Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಮೇಜರ್‌ ನರವಣೆ ʻಅಪ್ರಕಟಿತ ಆತ್ಮಚರಿತ್ರೆʼ ಎಬ್ಬಿಸಿದ ಬಿರುಗಾಳಿ – 2020 ಆಗಸ್ಟ್‌ 31ರ ರಾತ್ರಿಗೂ ಮುನ್ನ ಏನಾಯ್ತು?
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಮೇಜರ್‌ ನರವಣೆ ʻಅಪ್ರಕಟಿತ ಆತ್ಮಚರಿತ್ರೆʼ ಎಬ್ಬಿಸಿದ ಬಿರುಗಾಳಿ – 2020 ಆಗಸ್ಟ್‌ 31ರ ರಾತ್ರಿಗೂ ಮುನ್ನ ಏನಾಯ್ತು?

Latest

ಮೇಜರ್‌ ನರವಣೆ ʻಅಪ್ರಕಟಿತ ಆತ್ಮಚರಿತ್ರೆʼ ಎಬ್ಬಿಸಿದ ಬಿರುಗಾಳಿ – 2020 ಆಗಸ್ಟ್‌ 31ರ ರಾತ್ರಿಗೂ ಮುನ್ನ ಏನಾಯ್ತು?

Public TV
Last updated: February 10, 2026 3:24 pm
Public TV
Share
6 Min Read
Gen Naravane memoir
SHARE

ಒಬ್ಬರ ಜೀವನಾನುಭವವು ಮತ್ತೊಬ್ಬರಿಗೆ ಜ್ಞಾನ ಮಾಹಿತಿ ನೀಡುತ್ತವೆ. ಆದ್ರೆ ಕೆಲವೊಮ್ಮೆ ಅವು ವಿವಾದದ ಅಲೆ ಎಬ್ಬಿಸಿ ಸಂಚಲನವನ್ನೇ ಸೃಷ್ಟಿಸಬಹುದು ಅನ್ನೋದಕ್ಕೆ ತಾಜಾ ಉದಾಹರಣೆ ಈಗ ನಿವೃತ್ತ ಮೇಜರ್‌ ಜನರಲ್‌ ಮನೋಜ್‌ ಮುಕುಂದ್‌ ನರವಣೆ (General M M Naravane) ಅವರ ಅಪ್ರಕಟಿತ ಅತ್ಮಕಥೆ ʻಫೋರ್‌ ಸ್ಟರಾರ್‌ ಆಫ್‌ ಡೆಸ್ಟಿನಿʼ.

ಈ ಪುಸ್ತಕ ಎಂಬ ಆತ್ಮಚರಿತ್ರೆಯನ್ನು ಜನರಲ್‌ ಮನೋಜ್‌ ಮುಕುಂದ್‌ ನರವಣೆ ಅವರು ರಚಿಸಿದ್ದಾರೆ. ಆದ್ರೆ ಇದು ಪ್ರಕಟಗೊಂಡಿಲ್ಲ, ಪುಸ್ತಕವನ್ನ ಸರ್ಕಾರದ ಪರಿಶೀಲನೆಗೆ ಸಲ್ಲಿಸಲಾಗಿದೆ. ಆದ್ರೆ ಭಾರತದಲ್ಲಿ ಪ್ರಕಟಣೆಗೆ ಈವರೆಗೆ ಯಾಕೆ ಅನುಮತಿ ನೀಡಲಾಗಿಲ್ಲ ಅನ್ನೋದಕ್ಕೆ ಉತ್ತರ ದೊರೆತಿಲ್ಲ. ಅಪ್ರಕಟಿತ ಪುಸ್ತಕದ ಆಯ್ದ ಭಾಗಗಳನ್ನ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಸದನದಲ್ಲಿ ಪ್ರಸ್ತಾಪಿಸುವುದಕ್ಕೂ ಅನುಮತಿ ನಿರಾಕರಿಸಲಾಗಿದೆ. ಇದೇ ವಿಚಾರಕ್ಕೆ ಸದನದಲ್ಲಿ ಅಡಚಣೆ ಉಂಟುಮಾಡಿದ ಆರೋಪದಲ್ಲಿ 8 ಸಂಸದರನ್ನ ಸದನದಿಂದ ಅಮಾನತುಗೊಳಿಸಿರುವುದು ವಿವಾದವನ್ನ ಮಾತ್ರ ಹಲವು ಪ್ರಶ್ನೆಗಳಿಗೆ ಎಡೆಮಾಡಿಕೊಟ್ಟಿದೆ.

