CrimeLatestMain PostNational

ಪ್ರೇಯಸಿಯ ಪತಿಯನ್ನು ಕೊಂದು ದೇಹವನ್ನು ಛಿದ್ರಗೊಳಿಸಿದ- ಸಿನಿಮಾ ಸ್ಟೈಲ್‌ನಂತೆ ಶವ ಎಸೆದ

ಹೈದರಾಬಾದ್: ಪ್ರೇಯಸಿಯ ಗಂಡನನ್ನು ಕೊಂದು, ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವವನ್ನು ಕತ್ತರಿಸಿ ಬಿಸಾಡಿದ ಘಟನೆ ಹೈದರಾಬಾದ್‍ನಲ್ಲಿ ನಡೆದಿದೆ.

ಕೊಲೆ ಮಾಡಿದ ಆರೋಪಿಯನ್ನು ಪಿ. ರಾಜು ಎಂದು ಗುರುತಿಸಲಾಗಿದೆ. ರಾಮಗುಂಡಂನ ಎನ್‍ಟಿಪಿಸಿ ಆಸ್ಪತ್ರೆಯೊಂದರಲ್ಲಿ ಸ್ವೀಪರ್ ಆಗಿದ್ದ ರಾಜು ಅದೇ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ 31 ವರ್ಷದ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ. ಆ ಮಹಿಳೆಯ ಗಂಡ ಶಂಕರ್‌ಗೆ ಈ ವಿಷಯ ಗೊತ್ತಾಗಿದ್ದರಿಂದ ತನ್ನ ಹೆಂಡತಿ ತನಗೆ ಮೋಸ ಮಾಡುತ್ತಿದ್ದಾಳೆಂಬ ಕೋಪದಿಂದ ಆಕೆಗೆ ಕಿರುಕುಳ ನೀಡುತ್ತಿದ್ದರು. ಇದನ್ನೂ ಓದಿ:  ಸರ್ಕಾರಿ ಉದ್ಯೋಗ ಇಲ್ಲದೆ ಯುವಕರಲ್ಲಿ ಹತಾಶೆ: ವರುಣ್ ಗಾಂಧಿ

ಶಂಕರ್ ತುಂಡರಿಸಿದ ತಲೆ, ಕೈಗಳನ್ನು ಪೊಲೀಸರು ವಶಪಡಿಸಿಕೊಂಡು, ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ನವೆಂಬರ್ 26ರಂದು ಶಂಕರ್ ಅವರ ತಾಯಿ ತಮ್ಮ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸರಿಗೆ ದೂರು ನೀಡಿದ್ದರು. ನ. 25ರ ರಾತ್ರಿ ಮನೆಯಿಂದ ಹೋದ ಮಗ ವಾಪಸ್ ಬಂದಿಲ್ಲ ಎಂದು ದೂರಿನಲ್ಲಿ ತಿಳಿಸಿದ್ದರು. ನವೆಂಬರ್ 27ರಂದು, ಎನ್‍ಟಿಪಿಸಿ ಕೂಲಿಂಗ್ ಟವರ್‌ಗಳ ಬಳಿ ಮಲ್ಲಯಾಲಪಲ್ಲಿ ಕ್ರಾಸ್‍ರೋಡ್ಸ್ ಬಳಿ ಶಂಕರ್ ಅವರ ತಲೆ ಮತ್ತು ಕೈಗಳು ಪತ್ತೆಯಾಗಿತ್ತು. ಇದನ್ನೂ ಓದಿ: ನನ್ನ ಹುಟ್ಟಿಸಿದ್ಯಾಕೆ?- ತಾಯಿಯ ಹೆರಿಗೆ ಮಾಡಿಸಿದ್ದ ವೈದ್ಯರ ವಿರುದ್ಧ ಯುವತಿ ಕೇಸ್

