ಗುವಾಹಟಿ: ಅಸ್ಸಾಂನ ಗುವಾಹಟಿಯ ಹೋಟೆಲ್ನಲ್ಲಿ (Guwahati Hotel Firing Case) ಐವರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದ ಪ್ರಕರಣದ ಪ್ರಮುಖ ಆರೋಪಿ ಪೊಲೀಸರ ಗುಂಡಿಗೆ (Encounter) ಬಲಿಯಾಗಿದ್ದಾನೆ. ಪೊಲೀಸ್ ವಶದಲ್ಲಿದ್ದಾಗ ತಪ್ಪಿಸಿಕೊಳ್ಳಲು ಯತ್ನಿಸಿದ ಹಿನ್ನೆಲೆ ಬುಧವಾರ ಮುಂಜಾನೆ ಅಸ್ಸಾಂನ (Assam) ಶಿವಸಾಗರ್ ಜಿಲ್ಲೆಯಲ್ಲಿ ಪೊಲೀಸರು ಗುಂಡು ಹಾರಿಸಿದ್ದಾರೆ.
ಮೃತನನ್ನು 34 ವರ್ಷದ ಘನಕಾಂತ ಗೊಗೊಯ್ ಎಂದು ಗುರುತಿಸಲಾಗಿದೆ. ಈತ ಗುವಾಹಟಿಯ ಹೋಟೆಲ್ `ಬಿಲಾಸ್ ಇನ್’ನ ಗುತ್ತಿಗೆದಾರನಾಗಿದ್ದ. ಅಕ್ಟೋಬರ್ 26ರಂದು ನಡೆದ ಗುಂಡಿನ ದಾಳಿಯಲ್ಲಿ ಐವರು ಮೃತಪಟ್ಟಿದ್ದು, ಮತ್ತೊಬ್ಬರು ಗಾಯಗೊಂಡಿದ್ದರು. ಘಟನೆ ನಡೆದು ಒಂಬತ್ತು ದಿನಗಳ ಬಳಿಕ ಆರೋಪಿ ಪೊಲೀಸರ ಗುಂಡಿಗೆ ಬಲಿಯಾಗಿದ್ದಾನೆ. ಇದನ್ನೂ ಓದಿ: ಕಲಬುರಗಿ | ಅಧಿಕಾರಿಗಳ ನಿರ್ಲಕ್ಷ್ಯ – ಶಾಲಾ ಮಕ್ಕಳಿಂದಲೇ ರಸ್ತೆ ಗುಂಡಿ ದುರಸ್ತಿ
ಹೋಟೆಲ್ `ಬಿಲಾಸ್ ಇನ್’ನ ಮಾಲೀಕರೊಂದಿಗೆ ಉಂಟಾಗಿದ್ದ ವಿವಾದದ ಹಿನ್ನೆಲೆಯಲ್ಲಿ ಗೊಗೊಯ್ ಹೋಟೆಲ್ನಲ್ಲಿದ್ದ ಆರು ಮಂದಿಯ ಮೇಲೆ ಗುಂಡಿನ ದಾಳಿ ನಡೆಸಿದ್ದ. ಈ ದಾಳಿಯಲ್ಲಿ ಐವರು ಮೃತಪಟ್ಟಿದ್ದರು. ಭರಾಲಿ ಕುಟುಂಬದ ಕಾರು ಚಾಲಕ ಸತ್ಯೇಂದ್ರ ಪಾಠಕ್ (43) ಗಾಯಗೊಂಡು ಬದುಕುಳಿದಿದ್ದರು. ಇದನ್ನೂ ಓದಿ: ಅಮೆರಿಕ ಚುನಾವಣೆಯಲ್ಲಿ ಟ್ರಂಪ್ಗೆ ಸೋಲು – ಭಾರತದ ಮೇಲೆ ಪರಿಣಾಮ ಏನು?
ಘಟನೆ ನಡೆದ ಕೆಲವೇ ಸಮಯದಲ್ಲಿ ಪೊಲೀಸರು ಗೊಗೊಯ್ನನ್ನು ಬಂಧಿಸಿದ್ದರು. ಕೃತ್ಯಕ್ಕೆ ಬಳಸಿದ್ದ ಪರವಾನಗಿ ಹೊಂದಿರುವ .32 ಬೋರ್ ಪಿಸ್ತೂಲನ್ನೂ ವಶಪಡಿಸಿಕೊಂಡಿದ್ದರು. ಪ್ರಕರಣದಲ್ಲಿ ಏಳು ದಿನಗಳ ಪೊಲೀಸ್ ಕಸ್ಟಡಿ ಮುಗಿದ ಬಳಿಕ ಮಂಗಳವಾರ ಗುವಾಹಟಿ ನ್ಯಾಯಾಲಯ ಆತನನ್ನು ಜೈಲಿಗೆ ಕಳುಹಿಸಿತ್ತು. ಇದನ್ನೂ ಓದಿ: ಸ್ಟಿಂಗ್ ಪ್ರಕರಣದಲ್ಲಿ ಕುಮಾರಸ್ವಾಮಿ ತನಿಖೆಗೆ ಸಹಕಾರ ಕೊಡಲಿ, ಕಳಂಕದಿಂದ ಹೊರಬರಲಿ: ಹೆಚ್.ಸಿ.ಬಾಲಕೃಷ್ಣ
ಆದರೆ, 2024ರಲ್ಲಿ ದಾಖಲಾಗಿದ್ದ ಪ್ರತ್ಯೇಕ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವೇ ಗಂಟೆಗಳ ಬಳಿಕ ಶಿವಸಾಗರ್ ಪೊಲೀಸರು ಆತನನ್ನು ಮತ್ತೆ ವಶಕ್ಕೆ ಪಡೆದಿದ್ದರು. ಹೆಚ್ಚಿನ ತನಿಖೆಗಾಗಿ ಶಿವಸಾಗರ್ಗೆ ಕರೆದೊಯ್ಯುತ್ತಿದ್ದ ವೇಳೆ ಆರೋಪಿ ಪೊಲೀಸರ ವಶದಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಪೊಲೀಸರು ಗುಂಡು ಹಾರಿಸಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಕಲಬುರಗಿಗೆ 174 ರೂ. ಏರಿಕೆ – ಬೆಂಗಳೂರಿನಿಂದ ನಿಮ್ಮ ಊರಿಗೆ ಟಿಕೆಟ್ ದರ ಎಷ್ಟು ಹೆಚ್ಚಳ?
