– ಮೋದಿ ಬಗ್ಗೆ ಮಾತಾಡೋ ಬದಲು ಚಿದಂಬರಂ ಏನು ಹೇಳಿದ್ರು ನೋಡಲಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಬೆಂಗಳೂರಿಗೆ (Bengaluru) ಬಂದ ವೇಳೆ ಸಿಕ್ಕಿರುವ ಜಿಲೆಟಿನ್ (Gelatin) ಪ್ರಕರಣವನ್ನ ಎನ್‌ಐಎಗೆ (NIA) ವಹಿಸಬೇಕು ಎಂದು ಮಾಜಿ ಸಚಿವ ಶ್ರೀರಾಮಲು (Sriramulu) ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ದೇಶದ ಪ್ರಧಾನಿಗಳು ಕರ್ನಾಟಕಕ್ಕೆ ಬಂದಾಗ ಭದ್ರತೆ ನೀಡಲಾಗದ ಸ್ಥಿತಿಯಲ್ಲಿ ಕಾಂಗ್ರೆಸ್ ಇದೆ. ಬೇರೆ ದೇಶಕ್ಕೆ ಹೋದ್ರೆ ಮೋದಿ ಅವರಿಗೆ ವಿಶೇಷ ಭದ್ರತೆ ಕೊಡುತ್ತಾರೆ. ಆದರೆ ರಾಜ್ಯಕ್ಕೆ ಬಂದಾಗ ಕರ್ನಾಟಕ ಸರ್ಕಾರ ಭದ್ರತೆ ಕೊಡುವುದರಲ್ಲಿ ವಿಫಲವಾಗಿದೆ ಎಂದು ಕಿಡಿಕಾರಿದರು. ಇದನ್ನೂ ಓದಿ: Google Down – ಭಾರತೀಯ ಬಳಕೆದಾರರಿಗೆ ತೊಂದರೆ
ಮೋದಿ ಅವರನ್ನ ಗೃಹ ಸಚಿವರು, ಸಿಎಂ, ಬಿಜೆಪಿ ಪ್ರಧಾನಿ ಅಂತ ತಿಳಿದುಕೊಂಡಿದ್ದಾರೆ. ಅವರು ದೇಶದ ಪ್ರಧಾನಿ ಅಂತ ತಿಳಿದುಕೊಂಡಿಲ್ಲ. ಪ್ರಧಾನಿಗಳು ಬರುವ ಸಮಯದಲ್ಲಿ 100 ಇನ್ಸ್ಪೆಕ್ಟರ್ ವರ್ಗಾವಣೆ ಮಾಡಿದ್ದಾರೆ. ಯಾಕೆ ಅಷ್ಟು ತುರ್ತಾಗಿ ವರ್ಗಾವಣೆ ಮಾಡಿದ್ರು ಎಂದು ಪ್ರಶ್ನೆ ಮಾಡಿದರು. ಇದನ್ನೂ ಓದಿ: ಪ್ರಧಾನಿಗೆ ಭದ್ರತೆ ಕೊಡಲು ಕಾಂಗ್ರೆಸ್ ವಿಫಲ – ರಾಜ್ಯ ತಲೆ ತಗ್ಗಿಸುವ ವಿಷಯ: ಅರಗ ಜ್ಞಾನೇಂದ್ರ ಕಿಡಿ
ಪ್ರಧಾನಿ ಕಾರ್ಯಕ್ರಮದ ವೇಳೆ ಜಿಲೆಟಿನ್, ವೈಯರ್ ಸಿಕ್ಕಿವೆ. ಪ್ರಧಾನಿ ಮೋದಿ ಅವರಿಗೆ ಏನಾದ್ರು ಆದ್ರೆ ಯಾರು ಜವಾಬ್ದಾರಿ? ಪಂಚರಾಜ್ಯ ಚುನಾವಣೆ ಗೆದ್ದಿರೋದಕ್ಕೆ ಮೋದಿ ಮೇಲೆ ಕೋಪನಾ ನಿಮಗೆ? ಕಾಂಗ್ರೆಸ್ ಸರ್ಕಾರಕ್ಕೆ ಮೋದಿ ಬಗ್ಗೆ ಗೌರವ ಇಲ್ಲ ಕಾಳಜಿ ಇಲ್ಲ. ಈ ಪ್ರಕರಣದ ಬಗ್ಗೆ ಎನ್‌ಐ ತನಿಖೆ ಆಗಬೇಕು. ರಾಜ್ಯ ಸರ್ಕಾರ ಎನ್‌ಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಶ್ರೀಲಂಕಾದಿಂದ 11 ಗಂಟೆ ಈಜಿ ಭಾರತದ ದಡ ಸೇರಿ ಇತಿಹಾಸ ಸೃಷ್ಟಿಸಿದ ಬೆಂಗಳೂರಿನ ಟೆಕ್ಕಿ ದಂಪತಿ
