ರಾಂಚಿ: ಕೋಟಿ ಬೆಲೆ ಬಾಳುವ ಚಿನ್ನ, ವಜ್ರ ಖಚಿತವಾದ ಐಫೋನ್ ಕದ್ದ ಕಳ್ಳರ ಗ್ಯಾಂಗ್ ವಾಟ್ಸಪ್ ಸ್ಟೇಟಸ್ ಮೂಲಕವಾಗಿ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ನಡೆದಿದೆ.
ಚಿನ್ನ ಮತ್ತು ವಜ್ರ ಖಚಿತ ಐಫೋನ್ ಪ್ರೋ ಮ್ಯಾಕ್ಸ್ ಫೋನ್ ಕದ್ದಿದ್ದ ಕಳ್ಳರ ಗ್ಯಾಂಗ್ ಅನ್ನು ಪೊಲೀಸರು ಜಾರ್ಖಂಡ್‍ನ ಸಾಹಿಬ್‍ಗಂಜ್‍ನಲ್ಲಿ ಬಂಧಿಸಿದ್ದಾರೆ. ಆದರೆ ಈ ಐನಾತಿ ಕಳ್ಳರು ಸಿಕ್ಕಿ ಬಿದ್ದಿರವ ಕಥೆ ಸಿನಿಮಾ ಸ್ಟೋರಿಯನ್ನು ಮೀರಿಸುವಂತಿದೆ.
Advertisement
Advertisement
ಕಳ್ಳರ ಗ್ಯಾಂಗ್ ಬೇರೆ ಕಡೆ ಕದ್ದಿದ್ದ ವಿಶೇಷವಾಗಿ ಚಿನ್ನ ಮತ್ತು ವಜ್ರದಿಂದ ತಯಾರಿಸಿದ್ದ ಐಫೋನ್ ಅನ್ನು ಮಾರಾಟ ಮಾಡಲು ಸ್ಥಳೀಯರಿಗೆ ತೋರಿಸಿದ್ದಾರೆ. ಇದನ್ನು ನೋಡಿದವರು ಒಂದು ಕ್ಷಣ ಅಚ್ಚರಿಗೊಂಡಿದ್ದಾರೆ. ಕೆಲ ಯುವಕರು ಮೊಬೈಲ್ ಹಿಡಿದು ಸೆಲ್ಫಿ ತೆಗೆದುಕೊಂಡು ಆ ಫೋಟೋಗಳನ್ನು ವಾಟ್ಸಪ್ ಸ್ಟೇಟಸ್‍ನಲ್ಲಿ ಹಂಚಿಕೊಂಡಿದ್ದಾರೆ. ಫೋಟೋ ಭಾರಿ ವೈರಲ್ ಆಗುತ್ತಿದ್ದಂತೆ ವಿಷಯ ಪೊಲೀಸರ ಗಮನಕ್ಕೂ ಬಂದಿದೆ. ಕೂಡಲೇ ಎಚ್ಚೆರಿತುಕೊಂಡ ಖಾಕಿ ಪಡೆ ಕಳ್ಳರನ್ನು ಬಂಧಿಸಿ ದುಬಾರಿ ಬೆಲೆಯ ಐಫೋನ್ ವಶಕ್ಕೆ ಪಡೆದಿದ್ದಾರೆ. ಇದನ್ನೂ ಓದಿ: ಪಕ್ಷದಿಂದ ಸಚಿವನ ಉಚ್ಛಾಟಿಸಿದ ಬಿಜೆಪಿ – ಮತ್ತೆ ‘ಕೈ’ ಹಿಡೀತಾರಾ ಹರಕ್ ಸಿಂಗ್ ರಾವತ್?
Advertisement
Advertisement
ಈ ಮೊಬೈಲ್ 24 ಕ್ಯಾರೆಟ್‍ನ ಚಿನ್ನದಿಂದ ಮಾಡಲಾಗಿದ್ದು, ಇದರಲ್ಲಿ ಡೈಮಂಡ್ ಕೂಡ ಇದೆ. ಮಾರುಕಟ್ಟೆ ಬೆಲೆ ಸುಮಾರು 4 ಲಕ್ಷ ರೂಪಾಯಿ ಇದೆ. ಕಳ್ಳರನ್ನು ಬಂಧಿಸಿದ್ದೇವೆ ಮುಂದಿನ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಪೊಲೀಸರು ಹೇಳಿದ್ದಾರೆ.