ಹೆಚ್‍ಡಿಡಿಯಿಂದ ಸಿಎಂ ಮನೆ ಮುಂದೆ ಧರಣಿ ನಡೆಸೋ ಎಚ್ಚರಿಕೆ

Advertisements

ಬೆಂಗಳೂರು: ಜೆಡಿಎಸ್ ಶಾಸಕರ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಮಾಡದೇ ಇದ್ದರೆ ಮುಖ್ಯಮಂತ್ರಿ ಮನೆ ಎದುರು ಧರಣಿ ನಡೆಸುವುದಾಗಿ ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಎಚ್ಚರಿಕೆ ನೀಡಿದ್ದಾರೆ.

Advertisements

ಜೆಡಿಎಸ್ ಶಾಸಕ ಮಂಜುನಾಥ್ ಪ್ರತಿನಿಧಿಸುವ ಬೆಂಗಳೂರಿನ ದಾಸರಹಳ್ಳಿ ವಿಧಾನಸಭಾ ಕ್ಷೇತ್ರಕ್ಕೆ ಅನುದಾನ ಬಿಡುಗಡೆ ಆಗುತ್ತಿಲ್ಲ ಎಂಬ ಆರೋಪ ಕೇಳಿಬಂದಿತ್ತು. ಈ ಹಿನ್ನೆಲೆಯಲ್ಲಿ ಅನುದಾನ ಇಲ್ಲದೇ ಗುಂಡಿಬಿದ್ದಿರುವ ದಾಸಹರಳ್ಳಿ ಕ್ಷೇತ್ರದ ರಸ್ತೆಗಳನ್ನು ದೇವೇಗೌಡರು ಭೇಟಿ ನೀಡಿ ವೀಕ್ಷಿಸಿದರು. ಇದನ್ನೂ ಓದಿ: ದಲಿತರೇ ಮುಂದಿನ ಸಿಎಂ ಅಂತ ಘೋಷಿಸುವಷ್ಟು ಪ್ರೀತಿ ಇದ್ಯಾ – ಸಿದ್ದುಗೆ ಬಿಜೆಪಿ ಪ್ರಶ್ನೆ

Advertisements

ಬಳಿಕ ಪ್ರತಿಕ್ರಿಯಿಸಿದ ದೇವೇಗೌಡರು, ದಾಸರಹಳ್ಳಿ ಕ್ಷೇತ್ರದ ಅಭಿವೃದ್ಧಿ ಆಗ್ಬೇಕು. ಆದರೆ ಅಭಿವೃದ್ಧಿ ಸಹಿಸಲಾಗದೇ ಹೇಡಿಗಳು ಪ್ರತಿಯೊಂದಕ್ಕೂ ಅಡ್ಡಿಪಡಿಸುತ್ತಿದ್ದಾರೆ. ಸಿಎಂ ಬಳಿ ನಾನೇ ಹೋಗುತ್ತೇನೆ, ಅನುದಾನ ನೀಡುವಂತೆ ಮನವಿ ಮಾಡುತ್ತೇನೆ. ಅನುದಾನದಲ್ಲಿ ರಾಜಕೀಯ ಮಾಡಿದ್ರೆ ಧರಣಿ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

Advertisements
Advertisements
Exit mobile version