galwan

ಅಲ್ಲದೇ ನರವಣೆ ಅವರ ಅಪ್ರಕಟಿತ ಆತ್ಮಚರಿತ್ರೆ ಕೃತಿಯನ್ನು ಸೋಷಿಯಲ್‌‌ ಮೀಡಿಯಾಗಳಲ್ಲಿ ಹಂಚಿಕೊಳ್ಳುತ್ತಿರುವ ಬಗ್ಗೆ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ನಡುವೆ ʻಫೋರ್‌ ಸ್ಟಾರ್‌ ಆಫ್‌ ಡೆಸ್ಟಿನಿʼನ (Four Stars of Destiny) ಪ್ರಕಾಶನದ ಹಕ್ಕುಗಳನ್ನು ಹೊಂದಿರುವ ಪೆಂಗ್ವಿನ್‌ ರ‍್ಯಾಂಡಮ್‌ ಹೌಸ್‌ ಇಂಡಿಯಾ ಪುಸ್ತಕ ಇನ್ನೂ ಪ್ರಕಟಣೆಗೆ ಬಂದಿಲ್ಲ ಎಂದು ಸ್ಪಷ್ಟಪಡಿಸಿದೆ. ಪುಸ್ತಕದ ಡಿಜಿಟಲ್‌ ಪ್ರತಿಗಳನ್ನು, ಪ್ರಕಟಣೆ ಅಥವಾ ವಿತರಣೆ ಮಾರಾಟ ಅಥವಾ ಸಾರ್ವಜನಿಕರಿಗೆ ಲಭ್ಯವಾಗುವಂತೆ ಮಾಡಲಾಗಿಲ್ಲ ಎಂದು ಪ್ರಕಾಶಕರು ಹೇಳಿದ್ದಾರೆ.

ಅಷ್ಟಕ್ಕೂ ಈ ಪುಸ್ತಕದಲ್ಲಿ ಅಂತಹ ರಹಸ್ಯ ಏನಿದೆ? ಮನೋಜ್‌ ಮುಕುಂದ್‌ ನರವಣೆ ಯಾರು? ಭಾರತ-ಚೀನಾ ಸಂಘರ್ಷ ನಡೆದಾಗ ಏನಾಗಿತ್ತು? ರಾಜನಾಥ್‌ ಸಿಂಗ್‌ ಅವರೊಂದಿಗೆ ಏನು ಚರ್ಚೆ ನಡೆದಿತ್ತು? ಆಗಸ್ಟ್‌ 31ರ ರಾತ್ರಿಗೂ ಮುನ್ನ ನಡೆದಿದ್ದೇನು ಅನ್ನೋದರ ಬಗ್ಗೆ ತಿಳಿಯುವ ಕುತೂಹಲ ನಿಮಗಿದ್ದರೆ ಮುಂದೆ ಓದಿ….

