ಕನ್ನಡದ ಖ್ಯಾತ ಸಂಗೀತ ನಿರ್ದೇಶಕ ಹಂಸಲೇಖ (Hamsalekha) ಅವರಿಗೆ ಎದೆ ನೋವು (chestpain) ಕಾಣಿಸಿಕೊಂಡಿದ್ದು, ಅವರನ್ನು ಬೆಂಗಳೂರಿನ ರಾಜಾಜಿ ನಗರ ಫಸ್ಟ್ ಬ್ಲಾಕ್ ನಲ್ಲಿರುವ ಪ್ರತಿಷ್ಠಿತ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಂಸಲೇಖ ಅವರಿಗೆ ವೈದ್ಯರು ಚಿಕಿತ್ಸೆ ನೀಡುತ್ತಿದ್ದು, ಆತಂಕ ಪಡುವ ಅವಶ್ಯಕತೆ ಇಲ್ಲ ಎನ್ನುವ ಮಾಹಿತಿಯನ್ನು ನೀಡಿದ್ದಾರೆ.
ಹಂಸಲೇಖ ಆಸ್ಪತ್ರೆಗೆ ದಾಖಲಾದ ವಿಷಯ ಅವರ ಅಭಿಮಾನಿಗಳಲ್ಲಿ ಆತಂಕ ಮೂಡಿಸಿದ್ದು, ನೆಚ್ಚಿನ ಸಂಗೀತ ನಿರ್ದೇಶಕನ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಮಾಹಿತಿಯ ಪ್ರಕಾರ ಹಂಸಲೇಖ ಅವರು ಗ್ಯಾಸ್ಟ್ರಿಕ್ ಸಮಸ್ಯೆಯಿಂದ ಬಳಲುತ್ತಿದ್ದರು ಎಂದು ಹೇಳಲಾಗುತ್ತಿದೆ. ಹಾಗಾಗಿ ಚಿಕಿತ್ಸೆಯ ನಂತರ ಆಸ್ಪತ್ರೆಯಲ್ಲೇ ವಿಶ್ರಾಂತಿ ಪಡೆಯುತ್ತಿದ್ದಾರಂತೆ. ಇದನ್ನೂ ಓದಿ:ಪನೋರಮಾ ಸ್ಟುಡಿಯೋ ತೆಕ್ಕೆಗೆ ಝೈದ್ ಖಾನ್ ನಟನೆಯ ‘ಬನಾರಸ್’ ಸಿನಿಮಾ
ಬಹುಶಃ ಸಂಜೆ ಹೊತ್ತಿಗೆ ವೈದ್ಯರ ಸಲಹೆ ಮೇರೆಗೆ ಹಂಸಲೇಖ ಅವರು ಆಸ್ಪತ್ರೆಯಿಂದ ಬಿಡುಗಡೆ ಆಗಲಿದ್ದಾರೆ ಎನ್ನುವ ಮಾಹಿತಿ ಇದೆ. ನಿರಂತರ ಕೆಲಸ ಮತ್ತು ವಿಶ್ರಾಂತಿ ಇಲ್ಲದೇ ಕಾರಣದಿಂದಾಗಿ ಎದೆ ನೋವು ಕಾಣಿಸಿಕೊಂಡಿದೆ ಎಂದು ಗೊತ್ತಾಗಿದೆ.