ ಎಂದು ಹೆಸರಾದ ಹರ್ ಕಿ ಪೌರಿ ಲಕ್ಷಾಂತರ ಭಕ್ತರು ಪ್ರತಿದಿನ ಪುಣ್ಯಸ್ನಾನ ಮಾಡುವ ಸ್ಥಳ. ಇಲ್ಲಿ ವಿಷ್ಣು ದೇವರ ಜೊತೆಗೆ ಸಂಬಂಧವಿದೆ ಎಂದು ನಂಬಿಕೆ. ಇಲ್ಲಿ ನಿತ್ಯ ಸಂಜೆ ಗಂಗಾ ಆರತಿ ನಡೆಯುತ್ತದೆ. ಪ್ರತಿ 12 ವರ್ಷಕ್ಕೊಮ್ಮೆ ಕುಂಭಮೇಳ ಮತ್ತು 6 ವರ್ಷಕ್ಕೊಮ್ಮೆ ಅರ್ಧ ಕುಂಭಮೇಳ ನಡೆಯುವುದರಿಂದ ಇದು ಆಧ್ಯಾತ್ಮಿಕ ಕೇಂದ್ರವಾಗಿದೆ. ಇದನ್ನೂ ಓದಿ: ಸ್ಕಾರ್ಪಿಯೋ, 1 ಕೋಟಿ ಮೌಲ್ಯದ ಚಿನ್ನ ಕೊಟ್ಟರು ತೀರದ ವರದಕ್ಷಿಣೆ ದಾಹ – ಪತಿಯ ಕಿರುಕುಳಕ್ಕೆ ಕಟ್ಟಡದಿಂದ ಜಿಗಿದು ಪ್ರಾಣಬಿಟ್ಟ ಮಹಿಳೆ