MANOJ NARAVANE

ಮನೋಜ್‌ ಮುಕುಂದ್‌ ನರವಣೆ ಯಾರು?
ಮೇಜ‌ರ್ ನರವಣೆ ಅವರು ಭಾರತೀಯ ಸೇನಾ ಮುಖ್ಯಸ್ಥರಾಗಿದ್ದಾಗ, ಭಾರತ ಎರಡು ಪ್ರಮುಖ ಸವಾಲುಗಳನ್ನು ಎದುರಿಸಿತು. ಮೊದಲನೆಯದು ನಮ್ಮ ವೀರ ಯೋಧರು ಸೇರಿದಂತೆ ಎಲ್ಲರನ್ನೂ ಬಾಧಿಸಿದ್ದ ಕೋವಿಡ್-19 ಸಾಂಕ್ರಾಮಿಕ. ಮತ್ತೊಂದು ಅಪಾಯಕಾರಿ ಗಲ್ವಾನ್‌ ಘರ್ಷಣೆ. ಇದು ದೂರದ, ದುರ್ಗಮ, ಎತ್ತರದ ಪ್ರದೇಶದಲ್ಲಿ ಚೀನಾದ ವಿರುದ್ಧ ನಡೆದ ಮಿಲಿಟರಿ ಸಂಘರ್ಷ. ಇಲ್ಲಿ ಮೈ ಕೊರೆಯುವ ಚಳಿ, ಮತ್ತು ಅತ್ಯಂತ ವಿರಳವಾದ ಆಮ್ಲಜನಕದ ಲಭ್ಯತೆಯ ನಡುವೆಯೂ ಭಾರತೀಯ ಯೋಧರು ಕಾವಲು ಕಾಯುತ್ತಿದ್ದರು. ಇಂತಹ ಸಂಕಷ್ಟಕರ ಸನ್ನಿವೇಶಗಳಲ್ಲೂ ಜನರಲ್ ನರವಣೆ ಸಂಪೂರ್ಣ ಭಾರತೀಯ ಸೇನೆಗೆ ಮಾರ್ಗದರ್ಶನ ನೀಡಿದ್ದರು. ಮೇಜರ್ ನರವಣೆ ಸ್ವತಃ ಅತ್ಯುನ್ನತ ವಿದ್ಯಾಭ್ಯಾಸ ಹೊಂದಿದವರಾಗಿದ್ದು, ಪಿಹೆಚ್‌ಡಿ ಪದವಿಯನ್ನೂ ಪಡೆದಿದ್ದಾರೆ. ಪ್ರಸ್ತುತ ಅವರು ಓರ್ವ ಸಾರ್ವಜನಿಕ ಭಾಷಣಕಾರರಾಗಿ ಮತ್ತು ಲೇಖಕರಾಗಿ ಸಕ್ರಿಯರಾಗಿದ್ದಾರೆ. ಅವರು ಸೇನಾಧಿಕಾರಿಯಾಗಿದ್ದಾಗ ನೇಪಾಳ ಸರ್ಕಾರ ಅವರಿಗೆ ಜನರಲ್ ಆಫ್ ನೇಪಾಳ ಆರ್ಮಿ ಎಂಬ ಬಿರುದು ನೀಡಿ ಗೌರವಿಸಿತ್ತು.

Four Stars of Destiny Book MM Naravane

ಸಂಸತ್ತಿನಲ್ಲಿ ಏನಾಯ್ತು?
ಇದೇ 2026 ರ ಫೆಬ್ರವರಿ 2 ರಂದು ವಿಪಕ್ಷ ನಾಯಕ ರಾಹುಲ್‌ ಗಾಂಧಿ ಈ ಅಪ್ರಕಟಿತ ಕೃತಿಯ ಅಂಶಗಳನ್ನ ಸಂಸತ್ತಿನಲ್ಲಿ ಬಳಸಿಕೊಂಡು, ಗಡಿ ವಿವಾದಗಳ ಸಂದರ್ಭದಲ್ಲಿ ಸರ್ಕಾರ ಕೈಗೊಂಡ ನಿರ್ಧಾರಗಳನ್ನು ಪ್ರಶ್ನಿಸಿದ್ದರು. ಸರ್ಕಾರ ತಕ್ಷಣವೇ ವಿಪಕ್ಷಗಳ ನಡೆಯನ್ನ ಅಡ್ಡಿಪಡಿಸಿ, ʻಇಂದಿನ ತನಕ ಅಧಿಕೃತವಾಗಿ ಪ್ರಕಟಿತವಾಗಿರದ, ಮತ್ತು ಮಾಹಿತಿಗಳನ್ನು ಪ್ರಕಟಿಸಲು ಸಾಧ್ಯವೇ ಇಲ್ಲ, ಇದು ಸಂಸತ್ತಿನ ನಿಯಮಗಳ ಉಲ್ಲಂಘನೆಯಾಗುತ್ತದೆ. ಅಲ್ಲದೇ ಇಂತಹ ಸೂಕ್ಷ್ಮ ಮಾಹಿತಿಗಳನ್ನ ಪ್ರಕಟಿಸುವುದರಿಂದ, ಭಾರತದ ಭದ್ರತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿ ಉಂಟಾಗಬಹುದು ಎಂದು ಸರ್ಕಾರದ ನಿಯಮಗಳು ಹೇಳುತ್ತವೆ.

