ಲಕ್ನೋ: ಬಾಲಕಿ (Girl) ಮೇಲೆ ಅತ್ಯಾಚಾರವೆಸಗಿ (Rape) ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದಲ್ಲಿ (Uttar Pradesh) ನಡೆದಿದೆ.
ಉತ್ತರ ಪ್ರದೇಶದ ನಾಗ್ಲಾ ಶಿಶಮ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. 17ರ ಬಾಲಕಿಯ ತಂದೆ ಕೆಲಸದ ನಿಮಿತ್ತ ಮೈನ್‍ಪುರಿಗೆ ಹೋಗಿದ್ದರು. ಆಕೆಯ ತಾಯಿ ಆಗ್ರಾಕ್ಕೆ ಹೋಗಿದ್ದರು. ಬಾಲಕಿಯ ತಂಗಿಯು ಕೋಚಿಂಗ್ ತರಗತಿಗೆ ಹೋಗಿದ್ದಳು. ಈ ಹಿನ್ನೆಲೆಯಲ್ಲಿ ಬಾಲಕಿ ಮನೆಯಲ್ಲಿ ಒಬ್ಬಳೇ ಇದ್ದಳು. ಆ ಸಂದರ್ಭದಲ್ಲಿ ಬಾಲಕಿಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
Advertisement
Advertisement
ಕೋಚಿಂಗ್ ಮುಗಿಸಿ ಮನೆಗೆ ಬಂದ ಬಾಲಕಿಯ ತಂಗಿ ಬಾಗಿಲು ತೆಗೆಯಲು ಪ್ರಯತ್ನಿಸಿದ್ದಾಳೆ. ಆದರೆ ಎಷ್ಟೇ ಪ್ರಯತ್ನಿಸಿದರೂ ಬಾಗಿಲನ್ನು ತೆಗೆಯಲು ಆಗಲಿಲ್ಲ. ಆ ಬಳಿಕ ಆಕೆ ಕಿಟಕಿಯೊಂದರಲ್ಲಿ ಇಣುಕಿ ನೋಡಿದ್ದಾಳೆ. ಇದನ್ನೂ ಓದಿ: ಅಣ್ಣನ ಜೊತೆಗೆ ಗಾಳಿಪಟ ಹಾರಿಸುವಾಗ ಬಿಲ್ಡಿಂಗ್ ಮೇಲಿಂದ ಬಿದ್ದು ತಮ್ಮ ಸಾವು
Advertisement
ಈ ವೇಳೆ ಬಾಲಕಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆ ಆಗಿದೆ. ಘಟನೆಗೆ ಸಂಬಂಧಿಸಿ ಪೊಲೀಸರು ಸ್ಥಳಕ್ಕಾಗಮಿಸಿ ಕ್ರಮ ಕೈಗೊಂಡಿದ್ದಾರೆ. ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ. ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಕಾಡಾನೆಗಳ ಉಪಟಳ – ಸರ್ಕಾರಿ ಶಾಲೆಯ ಗೇಟ್ ಧ್ವಂಸ