ಪ್ರಧಾನಿ ನರೇಂದ್ರ ಮೋದಿ ಅವರ ಮಿತ ಬಳಕೆ ಹೇಳಿಕೆ ಟೀಕೆ ಮಾಡುತ್ತಿರುವ ಕಾಂಗ್ರೆಸ್ ನಾಯಕರ ಕುರಿತು ಪ್ರತಿಕ್ರಿಯಿಸಿ, ಕಾಂಗ್ರೆಸ್‌ನ ಹರಿಪ್ರಸಾದ್, ಸಿದ್ದರಾಮಯ್ಯ ಸೇರಿ ನಾಯಕರ ಹೇಳಿಕೆ ನೋಡಿದ್ದೇನೆ. ಅದಕ್ಕೆ ಕಾಂಗ್ರೆಸ್ ಅವರನ್ನ ಜನರು ಮರೆಯುತ್ತಿದ್ದಾರೆ. 2013ರಲ್ಲಿ ಮನಮೋಹನ್ ಸಿಂಗ್ ಪ್ರಧಾನಿ ಆಗಿದ್ದಾಗ, ಹಣಕಾಸು ಮಂತ್ರಿ ಆಗಿದ್ದಾಗ ಚಿದಂಬರಂ ಏನು ಹೇಳಿದ್ರು ಅದನ್ನ ನೋಡಿ ಮೊದಲು. ವಿಶ್ವದಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ಮಿತಿ ಬಳಕೆ ಮಾಡಿ ಅಂತ ಮೋದಿ ಹೇಳಿದ್ದಾರೆ. ಮನಮೋಹನ್ ಸಿಂಗ್, ಚಿದಂಬರಂ ಏನು ಹೇಳಿದ್ದರು ಅಂತ ಮೊದಲು ಕಾಂಗ್ರೆಸ್ ಅವರು ನೋಡಿಕೊಳ್ಳಲಿ ಎಂದು ತಿರುಗೇಟು ಕೊಟ್ಟರು. ಇದನ್ನೂ ಓದಿ: ಮೇ 3 ರಂದು ನಡೆದ ನೀಟ್ ಪರೀಕ್ಷೆ ರದ್ದು
ಕಾಂಗ್ರೆಸ್ ಅವರಿಗೆ ಬುದ್ಧಿ ಕಡಿಮೆ. ಕಾಂಗ್ರೆಸ್ ಅವರನ್ನ ಹೀಗಾಗಿ ಜನರೇ ಮರೆಯುತ್ತಿದ್ದಾರೆ. ಡಿಕೆ ಶಿವಕುಮಾರ್ ಟೀಕೆ ಮಾಡಿದ್ದಾರೆ. ಮೋದಿ ಅವರು ಜನರಲ್ಲಿ ಜಾಗೃತಿ ಮೂಡಿಸಿದ್ದಾರೆ. ಮೋದಿ ಬಂದ ಮೇಲೆ ನಮ್ಮ ದೇಶಕ್ಕೆ ಗೌರವ ಬರುತ್ತಿದೆ. ಅಮೆರಿಕ, ಇಸ್ರೇಲ್, ಇರಾಕ್ ಯುದ್ಧ ಆಗಿದ್ರು ಭಾರತದಲ್ಲಿ ಅಷ್ಟೋ, ಇಷ್ಟೋ ತೈಲ ಸಿಗುತ್ತಿದೆ. ಮೋದಿ ಅವರು ಆಮದು ಮಾಡಿಕೊಳ್ಳೋದು ಕಡಿಮೆ ಮಾಡಿ ಅಂತ ಹೇಳಿದ್ದಾರೆ. ನಮ್ಮ ದೇಶದಲ್ಲಿ ಇರೋ ವಸ್ತು ಬಳಸಿ ಅಂತ ಹೇಳುತ್ತಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿ ಇತಿಹಾಸ ಬರೆದ ಹಿಮಂತ ಬಿಸ್ವಾ ಶರ್ಮಾ
ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಕಾಂಗ್ರೆಸ್ ಇದ್ದಾಗ ಜಿಡಿಪಿ ಎಷ್ಟು ಇತ್ತು? ಈಗ ಎಷ್ಟಿದೆ? ಪ್ರಧಾನಿಗಳು ಜವಾಬ್ದಾರಿಯಿಂದ ಹೇಳಿದ್ದಾರೆ. ಡಾಲರ್ ಮೌಲ್ಯ ಜಾಸ್ತಿ ಆಗುತ್ತಿದೆ. ಹೀಗಾಗಿ ಮಿತವಾಗಿ ಬಳಕೆ ಮಾಡಿ ಎಂದು ಹೇಳಿದ್ದಾರೆ. ಮೋದಿ ಹೇಳಿಕೆಯಲ್ಲಿ ಯಾವುದೇ ತಪ್ಪು ಇಲ್ಲ ಎಂದು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಇದನ್ನೂ ಓದಿ: ಗಂಡನನ್ನು ಅನ್‌ಫಾಲೋ ಮಾಡಿದ ‘ನಾಗಿಣಿ’ ಮೌನಿ ರಾಯ್ – ಡಿವೋರ್ಸ್ ಹಾದಿಯಲ್ಲಿ ಸ್ಟಾರ್ ಜೋಡಿ?