ಏಪ್ರಿಲ್ 31 ರ ಮೊದಲು ಏನಾಯಿತು?
2022ರ ಏಪ್ರಿಲ್‌ ಅಂತ್ಯದ ವೇಳೆಗೆ ಎಲ್ಎಸಿ ಯ (Line of Actual Control) ಉದ್ದಕ್ಕೂ ಚೀನಾದ ತನ್ನ ನಿರಂತರವಾಗಿ ಸೇನೆಯನ್ನ ಸಜ್ಜುಗೊಳಿಸುತ್ತಿತ್ತು. ಜೊತೆಗೆ ಮೂಲ ಸೌಕರ್ಯಗಳನ್ನ ಅಭಿವೃದ್ಧಿಪಡಿಸುತ್ತಿತ್ತು. ಆ ನಂತರ ಭಾರತ ಮತ್ತು ಚೀನಾ ನಡುವೆ ಉದ್ವಿಗ್ನತೆ ಹೆಚ್ಚಾಗುತ್ತಾ ಸಾಗಿತು. ಇದಕ್ಕೆ ಪ್ರತಿಯಾಗಿ ಭಾರತ ಕೂಡ ಆ ಪ್ರದೇಶದಲ್ಲಿ ಮಿಲಿಟರಿ ಉಪಕರಣಗಳೊಂದಿಗೆ ಸೇನಾ ತುಕಡಿಯನ್ನೂ ನಿಯೋಜಿಸಿತು. 2022ರ ಮೇ ತಿಂಗಳ ಮೊದಲ ವಾರದಲ್ಲಿ ಭಾರತ ಮತ್ತು ಚೀನಾದ ಸೈನಿಕರು ಎಲ್‌ಎಸಿ ಉದ್ದಕ್ಕೂ 2 ಹಂತಗಳಲ್ಲಿ ಭಾರತದ ಸೈನಿಕರ ವಿರುದ್ಧ ಘರ್ಷಣೆಗೆ ಇಳಿದರು. ಇದು ಸಿಕ್ಕಿಂನ ನಕು ಲಾ ಸೆಕ್ಟರ್‌ ಮತ್ತು ಲಡಾಖ್‌ನ ಪಾಂಗೋವ್‌ ತ್ಸೋ ಸರೋವರದ ಬಳಿ ಹಿಂಸಾಚಾರಕ್ಕೂ ಕಾರಣವಾಯಿತು.

army memorial galwan valley

ಈ ಘರ್ಷಣೆಯಲ್ಲಿ ಎರಡೂ ಕಡೆಯ ಹಲವಾರು ಸೈನಿಕರು ಗಾಯಗೊಂಡಿದ್ದರು. ಲಡಾಖ್‌ ಘರ್ಷಣೆಯಲ್ಲಿ ಭಾರತೀಯ ಸೇನೆಯ ಇಬ್ಬರು ಅಧಿಕಾರಿಗಳೂ ಸೇರಿ 70 ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದರು. ಸ್ಥಳೀಯ ಮಟ್ಟದ ಮಾತುಕತೆಯಲ್ಲಿ ಈ ಘರ್ಷಣೆಯನ್ನ ಪರಿಹರಿಸಲಾಯಿತು. ಇದಾದ ಬಳಿಕ 2019 ರ ಸೆಪ್ಟೆಂಬರ್‌ನಲ್ಲಿ ಲಡಾಕ್‌ನ ಎಲ್‌ಎಸಿ ಬಳಿಯ ಪಾಂಗೊಂಗ್‌ ತ್ಸೋ ನಲ್ಲಿನ ಉತ್ತರ ದಂಡೆಯಲ್ಲಿ ನಡೆದಿತ್ತು. ವಾರಗಳ ಕಾಲ ಉದ್ವಿಗ್ನತೆ ನಡೆದಿತ್ತು. 2020 ರ ಜೂನ್‌ 6 ರಂದು ಮೊದಲ ಮಿಲಿಟರಿ ಕಾರ್ಪ್ಸ್‌ ಕಮಾಂಡರ್‌ಗಳ ಮಟ್ಟದ ಮಾತುಕತೆ ನಡೆಯಿತು. ಜೂನ್‌ 10 ರಿಂದ ವಿವಿಧ ಮಿಲಿಟರಿ ಕಮಾಂಡರ್‌ ಮಟ್ಟದಲ್ಲಿ ಸಭೆಗೂ ನಡೆದವು. ಆ ಬಳಿಕ ಸಂಘರ್ಷ ತಣ್ಣಗಾಯಿತು.

