Connect with us

Bengaluru City

ನವರಸನಾಯಕನಿಗೆ ‘ಥ್ಯಾಂಕ್ ಯು ಜಗ್ಗಣ್ಣ’ ಅಂದ್ರು ಗೋಲ್ಡನ್ ಸ್ಟಾರ್ ಗಣಿ

Published

on

ಬೆಂಗಳೂರು: ಇಂದು ಬೆಳಗ್ಗೆ ನವರಸನಾಯಕ ಜಗ್ಗೇಶ್, ಗೋಲ್ಡನ್ ಸ್ಟಾರ್ ಅಭಿನಯದ ‘ಚಮಕ್’ ಸಿನಿಮಾಗೆ ಶುಭಕೋರಿ ಟ್ವೀಟ್ ಮಾಡಿದ್ದರು. ಟ್ವೀಟ್ ಗೆ ಪ್ರತಿಕ್ರಿಯಿಸಿದ ಗಣೇಶ್ `ಥ್ಯಾಂಕ್ ಯು ಜಗ್ಗಣ್ಣ’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಜಗ್ಗೇಶ್ ಟ್ವೀಟ್ ಬರೆದಿದ್ದು ಹೀಗೆ: ಗಣೇಶನ #ಚಮಕ್ ಚಿತ್ರ ಅದ್ಭುತ ಮನರಂಜನೆ ಹಾಗು ಮನಸ್ಸಿನಲ್ಲಿ ಉಳಿಯುವ ಎಲ್ಲ ವರ್ಗಕ್ಕೂ ಸಲ್ಲುವ ಚಿತ್ರ. ಈ ಚಿತ್ರಕ್ಕೆ ನಾನು ಧ್ವನಿ ನೀಡಿ ಅದರ ಸಣ್ಣ ಭಾಗ ಆಗಿದ್ದೇನೆ. ಚಿತ್ರದ ನಿರ್ದೇಶನ, ಛಾಯಾಗ್ರಹಣ, ಗಣೇಶನ ನಟನೆ ಜುಗಲ್ಬಂದಿ ಕನ್ನಡಿಗರಿಗೆ ರಸಕವಳ. ಶುಭವಾಗಲಿ ಎಂದು ಬರೆದಿದ್ದಾರೆ.

ಜಗ್ಗೇಶ್ ಟ್ವೀಟ್ ಮಾಡುತ್ತಿದ್ದಂತೆ ಗಣೇಶ್, ಥ್ಯಾಂಕ್ ಯು ಜಗ್ಗಣ್ಣ ಎಂದು ಬರೆದು ಎಮೋಜಿ ಹಾಕಿ ಧನ್ಯವಾದ ತಿಳಿಸಿದ್ದಾರೆ. ಚಮಕ್ ಸಿನಿಮಾದಲ್ಲಿ ಗಣೇಶ್ ಜೊತೆ ಮೊದಲ ಬಾರಿಗೆ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಬಣ್ಣ ಹಚ್ಚಿದ್ದಾರೆ. ಈಗಾಗಲೇ ಫೋಟೋ, ಟ್ರೇಲರ್ ಮತ್ತು ಮೇಕಿಂಗ್ ವಿಡಿಯೋಗಳಿಂದ ಚಮಕ್ ಸಖತ್ ಹವಾ ಕ್ರಿಯೇಟ್ ಮಾಡಿದೆ. ಇದನ್ನೂ ಓದಿ: ನೀಲ ಸಮುದ್ರದ ಆಳದಲ್ಲಿ ಮೀನುಗಳೊಂದಿಗೆ ಗೋಲ್ಡನ್ ಸ್ಟಾರ್ `ಚಮಕ್’

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಮುರ್ಡೇಶ್ವರದಲ್ಲಿನ ನೇತ್ರಾಣಿ ಸ್ಕೂಬಾ ಡೈವಿಂಗ್, ಕುಮಟಾದ ನುಶಿಕೋಟೆ, ಗೋಕರ್ಣದ ಹಿರೇಗುತ್ತಿ ಹಾಗೂ ಶನಿವಾರ ಕಾರವಾರದ ಪ್ರಸಿದ್ಧ ತೀಳ್‍ಮಾತಿ ಕಡಲತೀರದಲ್ಲಿ ಎರಡು ರೊಮ್ಯಾಂಟಿಕ್ ಹಾಡುಗಳ ಚಿತ್ರೀಕರಣ ನಡೆದಿದೆ. ಸಿನಿಮಾಗೆ ಸಿಂಪಲ್ ಸುನಿ ಆ್ಯಕ್ಷನ್ ಕಟ್ ಹೇಳಿದ್ದು, ಟಿ.ಆರ್.ಚಂದ್ರಶೇಖರ್ ಬಂಡವಾಳ ಹೂಡಿದ್ದಾರೆ.

Click to comment

Leave a Reply

Your email address will not be published. Required fields are marked *