ತನ್ನ ಹೆಂಡತಿ ಆಕೆಯ ಸಹೋದ್ಯೋಗಿಯಾಗಿದ್ದ ರಾಜು ಎಂಬಾತನೊಂದಿಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವ ವಿಷಯ ತಿಳಿದು ಶಂಕರ್ ಕೆಂಡಾಮಂಡಲರಾಗಿದ್ದರು. ಇದೇ ವಿಷಯಕ್ಕೆ ಅವರಿಬ್ಬರ ನಡುವೆ ಜಗಳವೂ ಆಗುತ್ತಿತ್ತು. ತನ್ನ ಮಗ ನಾಪತ್ತೆಯಾಗಿರುವುದರ ಹಿಂದೆ ಸೊಸೆ ಮತ್ತು ಪ್ರಿಯಕರನ ಕೈವಾಡವಿದೆ ಎಂದು ಶಂಕರ್ ಅವರ ತಾಯಿ ಆರೋಪಿಸಿದ್ದರು. ಇದನ್ನೂ ಓದಿ: ಸಿಪಿಎಂ ಸ್ಥಳೀಯ ಮುಖಂಡನ ಬರ್ಬರ ಹತ್ಯೆ- RSS ಮೇಲೆ ಆರೋಪ

ತನ್ನ ವಿರುದ್ಧ ಕೇಸ್ ದಾಖಲಾದ ನಂತರ ರಾಜು ಬೈಕ್‍ನಲ್ಲಿ ಕರೀಂನಗರಕ್ಕೆ ಪರಾರಿಯಾಗಲು ಯತ್ನಿಸುತ್ತಿದ್ದಾಗ ಪೊಲೀಸರು ಆತನನ್ನು ಹಿಡಿದಿದ್ದಾರೆ. ವಿಚಾರಣೆ ವೇಳೆ ಶಂಕರ್‌ನನ್ನು ಕೊಂದಿರುವುದಾಗಿ ರಾಜು ಒಪ್ಪಿಕೊಂಡಿದ್ದಾನೆ. ಶಂಕರ್ ತನ್ನ ಪತ್ನಿಯ ಶೀಲವನ್ನು ಶಂಕಿಸಿ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಈ ಕಿರುಕುಳದ ಕುರಿತು ರಾಜು ಜೊತೆ ಚರ್ಚಿಸಿ ಶಂಕರ್‌ನನ್ನು ಹತ್ಯೆ ಮಾಡಲು ನಿರ್ಧರಿಸಲಾಗಿತ್ತು. ಇದನ್ನೂ ಓದಿ: ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿಗೆ ಡೈವೋರ್ಸ್ ನೀಡಲು ಮುಂದಾದ ಪತಿ

ನವೆಂಬರ್ 25ರಂದು ರಾಜು ತಮ್ಮ ಭಿನ್ನಾಭಿಪ್ರಾಯವನ್ನು ಚರ್ಚಿಸುವ ನೆಪದಲ್ಲಿ ಶಂಕರ್‍ನನ್ನು ಮನೆಗೆ ಕರೆದಿದ್ದ ಎನ್ನಲಾಗಿದೆ. ಆಗ ಶಂಕರ್‍ಗೆ ಮದ್ಯ ಸೇವಿಸುವಂತೆ ಮಾಡಿ ಬಿಯರ್ ಬಾಟಲಿಯಿಂದ ತಲೆಯ ಮೇಲೆ ಹಲ್ಲೆ ನಡೆಸಿದ್ದರು. ನಂತರ ದೇಹವನ್ನು ಏಳು ತುಂಡುಗಳಾಗಿ ಕತ್ತರಿಸಿ ವಿವಿಧ ಸ್ಥಳಗಳಲ್ಲಿ ಎಸೆದಿದ್ದ. ಆರೋಪಿಗಳು ತೆಲುಗು ಸಿನಿಮಾಗಳಿಂದ ಸ್ಫೂರ್ತಿ ಪಡೆದು ಬೇರೆ ಬೇರೆ ಸ್ಥಳಗಳಲ್ಲಿ ಶವಗಳನ್ನು ಎಸೆದಿದ್ದ ಎಂದು ವರದಿಯಾಗಿದೆ. ಘಟನೆಯ ನಂತರ ರಾಜು ಮತ್ತು ಆತನ ಗೆಳತಿಯನ್ನು ಬಂಧಿಸಲಾಗಿದೆ.

Leave a Reply

Your email address will not be published.

Back to top button