LAC ಯಲ್ಲಿ ವಾರಗಳ ಕಾಲ ಉದ್ವಿಗ್ನತೆ ಮತ್ತು ಪೂರ್ವ ಲಡಾಖ್‌ನಲ್ಲಿ ಎರಡೂ ಕಡೆಯವರು ಪಡೆ ಮತ್ತು ಉಪಕರಣಗಳ ನಿರ್ಮಾಣವನ್ನ ಮುಂದುವರಿಸಿದ ನಂತರ, ಜೂನ್ 6, 2020 ರಂದು ಮೊದಲ ಮಿಲಿಟರಿ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆಯಿತು. ಜೂನ್ 10 ರಿಂದ ವಿವಿಧ ಮಿಲಿಟರಿ ಕಮಾಂಡರ್‌ಗಳ ಮಟ್ಟದಲ್ಲಿ ಇತರ ಸಭೆಗಳು ನಡೆದವು, ಇದರಿಂದಾಗಿ ಸೇನಾಪಡೆಗಳ ಸಂಪರ್ಕ ಕಡಿತ ಪ್ರಕ್ರಿಯೆಯ ವಿಧಾನಗಳನ್ನು ಚರ್ಚಿಸಲು ಮತ್ತು ಅಂತಿಮಗೊಳಿಸಲು ಸಾಧ್ಯವಾಯಿತು.

Aksai Chin India China POK Map Ladakh

ಇಷ್ಟು ದೊಡ್ಡ ವಿವಾದ ಎದ್ದಿದ್ದು ಏಕೆ?
ಭಾರತದಲ್ಲಿ ಒಂದು ಸ್ಪಷ್ಟವಾದ ನಿಯಮವಿದ್ದು, ಅದರ ಪ್ರಕಾರ ನಿವೃತ್ತ ಸೇನಾಧಿಕಾರಿಗಳು ಮತ್ತು ಸರ್ಕಾರಿ ಅಧಿಕಾರಿಗಳು ಮೊದಲಿಗೆ ರಕ್ಷಣಾ ಸಚಿವಾಲಯದಿಂದ ಅನುಮತಿ ಪಡೆಯದೆ ತಮ್ಮ ವೃತ್ತಿಯ ಅಂಶಗಳ ಕುರಿತ ಯಾವುದೇ ಮಾಹಿತಿಗಳನ್ನು ಸಾರ್ವಜನಿಕವಾಗಿ ಪ್ರಕಟಿಸುವಂತಿಲ್ಲ. ರಾಷ್ಟ್ರೀಯ ಭದ್ರತೆ ಅತ್ಯಂತ ಮುಖ್ಯವಾಗಿರುವುದರಿಂದ, ಈ ನಿಯಮ ಅತ್ಯಂತ ಮುಖ್ಯವಾಗಿದೆ. ಇಂತಹ ಸೂಕ್ಷ್ಮ ಮಾಹಿತಿಗಳನ್ನು ಪ್ರಕಟಿಸುವುದರಿಂದ, ಭಾರತದ ಭದ್ರತೆ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳಿಗೆ ಹಾನಿ ಉಂಟಾಗಬಹುದು ಎಂದು ಸರ್ಕಾರದ ನಿಯಮಗಳು ಹೇಳುತ್ತವೆ.

