– ಪ್ರಕರಣದಿಂದ ಹಿಂದೆ ಸರಿದ ನ್ಯಾ.ಸ್ವರ್ಣ ಕಾಂತಾ ಶರ್ಮಾ
ನವದೆಹಲಿ: ಹೊಸ ಮದ್ಯ ನೀತಿಯಲ್ಲಿ ಅಕ್ರಮ ಪ್ರಕರಣಕ್ಕೆ (Delhi Liquor Policy Case) ಸಂಬಂಧಿಸಿದಂತೆ ದೆಹಲಿ ಹೈಕೋರ್ಟ್‌ನಲ್ಲಿ ಸಿಬಿಐ ಸಲ್ಲಿಸಿದ ಅರ್ಜಿಯನ್ನ ನ್ಯಾಯಮೂರ್ತಿ ಮನೋಜ್ ಜೈನ್ (Manoj Jain) ಅವರು ವಿಚಾರಣೆ ನಡೆಸಲಿದ್ದಾರೆ. ಈ ಹಿಂದೆ ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಪ್ರಕರಣದ ವಿಚಾರಣೆ ನಡೆಸುತ್ತಿದ್ದರು, ಇದನ್ನು ಕೇಜ್ರಿವಾಲ್ (Arvind Kejriwal) ವಿರೋಧಿಸಿದ್ದರು.
ನ್ಯಾಯಮೂರ್ತಿ ಸ್ವರ್ಣ ಕಾಂತಾ ಶರ್ಮಾ ಅವರು ಪ್ರಕರಣದಿಂದ ಹಿಂದೆ ಸರಿದ ಹಿನ್ನೆಲೆ ನ್ಯಾಯಮೂರ್ತಿ ಮನೋಜ್ ಜೈನ್ ಅವರು ವಿಚಾರಣೆ ನಡೆಸಲಿದ್ದಾರೆ. ಇದನ್ನೂ ಓದಿ: ವಿಜಯ್ ನೇತೃತ್ವದ ಟಿವಿಕೆ ಸರ್ಕಾರ 6 ತಿಂಗಳು ಸಹ ಉಳಿಯಲ್ಲ: ಡಿಎಂಕೆ ನಾಯಕ ಭವಿಷ್ಯ
ಮಾಜಿ ಸಿಎಂ ಕೇಜ್ರಿವಾಲ್ ಸೇರಿದಂತೆ ಇತರೆ ಆರೋಪಿಗಳ ಮೇಲೆ ಹೊರಿಸಲಾದ ಆರೋಪಗಳನ್ನು ವಿಚಾರಣಾಧೀನ ನ್ಯಾಯಾಲಯ ತಿರಸ್ಕರಿಸಿ ಪ್ರಕರಣ ರದ್ದುಗೊಳಿಸಿತ್ತು. ಈ ಆದೇಶವನ್ನು ಸಿಬಿಐ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದೆ.
ಈ ಅರ್ಜಿಯ ವಿಚಾರಣೆಯನ್ನು ನಾಳೆ ನಡೆಸಲು ನಿಗದಿಪಡಿಸಲಾಗಿದೆ. ಈ ಹಿಂದೆ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಅಡಿಷನಲ್ ಸಾಲಿಸಿಟರ್ ಜನರಲ್ ಎಸ್.ವಿ.ರಾಜು ಅವರು ಕೋರ್ಟ್‌ನಲ್ಲಿ ವಾದಿಸಿದ್ದರು. ಆಮ್ ಆದ್ಮಿ ಪಾರ್ಟಿ ಈ ಬದಲಾವಣೆಯನ್ನು ತನ್ನ ಕಾನೂನು ವಿಜಯ ಎಂದು ಬಣ್ಣಿಸಿದೆ. ಕೇಜ್ರಿವಾಲ್ ಅವರು ಸತ್ಯ ವಿಜಯವಾಗಿದೆ ಎಂದು ಹೇಳಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದ ಬೇರೆ ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ನ್ಯಾಯಮೂರ್ತಿ ನವೀನ್ ಚಾವ್ಲಾ ಮತ್ತು ನ್ಯಾಯಮೂರ್ತಿ ರವೀಂದರ್ ದುದೇಜಾ ಅವರ ವಿಭಾಗೀಯ ಬೆಂಚ್‌ಗೆ ವರ್ಗಾಯಿಸಲಾಗಿದೆ. ಇದನ್ನೂ ಓದಿ: ಕೇರಳ ಸಿಎಂ ಆಗಿ ವಿ.ಡಿ ಸತೀಶನ್, 20 ಸಂಪುಟ ಸಚಿವರಿಂದ ಇಂದು ಪ್ರಮಾಣ ಸ್ವೀಕಾರ