ಐವರ ಹತ್ಯೆಯಿಂದ ಕಂಗೆಟ್ಟಿದ್ದ ಭರಾಲಿ ಕುಟುಂಬದ ಸದಸ್ಯರು ಆರೋಪಿಯ ಸಾವಿಗೆ ಪ್ರತಿಕ್ರಿಯಿಸಿದ್ದು, ಇದನ್ನು ದೇವರ ನ್ಯಾಯ ಎಂದು ಬಣ್ಣಿಸಿದ್ದಾರೆ. ಆರೋಪಿ ಜೀವಂತವಾಗಿದ್ದರೆ ಅಥವಾ ಜಾಮೀನಿನ ಮೇಲೆ ಬಿಡುಗಡೆಯಾದರೆ ತಮ್ಮ ಕುಟುಂಬದ ಮೇಲೂ ಮತ್ತೆ ದಾಳಿ ನಡೆಸಬಹುದು ಎಂಬ ಆತಂಕವಿತ್ತು ಎಂದು ಕುಟುಂಬದವರು ಹೇಳಿದ್ದಾರೆ. ಬರ್ಪೇಟಾದಲ್ಲಿರುವ ಕುಟುಂಬದ ನಿವಾಸದಲ್ಲಿ ಮಾತನಾಡಿದ ಭೂದೇವ್ ಮತ್ತು ಹೆಲೆನಾ ಭರಾಲಿ ಅವರ ವಯೋವೃದ್ಧ ತಾಯಿ, ನ್ಯಾಯ ಸಿಗುತ್ತದೆ ಎಂಬ ನಂಬಿಕೆ ತನಗಿತ್ತು ಎಂದು ಹೇಳಿದ್ದಾರೆ. ಇದನ್ನೂ ಓದಿ: ಪ್ರಿಯತಮೆಯನ್ನು ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಉಸಿರುಗಟ್ಟಿಸಿ ಕೊಂದ ಪೇದೆ
ಭೂದೇವ್ ಭರಾಲಿ ಅವರ ಪುತ್ರಿಯೂ ಕಷ್ಟದ ಸಮಯದಲ್ಲಿ ಕುಟುಂಬದ ಬೆಂಬಲಕ್ಕೆ ನಿಂತ ಅಸ್ಸಾಂ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ. ಆರೋಪಿಯ ಸಾವಿನ ಸುದ್ದಿ ಕುಟುಂಬಕ್ಕೆ ಸ್ವಲ್ಪ ನೆಮ್ಮದಿ ನೀಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅರಮನೆ ಖಾಸಗಿ ಸ್ವತ್ತು, ಸರ್ಕಾರ ಕಟ್ಟಿಸಿಲ್ಲ: ಪ್ರಮೋದಾ ದೇವಿ ಒಡೆಯರ್
ಅಕ್ಟೋಬರ್ 26ರಂದು ನಡೆದ ಗುಂಡಿನ ದಾಳಿಯಲ್ಲಿ ಭೂದೇವ್ ಭರಾಲಿ (65), ಅವರ ಸಹೋದರಿ ಹೆಲೆನಾ (58), ಹೆಲೆನಾ ಅವರ ಪುತ್ರ ದೇಬರ್ಶಿ ಕಶ್ಯಪ್ (39), ಸೊಸೆ ರಿನಿಕಾ ಕಶ್ಯಪ್ (30) ಹಾಗೂ ಕುಟುಂಬದ ಸಿಬ್ಬಂದಿ ನಾರಾಯಣ್ ದಾಸ್ (48) ಮೃತಪಟ್ಟಿದ್ದರು. ಕುಟುಂಬದ ಚಾಲಕ ಸತ್ಯೇಂದ್ರ ಪಾಠಕ್ (43) ದಾಳಿಯಲ್ಲಿ ಗಾಯಗೊಂಡು ಬದುಕುಳಿದಿದ್ದರು. ಇದನ್ನೂ ಓದಿ: ಆಯುಷ್ಮಾನ್ ಖುರಾನಾಗೆ ಬೆದರಿಕೆ ಕರೆ – ಬಿಷ್ಣೋಯ್ ಗ್ಯಾಂಗ್ ಜೊತೆ ನಂಟಿದೆ ಎನ್ನಲಾದ ವ್ಯಕ್ತಿಯಿಂದ ಹಣಕ್ಕೆ ಬೇಡಿಕೆ