ನರವಣೆ ʻಅಪ್ರಕಟಿತ ಆತ್ಮಕತೆʼಯಲ್ಲಿ ಏನಿದೆ?
ಮನೋಜ್‌ ಮುಕುಂದ್‌ ನರವಣೆ ಅವರು ಸೇನೆಯಿಂದ ನಿವೃತ್ತಿ ಹೊಂದಿದ ಬಳಿಕ, ಜನರಲ್ ನರವಣೆ ‘ಫೋ‌ರ್ ಸ್ಟಾರ್ಸ್‌ ಆಫ್ ಡೆಸ್ಟಿನಿ’ ಎನ್ನುವ ಆತ್ಮಕಥೆಯನ್ನ ಬರೆದಿದ್ದಾರೆ. ಆತ್ಮಕಥೆ ಎನ್ನುವುದು ಒಂದು ರೀತಿಯಲ್ಲಿ ಓರ್ವನ ಡೈರಿಯಂತಿದ್ದು, ತನ್ನ ವೈಯಕ್ತಿಕ ಅನುಭವಗಳು ಮತ್ತು ಜೀವನದ ಪ್ರಮುಖ ಕ್ಷಣಗಳ ವಿವರಗಳನ್ನ ಹೊಂದಿರುತ್ತವೆ. ವಾಸ್ತವವಾಗಿ ಸಮಸ್ಯೆ ಆರಂಭಗೊಂಡಿದ್ದೇ ಇಲ್ಲಿಂದ.

India China 1

ರಾಜನಾಥ್‌ ಸಿಂಗ್‌ ಜೊತೆಗೆ ನಡೆದ ಮಾತುಕತೆ ಏನು?
ಮೇಜ‌ರ್ ನರವಣೆಯವರ ಕೃತಿ 2020 ರ ಆಗಸ್ಟ್ 31 ರ ರಾತ್ರಿಯ ಘಟನೆಗಳನ್ನ ವಿಸ್ತೃತವಾಗಿ ವಿವರಿಸಿದೆ ಎಂದು ಮಾಧ್ಯಮವೊಂದು ವರದಿ ಮಾಡಿದ್ದು ಅದು ಈಗ ಬಿರುಗಾಳಿಯನ್ನೇ ಎಬ್ಬಿಸಿದೆ. ಮಾಧ್ಯಮದಲ್ಲಿ ವರದಿಯಾದಂತೆ ಆ ದಿನ ರಕ್ಷಣಾ ಸಚಿವರಾದ ರಾಜನಾಥ್ ಸಿಂಗ್ ಅವರು ಜನರಲ್ ಬಳಿ ‘ಜೋ ಉಚಿತ್ ಸಮ್ಮೋ, ವೋ ಕರೋ’, ಅಂದ್ರೆ, ʻನಿಮಗೆ ಏನು ಸೂಕ್ತ ಎನಿಸುತ್ತದೆಯೋ, ಅದನ್ನು ಮಾಡಿʼ ಎಂದಿದ್ದರಂತೆ. ರಕ್ಷಣಾ ಸಚಿವರು ಆಡಿದ ಮಾತು ಚೀನಾ ವಿರುದ್ಧದ ಘರ್ಷಣೆಯ ಸಂದರ್ಭದಲ್ಲಿ ನಮ್ಮ ಸೇನೆಗೆ ನಿರ್ಧಾರಗಳನ್ನ ಕೈಗೊಳ್ಳುವ ಸ್ವಾತಂತ್ರ್ಯ ನೀಡಿತ್ತು. ಗಡಿ ಪ್ರದೇಶದಲ್ಲಿ ಭಾರತ ಮತ್ತು ಚೀನಾಗಳ ಯುದ್ಧ ಟ್ಯಾಂಕ್‌ಗಳು ಪರಸ್ಪರ ಎದುರುಬದುರಾಗಿ ನಿಂತು, ಪರಿಸ್ಥಿತಿ ಅತ್ಯಂತ ತೀವ್ರತೆ ಪಡೆದಿದ್ದಾಗ ಈ ಬೆಳವಣಿಗೆ ನಡೆದಿತ್ತು. ಮೇಜ‌ರ್ ನರವಣೆಯವರ ಕೃತಿ ಈ ಸೂಕ್ಷ್ಮ ಕ್ಷಣಗಳಲ್ಲಿ ನಡೆದ ಬಹಳಷ್ಟು ತೆರೆಯ ಹಿಂದಿನ ಮಾತುಕತೆಗಳ ಮಾಹಿತಿಯನ್ನು ಒದಗಿಸುತ್ತಿದ್ದು, ಇದು ಬಹುತೇಕ ರಹಸ್ಯವಾಗಿಯೇ ಇರಬೇಕಿದ್ದ ವಿಚಾರಗಳನ್ನು ಜನರ ಮುಂದೆ ತೆರೆದಿಡುವಂತಾಗುತ್ತಿದೆ. ಅಲ್ಲದೇ ಈ ಪುಸ್ತಕ ಅಗ್ನಿಪಥ್ ಸೇನಾ ನೇಮಕಾತಿ ಪ್ರಕ್ರಿಯೆ ನಿರ್ವಹಿಸಿರುವ ರೀತಿಯ ಕುರಿತು ಟೀಕೆ ವ್ಯಕ್ತಪಡಿಸಿದೆ ಎಂದು ಹೇಳಲಾಗಿದೆ.

China India

ಒಟ್ಟಿನಲ್ಲಿ ರಾಷ್ಟ್ರೀಯ ಭದ್ರತೆ ಅತ್ಯಂತ ಗಂಭೀರವಾದ ವಿಚಾರವಾಗಿದೆ. ನಿವೃತ್ತ ಅಧಿಕಾರಿಗಳು ರಹಸ್ಯ ವಿಚಾರಗಳನ್ನು ತಮ್ಮೊಡನೆ ಖಾಸಗಿಯಾಗಿಯೇ ಇಟ್ಟುಕೊಳ್ಳುವ ಮಹತ್ವದ ಜವಾಬ್ದಾರಿ ಹೊಂದಿದ್ದು, ಅವರು ತಮ್ಮ ಕಥೆಗಳನ್ನು ಹೇಳಲು ಬಯಸಿದ್ದರೂ ಇವುಗಳನ್ನು ಬಹಿರಂಗಪಡಿಸುವಂತಿಲ್ಲ. ಜನರಲ್ ತನ್ನ ಕೃತಿಯಲ್ಲಿ ಮಿಲಿಟರಿ ಮತ್ತು ಸರ್ಕಾರದ ಅಧಿಕಾರ ವಲಯದಲ್ಲಿದ್ದ ಎಲ್ಲರೂ ಪಾಲಿಸಲೇಬೇಕಾದ, ಗೌರವಿಸಬೇಕಾದ ಮಿತಿಯನ್ನು ದಾಟಿರುವುದರಿಂದ ಇದು ದೇಶದಲ್ಲಿ ಹೊಸ ಬಿರುಗಾಳಿ ಎಬ್ಬಿಸಿದೆ.

TAGGED:Galwan valley clashesGen NaravaneindiaLadakhLadakh Chinanarendra modiRahul Gandhirajnath singh
Share This Article
Facebook Whatsapp Whatsapp Telegram

Cinema news

darshan ex manager mallikarjun 2 1
ದರ್ಶನ್‌, ಧ್ರುವ ಸರ್ಜಾ ನಡುವೆ ಮನಸ್ತಾಪಕ್ಕೆ ಕಾರಣ ಯಾರು? – ಮಲ್ಲಿಕಾರ್ಜುನ್‌ ಹೇಳಿದ್ದೇನು?
Bengaluru City Cinema Latest Sandalwood Top Stories
darshan ex manager mallikarjun 2
ಕೇಸ್‌ ಒಂದ್ರಲ್ಲಿ ದರ್ಶನ್‌ ಸರ್‌ ಸಿಕ್ಕಾಕೊಂಡಾಗ ಬಹಳ ಬೇಜಾರಾಯ್ತು: ಮಾಜಿ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಮಾತು
Bengaluru City Cinema Latest Sandalwood Top Stories
darshan ex manager mallikarjun
8 ವರ್ಷ ನಾಪತ್ತೆಯಾಗಿದ್ದ ದರ್ಶನ್‌ ಮಾಜಿ ಮ್ಯಾನೇಜರ್‌ ದಿಢೀರ್‌ ಪ್ರತ್ಯಕ್ಷ – ನಡೆದಿದ್ದೇನು ಅಂತ ಎಳೆಎಳೆಯಾಗಿ ಬಿಚ್ಚಿಟ್ಟ ಮಲ್ಲಿ
Bengaluru City Cinema Latest Main Post Sandalwood
Udupi Rishab Shetty Home Bhajane Kunitha Yakshagana Harake
ನಟ ರಿಷಬ್ ಶೆಟ್ಟಿ ಮನೆಯಲ್ಲಿ ಕುಣಿತ ಭಜನೆ, ಯಕ್ಷಗಾನ ಹರಕೆ ಪ್ರದರ್ಶನ
Cinema Districts Karnataka Latest Sandalwood Top Stories Udupi

You Might Also Like

Russian firms india
Latest

ರಷ್ಯಾ, ಇರಾನ್‌ ತೈಲ ಖರೀದಿಗೆ ಭಾರತಕ್ಕೆ ಅವಕಾಶ ನೀಡುವ ವಿನಾಯಿತಿಯಲ್ಲಿ ವಿಸ್ತರಣೆ ಇಲ್ಲ: ಅಮೆರಿಕ

Public TV
By Public TV
3 minutes ago
Siddaramaiah
Bengaluru City

ಕರ್ನಾಟಕದಲ್ಲಿ ಈ ಬಾರಿ ಮುಂಗಾರು ಕೊರತೆ – ಕುಡಿಯುವ ನೀರಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲು ಸಿಎಂ ಸೂಚನೆ

Public TV
By Public TV
15 minutes ago
Narendra Modi Emmanuel Macron
Latest

ಪ್ರಧಾನಿ ಮೋದಿಗೆ ಫ್ರಾನ್ಸ್‌ ಅಧ್ಯಕ್ಷ ಮ್ಯಾಕ್ರನ್‌ ಫೋನ್‌ ಕಾಲ್‌ – ಹಾರ್ಮುಜ್‌ನಲ್ಲಿ ಭದ್ರತಾ ಕಾಳಜಿ ಕುರಿತು ಚರ್ಚೆ

Public TV
By Public TV
52 minutes ago
If Chanakya were alive today even he would be stunned by your political cunning Priyanka Gandhi to Amit Shah over womens quota
Latest

ʻಚಾಣಕ್ಯʼನನ್ನು ಉಲ್ಲೇಖಿಸಿ ಅಮಿತ್‌ ಶಾಗೆ ನಗುನಗುತ್ತಲೇ ತಿವಿದ ಪ್ರಿಯಾಂಕಾ- ಗೊಳ್ಳೆಂದು ನಕ್ಕ ಗೃಹಮಂತ್ರಿ

Public TV
By Public TV
1 hour ago
Amit Shah 1
Latest

ಕರ್ನಾಟಕದ ಲೋಕಸಭಾ ಕ್ಷೇತ್ರಗಳ ಸಂಖ್ಯೆ 28 ರಿಂದ 42ಕ್ಕೆ ಏರಿಕೆ – ದಕ್ಷಿಣ ಭಾರತದ ರಾಜ್ಯಗಳಲ್ಲಿ ಎಷ್ಟು ಸೀಟ್‌ ಹೆಚ್ಚಳ?

Public TV
By Public TV
2 hours ago
Tejasvi Surya 1
Latest

ನಮ್ಗೆ 1 ವೋಟು, ಅಂಬಾನಿಗೆ 1 ಲಕ್ಷ ವೋಟ್‌ ಇರುತ್ತಾ? – ವಿಪಕ್ಷಗಳಿಗೆ ತೇಜಸ್ವಿ ಸೂರ್ಯ ತರಾಟೆ

Public TV
By Public TV
2 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?